Bus Ticket Price: ಬಸ್ ಟಿಕೆಟ್ ದರ ಹೆಚ್ಚಳ.! ಸಾರಿಗೆ ಸಚಿವರಿಂದ ಅಧಿಕೃತ ಘೋಷಣೆ.!

Bus Ticket Price Increase

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bangalore Metropolitan Transport Corporation – ಬಿಎಂಟಿಸಿ) ಪ್ರಯಾಣ ದರ (Ticket Price) ಏರಿಕೆಯಾಗಲಿದೆ. ಎಲ್ಲಾ ಮಾದರಿ ಬಸ್‌ಗಳಲ್ಲಿ ಅಲ್ಲ, ನೈಸ್ ರಸ್ತೆಯಲ್ಲಿ ಸಂಚಾರ ನಡೆಸುವ ಬಸ್‌ಗಳಿಗೆ ಮಾತ್ರ ಅನ್ವಯವಾಗುವಂತೆ ದರ ಏರಿಕೆಯಾಗಲಿದೆ. ಇದರಿಂದ ಟಿಕೆಟ್ ದರ ಕೂಡ ಏರಿಕೆಯಾಗಿ ಪ್ರಯಾಣಿಕರಿಗೆ ಬಿಗ್‌ ಶಾಕ್‌ ನೀಡಿದೆ.

ಹೌದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (National Highway Authority – NHAI) ಇದೇ ತಿಂಗಳ ಜುಲೈ 1 ರಿಂದ ನೈಸ್ ರಸ್ತೆ ಟೋಲ್ ದರ (Nice Road Toll Rate) ಹೆಚ್ಚಿಸಿರುವ ಬೆನ್ನಲ್ಲೇ, ಬಿಎಂಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ. ನೈಸ್ ರೋಡ್ ಟೋಲ್‌ನಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ಟಿಕೆಟ್ ದರ (BMTC Ticket Price) ಏರಿಸಲಾಗತ್ತಿದೆ.

WhatsApp Group Join Now
Telegram Group Join Now

ಮಾದಾವರ ಟು ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಬಿಎಂಟಿಸಿ ಬಸ್ ದರ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರತಿದಿನ ಮಾದಾವರದಿಂದ ಎಲೆಕ್ಟ್ರಾನಿಕ್‌ ಸಿಟಿಗೆ 21 ಬಿಎಂಟಿಸಿ ಬಸ್‌ಗಳನ್ನು 170 ಟ್ರಿಪ್‌ಗಳಲ್ಲಿ ಓಡಿಸಲಾಗುತ್ತಿದೆ. ಪ್ರಸ್ತುತ ಟಿಕೆಟ್ ದರ 60 ರೂಪಾಯಿ ಇದೆ. ಇದರಲ್ಲಿ ಟೋಲ್ ದರ 25 ರೂ. ಸಹ ಸೇರಿದೆ.

ಈ ಸುದ್ದಿ ಓದಿ:- Today Gold Rate: ಚಿನ್ನದ ಬೆಲೆಯಲ್ಲಿ 4500 ರೂಪಾಯಿ ಇಳಿಕೆ.!

ಈ ಟೋಲ್ ದರ ಏರಿಕೆಯಿಂದ 5 ರೂ. ಹೆಚ್ಚಳವಾಗೋ ಸಾಧ್ಯತೆಯಿದ ಎಂದು ಸಚಿವರು ಹೇಳಿದ್ದಾರೆ. ಬಿಎಂಟಿಸಿ ಬಸ್‌ ನೈಸ್ ರಸ್ತೆಯಲ್ಲಿ ಸಂಚರಿಸಲು ಒಂದು ಟ್ರಿಪ್‌ಗೆ 675 ರೂ. ಟೋಲ್ ನೀಡಬೇಕಿತ್ತು. ಜುಲೈ 1ರಿಂದ ಟೋಲ್‌ ದರ ಹೆಚ್ಚಾಗಿರುವುದರಿಂದ ಒಂದು ಬಸ್ ಟ್ರೀಪ್‌ಗೆ 785 ರೂ. ಟೋಲ್ ನೀಡಲಾಗುತ್ತಿದೆ. ಅಂದರೆ ಪ್ರತೀ ಟ್ರೀಪ್‌ಗೆ 110 ರೂ. ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಬಸ್ ದರ ಏರಿಕೆ ಮಾಡಿಲ್ಲ. ಆದ್ರೆ ಟೋಲ್‌ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ನೈಸ್ ರೋಡ್ ಟೋಲ್ ನಲ್ಲಿ ಸಂಚರಿಸೋ ಬಸ್ ದರ ಏರಿಕೆ ಆಗಿದೆ. ಎಲ್ಲಿ ಟೋಲ್‌ ಸಿಗುತ್ತೋ ಅಲ್ಲಿ ಬಸ್‌ ಸೀಟುಗಳನ್ನು ಡಿವೈಡ್ ಮಾಡತ್ತೇವೆ. ಟೋಲ್ ರೇಟ್ ಎಷ್ಟು ಜಾಸ್ತಿ ಮಾಡಿರುವ ಕಾರಣ ಅಷ್ಟು ದರವನ್ನ ಗ್ರಾಹಕರಿಂದ ಸಂಗ್ರಹಿಸುತ್ತೇವೆ.

ಬಿಎಂಟಿಸಿ ಬಸ್‌ಗಳಿ ಗಳಿಗೆ ರಿಯಾಯಿತಿ ನೀಡಿ ಅಂತಾ ಎಂಡಿಯಿಂದ ಎರಡು ಸಲ ಪತ್ರ ಬರೆದಿದ್ದಾರೆ. ಯಾವುದಕ್ಕೂ ಉತ್ತರ ಬಂದಿಲ್ಲ. ಹಾಗಾಗಿ ಇದು ಬಸ್‌ ದರ ಏರಿಕೆಯಲ್ಲ, ಟೋಲ್‌ ಸೇರಿಸುತ್ತಿದ್ದೇವೆ ಅಷ್ಟೇ ಎಂದು ಮಾಹಿತಿ ನೀಡಿದ್ದಾರೆ. ಸಾಮಾನ್ಯ ಮಾಸಿಕ ಪಾಸು ದರ ಟೋಲ್ ಶುಲ್ಕ ಒಳಗೊಂಡಂತೆ ರೂ. 2000.

ಈ ಸುದ್ದಿ ಓದಿ:- Gas:‌ ಗೃಹಿಣಿಯರಿಗೆ ಗುಡ್‌ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಇಳಿಕೆ.!

ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುದಾರರು ಸಂಸ್ಥೆಯ ಇತರ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುದಾರರು ನೈಸ್ ರಸ್ತೆಯನ್ನು ಹೊರತುಪಡಿಸಿ, ಇತರೆ ಮಾರ್ಗಗಳಲ್ಲಿ ಪ್ರಯಾಣಿಸುವಾಗ ಅನ್ವಯಿಸುವ ಟೋಲ್ ಶುಲ್ಕ ಹಾಗೂ ಅನ್ವಯವಾಗುವ ಇತರ ಶುಲ್ಕಗಳನ್ನು ಪಾವತಿಸಬೇಕು.

ನೈಸ್‌ರೋಡ್‌ನಲ್ಲಿ ಟೋಲ್‌ ಹೆಚ್ಚಳ – ಯಾವುದಕ್ಕೆ ಎಷ್ಟು?

* ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗಿನ 9 ಕಿಮೀ ಉದ್ದದ ಕಾರ್ ಟೋಲ್ 50 ರೂ. ನಿಂದ 60 ರೂ.ಗೆ ಹೆಚ್ಚಳ
* ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ 40 ರೂ. ನಿಂದ 45 ರೂ.ಗೆ ಹೆಚ್ಚಳ
* ಕಾರುಗಳಿಗೆ, ಟೋಲ್ ಶುಲ್ಕ 5 ರೂ.ನಿಂದ 10 ರೂ. ವರೆಗೆ ಹೆಚ್ಚಳ
* ಬಿಎಂಟಿಸಿ ಬಸ್ ಪ್ರತಿ ಟ್ರೀಪ್‌ಗೆ 675 ರೂ.ನಿಂದ 785 ರೂ. ವರೆಗೆ ಹೆಚ್ಚಳ
* ದ್ವಿಚಕ್ರ ವಾಹನ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment