Canara Bank: ‌ಕೆನರಾ ಬ್ಯಾಂಕ್’ನಲ್ಲಿ 3 ಲಕ್ಷ ಡೆಪಾಸಿಟ್ ಇಟ್ರೆ ನಿಮಗೆ ಸಿಗಲಿದೆ ಕೈ ತುಂಬಾ ಹಣ.!

Canada Bank Fixed Deposit

ನಮ್ಮ ದೇಶದಲ್ಲಿ ಹಲವು ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ವ್ಯವಹರಿಸುತ್ತವೆ. ಇವುಗಳು ತಮ್ಮದೇ ಆದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಅಷ್ಟೇ ಅಲ್ಲದೇ, ಸಾಮಾನ್ಯ ಜನರು ಸಹ ವ್ಯವಹರಿಸುವಾಗ ಕೆಲವೊಂದು ಬ್ಯಾಂಕ್‌ಗಳ ಮೇಲೆ ನಂಬಿಕೆ ಇಟ್ಟು ಅಲ್ಲೇ ತಮ್ಮ ವ್ಯವಹಾರವನ್ನು ನಿರ್ವಹಿಸುತ್ತಾರೆ.

ಇನ್ನು ನಮ್ಮ ದೇಶದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದಾಗಿದೆ. ಈ ಒಂದು ಬ್ಯಾಂಕ್ ನಲ್ಲಿ ಗ್ರಾಹಕರಿಗೆ ನೀಡುವ ಸೇವೆ ಉತ್ತಮವಾಗಿದೆ ಎಂದು ಜನರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಗಳಲ್ಲಿ ಇದು ಕೂಡ ಒಂದು ಎಂದು ಹೇಳಿದರೆ ತಪ್ಪಲ್ಲ. ಕೆನರಾ ಬ್ಯಾಂಕ್ ನಲ್ಲಿ ತಮ್ಮ ಗ್ರಾಹಕರಿಗೆ ಅನುಕೂಲ ಅಗುವಂಥ ಹಲವು ಯೋಜನೆಗಳಿವೆ.

WhatsApp Group Join Now
Telegram Group Join Now

ಈ ಬ್ಯಾಂಕ್ ನಲ್ಲಿ FD ಯೋಜನೆಗಳ ಸೌಲಭ್ಯ ಪ್ರಮುಖವಾದದ್ದು, ಹಲವು ದಿನಗಳ ಹೂಡಿಕೆಗೆ FD ಯೋಜನೆಗಳಿದ್ದು, ಉತ್ತಮವಾದ ಹೂಡಿಕೆಯ ಆಯ್ಕೆಯನ್ನು ಸಹ ಹೊಂದಿದೆ. ಒಂದು ವೇಳೆ ನೀವು ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಅದರಲ್ಲೂ 444 ದಿನಗಳ FD ಯೋಜನೆಯನ್ನು ಹೊಂದಿದ್ದರೆ, ನಿಮಗಾಗಿ ಬ್ಯಾಂಕ್ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ.

ಅಷ್ಟಕ್ಕೂ ಆ ಗುಡ್ ನ್ಯೂಸ್ ಏನು? ಗ್ರಾಹಕರಿಗೆ ಯಾವ ರೀತಿ ಅನುಕೂಲ ಸಿಗುತ್ತದೆ? ತಿಳಿಸುತ್ತೇವೆ ನೋಡಿ ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ನಲ್ಲಿ ನೀವು Fixed Deposit ಹೂಡಿಕೆ ಮಾಡಿದರೆ, ಮೆಚ್ಯುರ್ ಆಗುವ ವೇಳೆಗೆ ನಿಮಗೆ ಉತ್ತಮವಾದ ಬಡ್ಡಿ ಮೊತ್ತ ಸಿಗುತ್ತದೆ. ಕೆನರಾ ಬ್ಯಾಂಕ್ ನಲ್ಲಿ ಸಹ ಅದೇ ರೀತಿ FD ಮೇಲೆ ಉತ್ತಮ ಆದಾಯ ಸಿಗಲಿದೆ.

ಇದೀಗ ಕೆನರಾ ಬ್ಯಾಂಕ್ ಕಡೆಯಿಂದ FD ಗಳ ಮೇಲೆ ಬಡ್ಡಿದರವನ್ನು ಹೆಚ್ಚಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ವಿಶೇಷವಾಗಿ 444 ದಿನಗಳ FD ಮೇಲೆ ಸಾಮಾನ್ಯ ಜನರಿಗೆ 7.25% ಬಡ್ಡಿದರ ಸಿಗಲಿದೆ. 444 ದಿನಗಳ FD ಯೋಜನೆಯಲ್ಲಿ 3 ಲಕ್ಷ ಹೂಡಿಕೆ ಮಾಡಿದರೆ, 7.25% ಬಡ್ಡಿದರ ನಿಮ್ಮದು ಇದರಲ್ಲಿ ಲಾಭ ಹೇಗೆ ಸಿಗುತ್ತದೆ ಎಂದು ನೋಡುವುದಾದರೆ.

444 ದಿನಗಳ FD ಯೋಜನೆಯಲ್ಲಿ ನೀವು ₹3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 444 ದಿನಗಳ ನಂತರ ಯೋಜನೆ ಮೆಚ್ಯುರ್ ಆಗುವ ವೇಳೆಗೆ ₹3.27 ಲಕ್ಷ ರೂಪಾಯಿಗಳು ಬಡ್ಡಿ ಸೇರಿಸಿ ನಿಮ್ಮ ಕೈ ಸೇರುತ್ತದೆ. ಬೇರೆ ಎಲ್ಲಾ ಬ್ಯಾಂಕ್ ಗಳಿಗೆ ಹೋಲಿಸಿ ನೋಡಿದರೆ, ಇದು ಹೆಚ್ಚಿನ ಬಡ್ಡಿದರ ಹಾಗೂ ಸಿಗುತ್ತಿರುವ ರಿಟರ್ನ್ಸ್ ಆಗಿದೆ. ಹಾಗಾಗಿ ಕೆನರಾ ಬ್ಯಾಂಕ್ ಗ್ರಾಹಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಒಂದು ವೇಳೆ ನೀವು ಕೂಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರಾಗಿದ್ದು, FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ ಈ 444 ದಿನಗಳ ಯೋಜನೆಯಲ್ಲಿ ಹೂಡಿಕೆ ಮಾಡಿ. ಬರುವ ರಿಟರ್ನ್ಸ್ ಇಂದ ನಿಮ್ಮ ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಂಪಾದನೆ ಮಾಡುವಾಗ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಆಗಿದ್ದು, ನಿಮ್ಮ ಹಣ ಸುರಕ್ಷಿತವಾಗಿಯೂ ಇರುತ್ತದೆ. ಹಾಗಾಗಿ ಜನರು ಹೂಡಿಕೆ ಮಾಡಲು, ವ್ಯವಹರಿಸಲು ಕೆನರಾ ಬ್ಯಾಂಕ್‌ಅನ್ನು ವಿಶ್ವಾಸಿ ಬ್ಯಾಂಕ್‌ ಆಗಿ ನಂಬಿಕೆ ಇಟ್ಟುಕೊಂಡಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment