BIS Jobs
ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆಲ್ಲಾ ಈ ಲೇಖನದ ಮೂಲಕ ಒಂದು ಪ್ರಮುಖವಾದ ಅಪ್ಡೇಟ್ ನ್ನು ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಡಿಯಲ್ಲಿ ಕಾರ್ಯ ನಿರ್ವಹಿಸುವಂತಹ ಬ್ಯೋರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS Recruitment) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿ ಈ ನೇಮಕಾತಿ ಕುರಿತ ಪ್ರಕಟಣೆ ಹೊರಡಿಸಿದೆ.
ರಾಜ್ಯದ ಎಲ್ಲಾ ಅರ್ಹ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದು. ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೇಮಕಾತಿ ಕುರಿತ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ತಿಳಿಸಿ.
ನೇಮಕಾತಿ ಸಂಸ್ಥೆ:- ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS)
ಉದ್ಯೋಗ ಸಂಸ್ಥೆ:- ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 345 ಹುದ್ದೆಗಳು
ಈ ಸುದ್ದಿ ಓದಿ:- Sukanya Samruddi Scheme: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ, ಅಕ್ಟೋಬರ್ 1 ರಿಂದಲೇ ಹೊಸ ನಿಯಮ ಜಾರಿ.!
ಹುದ್ದೆಗಳ ವಿವರ:-
* ಅಸಿಸ್ಟೆಂಟ್ ಡೈರೆಕ್ಟರ್ – 3 ಹುದ್ದೆಗಳು
* ಪರ್ಸನಲ್ ಅಸಿಸ್ಟೆಂಟ್ – 27 ಹುದ್ದೆಗಳು
* ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO) – 43 ಹುದ್ದೆಗಳು
* ಸಹಾಯಕ (CAD) – 19 ಹುದ್ದೆಗಳು
* ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ – 128 ಹುದ್ದೆಗಳು
* ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ – 78 ಹುದ್ದೆಗಳು
* ತಾಂತ್ರಿಕ ಸಹಾಯಕ – 27 ಹುದ್ದೆಗಳು
* ಟೆಕ್ನಿಷಿಯನ್ – 1 ಹುದ್ದೆ
ವೇತನ ಶ್ರೇಣಿ:- ಆಯಾ ಹುದ್ದೆಗಳಿಗೆ ಅನುಗುಣವಾಗಿ ಅತ್ಯುತ್ತಮ ಮಾಸಿಕ ವೇತನ ಮತ್ತು ಇನ್ನಿತರ ಸರ್ಕಾರ ಸೌಲಭ್ಯಗಳು ದೊರೆಯುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:-
* ಅಸಿಸ್ಟೆಂಟ್ ಡೈರೆಕ್ಟರ್ – CA
* ಪರ್ಸನಲ್ ಅಸಿಸ್ಟೆಂಟ್ – ಯಾವುದೇ ಪದವಿ
* ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO) – ಯಾವುದೇ ಪದವಿ
* ಸಹಾಯಕ (CAD) – ಯಾವುದೇ ಪದವಿ
* ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ – ಯಾವುದೇ ಪದವಿ
* ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ – ಯಾವುದೇ ಪದವಿ
* ತಾಂತ್ರಿಕ ಸಹಾಯಕ – ಡಿಪ್ಲೋಮಾ ಪದವಿ
* ಟೆಕ್ನಿಷಿಯನ್ – 10 ನೇ ತರಗತಿ
ಈ ಸುದ್ದಿ ಓದಿ:- Post office: ಪೋಸ್ಟ್ ಆಫೀಸ್ ನಲ್ಲಿ 500 ರೂಪಾಯಿ ಕಟ್ಟಿ ಸಾಕು 35,000 ಸಿಗಲಿದೆ.!
ವಯೋಮಿತಿ:-
* ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ನಿರ್ಧರಿಸಲಾಗಿದೆ
* ಆ ಪ್ರಕಾರವಾಗಿ ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 27 ರಿಂದ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC/ST ಅಭ್ಯರ್ಥಿಗಳಿಗೆ 5 ವರ್ಷಗಳು
* OBC ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* BIS ಅಧಿಕೃತ ವೆಬ್ಸೈಟ್ https://bis.gov.in ವೆಬ್ಸೈಟ್ಗೆ ತೆರಳಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಿ
* ನೀಡಿರುವ ಸೂಚನೆಗಳ ಪ್ರಕಾರ ಬಗ್ಗೆ ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ನಿಮ್ಮ ವರ್ಗಕ್ಕೆ ಅನುಗುಣವಾದ ಅರ್ಜಿ ಶುಲ್ಕವನ್ನು ಪಾವತಿಸಿ ತಪ್ಪದೇ ಅರ್ಜಿ ಸ್ವೀಕೃತಿ ಮತ್ತು ಅರ್ಜಿ ಶುಲ್ಕ ಪಾವತಿ ರಸೀದಿ ಪಡೆದುಕೊಳ್ಳಿ.
ಈ ಸುದ್ದಿ ಓದಿ:- Railway Recruitment:- ರೈಲ್ವೆ ಇಲಾಖೆ ಬೃಹತ್ ನೇಮಕಾತಿ, 11558 NTPC ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಅರ್ಜಿ ಶುಲ್ಕ:-
* ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು
* ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗಳಿಗೆ ರೂ.800
* ಉಳಿದ ಹುದ್ದೆಗಳಿಗೆ ರೂ.500
* SC/ST, ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:-
* ಆನ್ಲೈನ್ ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)
* ಸ್ಕಿಲ್ ಟೆಸ್ಟ್
* ದಾಖಲೆಗಳ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ
* ನೇರ ಸಂದರ್ಶನ