BPL ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್: ಇನ್ಮುಂದೆ ರೇಷನ್ ಅಂಗಡಿಗಳಲ್ಲಿ ಸಿರಿಧಾನ್ಯ, ಡೈರಿ ಉತ್ಪನ್ನ, ಬೇಳೆ ಕಾಳು ಸಿಗಲಿದೆ.!

BPL

ಪಡಿತರ ಅಂಗಡಿ(Ration shop)ಗಳ ಕಾರ್ಯಕ್ಷಮತೆ(Performance) ಹಾಗೂ ಪೌಷ್ಟಿಕಾಂಶದ ಲಭ್ಯತೆ(nutrient availability)ಯನ್ನು ಹೆಚ್ಚಿಸಲು ಅವುಗಳಲ್ಲಿ ಸಿರಿಧಾನ್ಯ(Cereal), ಬೇಳೆ ಕಾಳು, ಡೈರಿ ಉತ್ಪನ್ನ(Dairy product)ಗಳನ್ನು ಮಾರುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ(Pralhad Joshi) ಚಾಲನೆ ನೀಡಿದ್ದಾರೆ.

ಇದರ ಅಡಿಯಲ್ಲಿ ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ 60 ಪಡಿತರ ಅಂಗಡಿಗಳನ್ನು ‘ಜನ ಪೋಷಣಾ ಕೇಂದ್ರ(Jana Poshana Kendra)’ ಎಂದು ಹೆಸರಿಸಲಾಗಿದ್ದು, ಮೇಲ್ದರ್ಜೆಗೇರಿಸುವ ಪ್ರಾಯೋಗಿಕ ಯೋಜನೆಗೆ ಪ್ರಹ್ಲಾದ್ ಜೋಶಿ ಮಂಗಳವಾರ ಚಾಲನೆ ನೀಡಿದರು. ಇನ್ನೂ ಇದರಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ಜೋಶಿ ಹೇಳಿದ್ದಾರೆ.

WhatsApp Group Join Now
Telegram Group Join Now

‘ಕೆಲ ಪ್ರದೇಶಗಳಲ್ಲಿ ಪಡಿತರ ಅಂಗಡಿಗಳು ತಿಂಗಳಿಗೆ ಕೇವಲ 8ರಿಂದ 9 ದಿನಗಳು ತೆರೆದಿರುತ್ತವೆ. ಇನ್ನೂ ಕೆಲ ಕಡೆಗಳಲ್ಲಿ ತಿಂಗಳಿಗೊಂದು ಬಾರಿ ಕೆಲಸ ಮಾಡಿ ಉಳಿದೆಲ್ಲಾ ದಿನಗಳು ಮುಚ್ಚಿರುತ್ತವೆ. ಈಗಿರುವ ಪಡಿತರ ವಿತರಕರಿಗೆ ಸಂಬಂಧಿಸಿದ ಕಮಿಷನ್‌ ಪದ್ಧತಿ ಅಸಮರ್ಪಕವಾಗಿದ್ದು.

ಈ ಸುದ್ದಿ ಓದಿ:- Post Office: ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿದ್ರೆ 31 ಲಕ್ಷ ಸಿಗಲಿದೆ.!

ಲಭ್ಯವಿರುವ ಸ್ಥಳಾವಕಾಶ ಮತ್ತು ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ’ ಎಂದು ಸಚಿವರು ಅಭಿಪ್ರಾಯಪಟ್ಟರು. ಈ ಯೋಜನೆಯನ್ನು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರು ಸ್ವಾಗತಿಸಿದ್ದು, ದೇಶಾದ್ಯಂತವಿರುವ 5.38 ಲಕ್ಷ ಪಡಿತರ ಅಂಗಡಿಗಳು ಹೊಸ ರೂಪ ಪಡೆಯಲಿವೆ ಎಂದರು.

ಮುಂದಿನ 6 ತಿಂಗಳಲ್ಲಿ ಕನಿಷ್ಠ 1,000 ಮತ್ತು ವರ್ಷದಲ್ಲಿ 40,000-50,000 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸಚಿವಾಲಯ ಯೋಜಿಸಿದೆ. ಭಾರತದಾದ್ಯಂತ ಸರಿಸುಮಾರು 5.38 ಲಕ್ಷ ಎಫ್ಪಿಎಸ್ ಕಾರ್ಯನಿರ್ವಹಿಸುತ್ತಿದ್ದು, ಈ ಪ್ರಾಯೋಗಿಕ ಅನುಷ್ಠಾನವು ಪಡಿತರ ಅಂಗಡಿ ಜಾಲದ ರಾಷ್ಟ್ರವ್ಯಾಪಿ ಪರಿವರ್ತನೆಗೆ ದಾರಿ ಮಾಡಿಕೊಡುತ್ತದೆ ಎಂದು ಜೋಶಿ ಹೇಳಿದರು.

ಪ್ರಾಯೋಗಿಕ ಯೋಜನೆಯು ಎಫ್ಪಿಎಸ್ ವಿತರಕರಿಗೆ ಸಬ್ಸಿಡಿ ಧಾನ್ಯಗಳನ್ನು ಮೀರಿ ತಮ್ಮ ದಾಸ್ತಾನುಗಳನ್ನು ವೈವಿಧ್ಯಗೊಳಿಸಲು ಮತ್ತು ಇದನ್ನು ಪೌಷ್ಠಿಕಾಂಶದ ಕೇಂದ್ರವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ನವೀಕರಿಸಿದ ಅಂಗಡಿಗಳು ಈಗ ರಾಗಿ, ಬೇಳೆಕಾಳುಗಳು, ಡೈರಿ ಉತ್ಪನ್ನಗಳು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಬಹುದು, ಇದು ವಿತರಕರಿಗೆ ಹೊಸ ಆದಾಯದ ಹರಿವನ್ನು ತೆರೆಯುತ್ತದೆ ಎನ್ನಲಾಗಿದೆ.

ಈ ಸುದ್ದಿ ಓದಿ:- Vidyasiri Scholarship: ವಿದ್ಯಾಸಿರಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಕೆ ಪ್ರಾರಂಭ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಸ್ಕಾಲರ್ಶಿಪ್.!

ಇದರೊಂದಿಗೆ, ಜೋಶಿ ‘ಮೇರಾ ರೇಷನ್’ ಅಪ್ಲಿಕೇಶನ್ನ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದರು ಮತ್ತು ಗುಣಮಟ್ಟದ ಕೈಪಿಡಿ, ಭಾರತೀಯ ಆಹಾರ ನಿಗಮದ (ಎಫ್ಸಿಐ) ಗುತ್ತಿಗೆ ಕೈಪಿಡಿ, ಡಿಜಿಟಲ್ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮತ್ತು ಪ್ರಯೋಗಾಲಯಗಳ ಎನ್‌ಎಬಿಎಲ್ ಮಾನ್ಯತೆಯನ್ನು ಅನಾವರಣಗೊಳಿಸಿದರು.

ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಶೇ 93ರಷ್ಟು ಫಲಾನುಭವಿಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಿಗೆ, 5 ಕೆಜಿ ಅಕ್ಕಿ ಜತೆಗೆ ಇತರೆ ಅಗತ್ಯ ವಸ್ತುಗಳನ್ನು ಪಡೆಯಲು ಆಸಕ್ತಿ ತೋರಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಕೆಲ ದಿನಗಳ ಹಿಂದೆ ತಿಳಿಸಿದ್ದಾರೆ.

ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ. ನವದೆಹಲಿಯಲ್ಲಿರುವ ಮುನಿಯಪ್ಪ ಮಂಗಳವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿ:- Voter ID List : ಇಂದಿನಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ & ತಿದ್ದುಪಡಿ ಆರಂಭ.!

ಹೀಗಾಗಿ, ಈಗಾಗ್ಲೇ ಸರ್ವೇ ಮಾಡಿರುವ ಹಾಗೇ ಅಕ್ಕಿ ಬದಲು ಬೆಳೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಇಡೀ ರಾಜ್ಯದಲ್ಲಿ ಸರ್ವೇ ಮಾಡಲಾಗಿದೆ. ಸರ್ವೇಯಲ್ಲಿ ಶೇಕಡಾ 93% ರಷ್ಟು ಜನರುಅಕ್ಕಿಯ ಜೊತೆಗೆ ಬೆಳೆ ಹಾಗೂ ಇನ್ನಿತರೇ ಸಾಮಗ್ರಿಗಳನ್ನು ಕೊಡಲು ಮನವಿ ಮಾಡಿದ್ದಾರೆಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ BPL ಕಾರ್ಡ್ ದಾರರಿಗೆ ಅಕ್ಕಿ ಜೊತೆಗೆ ಬೆಳೆ ಕೊಡಲಾಗುತ್ತೆ. ಈಗಾಗ್ಲೇ ಇಡೀ ರಾಜ್ಯದಲ್ಲಿ ಸುಮಾರು 1.24ಕೋಟಿ BPL ಕಾರ್ಡ್ದಾರರು ಇದ್ದಾರೆ. ಹೀಗಾಗಿ, ಈ ಎಲ್ಲಾ ಕಾರ್ಡ್ದಾರರಿಗೆ ಇದ್ರಿಂದ ಪ್ರಯೋಜನ ಆಗಲಿದೆ,

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment