Business
ಹಳ್ಳಿಯಲ್ಲಿ ಇರುವವರಿಂದ ಹಿಡಿದು ಪಟ್ಟಣದಲ್ಲಿರುವ ಗೃಹಿಣಿಯರು, ನಿವೃತ್ತಿ ಹೊಂದಿದವರು ಮತ್ತು ಕಾಲೇಜುಗೆ ಹೋಗುವ ಮಕ್ಕಳು ಮಾಡಬಹುದಾದ ಬಿಸಿನೆಸ್ ಒಂದಿದೆ. ಇದನ್ನು ಪಾರ್ಟ್ ಟೈಮ್ ಬೇಕಾದರೂ ಮಾಡಬಹುದು ಅಥವಾ ಫುಲ್ ಟೈಮ್ ಆದರೂ ಮಾಡಿ ದೊಡ್ಡ ಮೊತ್ತದ ಲಾಭ ಮಾಡಬಹುದು.
ಯಾವುದೇ ಬಿಸಿನೆಸ್ ಗೂ ಕಡಿಮೆ ಇಲ್ಲದಂತೆ ಸದಾ ಕಾಲ ಬೇಡಿಕೆಯಲ್ಲಿರುವ ಬಿಸಿನೆಸ್ ಇದಾಗಿದ್ದು ಇದನ್ನು ಮನೆಯಲ್ಲಿ ಮಾಡಿ ಮಾರಾಟ ಮಾಡಬಹುದು. ಕಡಿಮೆ ಹಣದಲ್ಲಿ ಅತಿ ಹೆಚ್ಚು ಲಾಭ ಕೊಡುವ ಮತ್ತು ಹೆಚ್ಚಿಗೆ ಸ್ಥಳಾವಕಾಶ ಅಥವಾ ಇನ್ಯಾವುದೇ ದೊಡ್ಡ ಮಟ್ಟದ ಬೇಡಿಕೆ ಇಲ್ಲದಂತಹ ಬಿಸಿನೆಸ್ ಇದಾಗಿದೆ. ಇದು ಬೇರೆ ಯಾವುದು ಅಲ್ಲ ನೂಡಲ್ಸ್ ಪ್ಯಾಕ್ ಮಾಡಿ ಮಾರುವ ಬಿಸಿನೆಸ್.
ಮಾರ್ಕೆಟ್ ನಲ್ಲಿ ರೂ.2,500 – 3,000 ಬೆಲೆಗೆ ನೂಡಲ್ಸ್ ಮೇಕಿಂಗ್ ಮಿಷನ್ ಸಿಗುತ್ತದೆ. ಇದರಲ್ಲಿ ಆಟೋಮೆಟಿಕ್ ಮ್ಯಾನುವಲ್ ಈ ರೀತಿ ಐದಾರು ಬಗೆ ಇದ್ದೇ ಇರುತ್ತದೆ. ನಿಮ್ಮ ಬಜೆಟ್ ಗೆ ತಕ್ಕ ಹಾಗೆ ಒಂದು ಮಿಷನ್ ಖರೀದಿಸಿ ನೀವು ಮನೆಯಲ್ಲಿಯೇ ನೂಡಲ್ಸ್ ತಯಾರಿಸಬಹುದು.
ನೂಡಲ್ಸ್ ತಯಾರಿಸುವುದು ಕೂಡ ಬಹಳ ಸುಲಭ ಗೋಧಿ ಹಿಟ್ಟಿಗೆ ಸ್ವಲ್ಪ ಅರಿಶಿನ ಪುಡಿ ಮತ್ತು ಎಣ್ಣೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಆ ಮಿಷನ್ ಗೆ ಹಾಕಿ ರೋಟೆಟ್ ಮಾಡಿದರೆ ಮೊದಲಿಗೆ ತೆಳು ಹಾಳೆ ರೀತಿಯಲ್ಲಿ ರೋಲ್ ರೆಡಿ ಆಗುತ್ತದೆ ಅದನ್ನು ಮತ್ತೊಮ್ಮೆ ಪ್ಲೇಟ್ ಬದಲಾಯಿಸಿ ಹಾಕಿ ಪ್ರೆಸ್ ಮಾಡಿದರೆ ನೂಡಲ್ಸ್ ಶೇಪ್ ನಲ್ಲಿ ಬರುತ್ತದೆ ಅದನ್ನು ಒಣಗಿಸಿ ಪ್ಯಾಕ್ ಮಾಡಿದರೆ ಸಾಕು.
ಪ್ಯಾಕ್ ಮಾಡುವುದಕ್ಕೆ ಸಪರೇಟ್ ಮಿಷನ್ ಬರುತ್ತದೆ ಮತ್ತು ನೀವು ಪ್ಯಾಕ್ ಮಾಡುವುದಕ್ಕೆ ಕವರ್ ಕೂಡ ನಿಮ್ಮದೇ ಇಟ್ಟು ಬ್ರಾಂಡಿಂಗ್ ಮಾಡಲು ಇಚ್ಚಿಸಿದರೆ ಇದು ಕೂಡ ಬೆಸ್ಟ್ ಐಡಿಯಾ. ಲಾಭದ ವಿಚಾರ ನೋಡುವುದಾದರೆ ಉದಾಹರಣೆಗೆ 1Kg ಗೋಧಿ ಹಿಟ್ಟಿನಲ್ಲಿ ತಯಾರಾಗುವ ನೂಡಲ್ಸ್ ನ್ನು 80 ರಿಂದ 100 ಪ್ಯಾಕ್ ಮಾಡಿ 5 ರೂಪಾಯಿಗೆ ಮಾರಿದರು ಕೂಡ ನಿಮ್ಮ ಬಂಡವಾಳ ಹಾಗೂ ಶ್ರಮದ ಖರ್ಚನ್ನು ಬಿಟ್ಟು ಬಹಳ ದೊಡ್ಡ ಮೊತ್ತದ ಹಣ ಲಾಭ ಪಡೆಯುತ್ತೀರಿ.
ಒಂದು Kgಗೆ ರೂ.300 ರಿಂದ 500 ವರೆಗೆ ನೀವು ಲಾಭ ಮಾಡಬಹುದು. ಈ ರೀತಿ ದಿನದಲ್ಲಿ 5 – 10Kg ಮಾಡಿದರೆ ಲಕ್ಷಗಟ್ಟಲೆ ಹಣ ದುಡಿಯಬಹುದು. ಇನ್ನು ನೀವು ಕ್ವಾಲಿಟಿ ಮತ್ತು ಕ್ವಾಂಟಿಟಿ ಚೆನ್ನಾಗಿ ಕೊಟ್ಟರೆ ನಿಮ್ಮ ಬ್ರಾಂಡ್ ಹೆಸರು ಮಾಡಿದರೆ ಮನೆ ಬಳಿಗೆ ಬಂದು ಖರೀದಿಸುತ್ತಾರೆ.
ನ್ಯೂಡಲ್ಸ್ ಗೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರಿಗೆ ಎಲ್ಲರೂ ಆಸೆಪಟ್ಟು ತಿನ್ನುತ್ತಾರೆ. ಹಸಿವಾದಾಗ ಬೆಳಗ್ಗೆ ಟಿಫನ್ ಗಾಗಿ ಮಧ್ಯಾಹ್ನ ಬಾಕ್ಸ್ ಗಾಗಿ ಸಂಜೆ ಸ್ನಾಕ್ಸ್ ಗಾಗಿ ರಜಾ ದಿನಗಳಲ್ಲಿ ಫ್ರೆಂಡ್ಸ್ ಬಂದಾಗ ಈ ರೀತಿ ನೆಪ ಮಾಡಿಕೊಂಡು ನಾಲಿಗೆಗೆ ರುಚಿ ಕೊಡುವ ನೂಡಲ್ಸ್ ನ್ನು ಚಪ್ಪಲಿಸುತ್ತೇವೆ.
ಹಾಗಾಗಿ ಇದು ಲಾಭ ಕೊಡುವ ಬಿಸಿನೆಸ್ ಎಂದು ಲೆಕ್ಕಾಚಾರ ಮಾಡಬಹುದು. ಒಮ್ಮೆ ಈ ಮಿಷನ್ ಗೆ ಬಂಡವಾಳ ಹಾಕಿ ಖರೀದಿಸಿದರೆ ಸಾಕು ಮೊದಮೊದಲಿಗೆ ನೀವು ಕಿರಾಣಿ ಅಂಗಡಿಗಳು, ಹೋಟೆಲ್ ಗಳು, ಚಾಟ್ಸ್ ಸೆಂಟರ್ಗಳು ಇವರಿಗೆ ಪರಿಚಯ ಮಾಡಿಕೊಂಡು ಮಾರಾಟ ಮಾಡಿ ನಿಮ್ಮ ಬ್ರಾಂಡ್ ಚೆನ್ನಾಗಿದ್ದರೆ ನಂತರ ದೊಡ್ಡ ದೊಡ್ಡ ಕಂಪನಿಗಳು ಬಂದು ಖರೀದಿಸುತ್ತಾರೆ ಆನ್ಲೈನಲ್ಲಿ ಕೂಡ ನೀವು ಮಾರ್ಕೆಟಿಂಗ್ ಮಾಡಿಕೊಳ್ಳಬಹುದು.