Bharat Rice
ಲೋಕಸಭೆ ಚುನಾವಣೆ(Lok Sabha Elections)ಯಲ್ಲಿ ಗೆಲ್ಲಲು ಮತದಾರರನ್ನು ಸೆಳೆಯುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಭಾರತ್ ರೈಸ್(Baharat Rice) ಯೋಜನೆಯನ್ನು ಕೇಂದ್ರ ಸರ್ಕಾರ(Central Govt) ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಣೆಯ ಉದ್ದೇಶದಿಂದ ಎಲ್ಲಾ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಭಾರತ್ ರೈಸ್ ಅನ್ನು ಬಿಡುಗಡೆ ಮಾಡಿತ್ತು.
ಹೌದು, ದೇಶದಲ್ಲಿ ಹೆಚ್ಚುತ್ತಿರುವ ಅಕ್ಕಿ(Rice) ಬೆಲೆ ನಿಯಂತ್ರಣಕ್ಕಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್(Baharat Rice) ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈ ಮೂಲಕ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಅಕ್ಕಿಯ ಬೆಲೆಯ ವಿಚಾರವಾಗಿ ಸರ್ಕಾರ ಬಿಗ್ ರಿಲೀಫ್ ನೀಡಿತ್ತು. ಹೀಗಾಗಿ, ಜನರು ಭಾರತ್ ರೈಸ್ ಅನ್ನು ಅಗ್ಗದ ದರದಲ್ಲಿ ಖರೀದಿಸುತ್ತಿದ್ದರು.
ಭಾರತ್ ಬ್ರಾಂಡ್(Bharat Brand) ನ ಮೂಲಕ ಭಾರತ್ ರೈಸ್(Baharat Rice), ಭಾರತ್ ಹಿಟ್ಟು(Bharat flour) ಮತ್ತು ಭಾರತ್ ಬೇಳೆ(Bharat gram)ಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಭಾರತ್ ರೈಸ್ ಖರೀದಿಸುವವರಿಗೆ ಶಾಕ್ ನೀಡಿದೆ. ಇನ್ನುಮುಂದೆ ಜನಸಾಮಾನ್ಯರು ಕಡಿಮೆ ದರದಲ್ಲಿ ಭಾರತ್ ಅಕ್ಕಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಕೇಂದ್ರ ಸರ್ಕಾರದ ಹೊಸ ರೂಲ್ಸ್
ಯೋಜನೆಯಡಿ ಪ್ರತಿ ಕೆಜಿ ಅಕ್ಕಿಗೆ 29 ರೂ. 27.50 ರೂ. ಗೆ ಗೋಧಿ ಹಿಟ್ಟು, ಕಡೆಲೆಕಾಯಿಗೆ 60 ರೂಪಾಯಿಗೆ ವಿತರಿಸಲಾಯಿತು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ವಿತರಿಸುವ ಯೋಜನೆ ಇದಾಗಿತ್ತು. ಭಾರತ್ ಅಕ್ಕಿಗೂ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಇದ್ದಕ್ಕಿದ್ದಂತೆ ಯೋಜನೆ ರದ್ದಾಗಿದೆ. ಕೇಂದ್ರದ ಆದೇಶದಂತೆ ಜೂ.10 ರವರೆಗೆ ಸಾಮಗ್ರಿ ಪೂರೈಕೆಯಾಗಿದ್ದು, ನಂತರ ಸಾಮಗ್ರಿ ಪೂರೈಕೆಯಾಗದ ಕಾರಣ ವಿತರಣೆ ಸ್ಥಗಿತಗೊಳಿಸಲಾಗಿದೆ.
ದೂರದ ಪ್ರದೇಶಗಳಿಗೆ ದಿನಸಿಗಳನ್ನು ತಲುಪಿಸುವ ಉದ್ದೇಶದಿಂದ ಆನ್‌ಲೈನ್ ಆರ್ಡರ್ ವ್ಯವಸ್ಥೆ ಕೂಡ ಮಾಡಿತ್ತು. ಆದರೀಗ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ದೊರೆಯುತ್ತಿದ್ದ ಸಬ್ಸಿಡಿ ಅಕ್ಕಿ ಆನ್‌ಲೈನ್‌ನಲ್ಲಿಯೂ ಲಭ್ಯವಿಲ್ಲ. ಫೆಬ್ರವರಿಯಲ್ಲಿ ಸರ್ಕಾರ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳನ್ನು ಬೆಂಬಲಿಸಲು ಭಾರತ್ ರೈಸ್ ಅನ್ನು ಪರಿಚಯಿಸಿತು.
ಇದರ ಬೆಲೆ ಒಂದು ಕಿಲೋಗ್ರಾಂಗೆ ಕೇವಲ 29 ರೂಪಾಯಿ ಮಾತ್ರ. ಈ ಯೋಜನೆ ಬಡ ಕುಟುಂಬಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿತ್ತು. ಆದರೀಗ ಭಾರತ್ ರೈಸ್ ಮಾರಾಟವನ್ನು ಜುಲೈ ತಿಂಗಳಿಂದ ಸ್ಥಗಿತ ಮಾಡಲಾಗಿದೆ. ಸರ್ಕಾರದ ಅಚ್ಚರಿಯ ಈ ಕ್ರಮ ಗ್ರಾಹಕರನ್ನು ತತ್ತರಿಸುವಂತೆ ಮಾಡಿದೆ. ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಮಾರಾಟದ ಜವಬ್ದಾರಿಯನ್ನು ವಹಿಸಿತ್ತು.
ಸಬ್ಸಿಡಿ ಭಾರತ್ ರೈಸ್ ಅನ್ನು NAFED, NCCF ಮತ್ತು ಕೇಂದ್ರೀಯ ಭಂಡಾರ್‌ನಿಂದ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಜನ ದಿನಸಿಯನ್ನು ಖರೀದಿ ಮಾಡುತ್ತಿದ್ದರು. ಹೆಚ್ಚುವರಿಯಾಗಿ ಫ್ಲಿಪ್‌ಕಾರ್ಟ್ ಮತ್ತು ಬಿಗ್ ಬಾಸ್ಕೆಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತ್ ರೈಸ್ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಯೋಜಿಸಿತ್ತು. ಆದರೀಗ ಈ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಇದನ್ನು ನಂಬಿಕೊಂಡಿದ್ದ ಜನರು ಕಂಗಾಲಾಗಿದ್ದಾರೆ.
ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಸುಮಾರು 5 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಸಹಕಾರಿ ಸಂಘಗಳಾದ NAFED, NCCF ಮತ್ತು ಕೇಂದ್ರೀಯ ಭಂಡಾರ್‌ಗಳಿಗೆ ವಿತರಣೆಗಾಗಿ ಸರಬರಾಜು ಮಾಡಿದೆ. ಭಾರತ್ ರೈಸ್ 5 ಕೆಜಿ ಮತ್ತು 10 ಕೆಜಿ ಪ್ಯಾಕೇಜ್‌ಗಳಲ್ಲಿ ಲಭ್ಯವಿತ್ತು. ಆದರೀಗ ಏಕಾಏಕಿ ಕಡಿಮೆ ಬೆಲೆಯಲ್ಲಿ ಅಕ್ಕಿ ಸೇರಿದಂತೆ ಇತರೆ ದಿನಸಿ ವಿತರಿಸುವುದನ್ನು ತಿನ್ನಿಸಿರುವುದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ.