Cash Limit At Home: ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇದ್ದರೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.!

Cash Limit At Home:

ನಾವು ಇಂದು ಡಿಜಿಟಲ್ (digital) ಯುಗದಲ್ಲಿ ಬದುಕುತ್ತಿದ್ದೇವೆ. ಈಗ ಅನೇಕ ಕೆಲಸ ನಾವು ಕುಂತಲ್ಲೇ ಮಾಡಿ ಮುಗಿಸಬಹುದು. ಅದರಲ್ಲೂ ಹಣದ ವ್ಯವಹಾರ(Money business) ಅಂತೂ ನಮ್ಮ ಕೈಲಿ ಮೊಬೈಲ್‌(Mobile) ಇದ್ರೆ ಇನ್ನೂ ಬಹಳ ಸುಲಭ. ಹೀಗಾಗಿ, ಜೇಬಿಗಿಂತ ಹಣವನ್ನು ಬ್ಯಾಂಕ್ ಖಾತೆ(Bank account)ಯಲ್ಲಿ ಇರಿಸುವುದು ಸುರಕ್ಷಿತ(safe) ಎಂದು ಎಲ್ಲರೂ ಭಾವಿಸುತ್ತಾರೆ.

ಈ ಸುದ್ದಿ ಓದಿ;-Subsidy: ಸ್ವಂತ ಉದ್ಯೋಗ ಮಾಡಲು ಸರ್ಕಾರದಿಂದ 30,000 ಸಹಾಯಧನ ಘೋಷಣೆ.!

WhatsApp Group Join Now
Telegram Group Join Now

ಆದರೆ, ಇನ್ನೂ ಬಹಳಷ್ಟು ಮಂದಿ ಬ್ಯಾಂಕ್, ಡಿಜಿಟಲ್ ವಹಿವಾಟಿನ(Digital transaction) ಜಂಜಾಟ ಯಾಕೆಂದುಕೊಂಡು ಮನೆಯಲ್ಲೇ ಹಣವನ್ನು ಇಟ್ಟುಕೊಂಡಿರುತ್ತಾರೆ. ಮನೆಯಲ್ಲಿ ಬೇಕಾ ಬಿಟ್ಟಿ ಹಣ (Cash Limit At Home) ಇಟ್ಟುಕೊಳ್ಳುವಂತಿಲ್ಲ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಮನೆಯಲ್ಲಿ ಇಟ್ಟುಕೊಳ್ಳಬಹುದಾದ ನಗದಿಗೆ ನಿರ್ದಿಷ್ಟ ಮಿತಿ(Limit) ಇದೆ ಅಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು. ಮಿತಿಯ ಒಳಗೆ ಮನೆಯಲ್ಲಿ ನಗದು ಇಟ್ಟುಕೊಂಡರೆ ಅದಕ್ಕೆ ತೆರಿಗೆ ಇಲ್ಲ. ಮನೆಯಲ್ಲಿ ಹಣವನ್ನು ಇಡಲು ಆದಾಯ ತೆರಿಗೆ ಕೆಲವು ನಿಯಮಗಳನ್ನು ಮಾಡಿದೆ. ಈ ನಿಯಮಗಳನ್ನು ಅನುಸರಿಸದಿದ್ದರೆ ಅಥವಾ ತಪ್ಪು ಮಾಡಿದರೆ ಅದಕ್ಕೆ ಉತ್ತರಿಸಬೇಕಾಗಬಹುದು ಮಾತ್ರವಲ್ಲದೇ ಜೈಲು ಶಿಕ್ಷೆಗೂ ಒಳಗಾಗಬೇಕಾಗಬಹುದು.

ಮನೆಯಲ್ಲಿ ಹಣ ಇಡುವುದು ಏಕೆ?

ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಜನರು ಮನೆಯಲ್ಲಿ ಹಣವನ್ನು ಇಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ, ಹಿಂದೆ ಅಜ್ಜಿಯ ಕಾಲದಲ್ಲಿ ಯಾವುದೇ ತುರ್ತು ಪರಿಸ್ಥಿತಿಗೆ ಮನೆಯಲ್ಲಿ ನಗದನ್ನು ಇಟ್ಟುಕೊಳ್ಳಲು ಸಲಹೆ ನೀಡುತ್ತಿದ್ದರು ಎಂಬುದು ಎಲ್ಲರಿಗೂ ನೆನಪಿರಬಹುದು. ಅದಕ್ಕೂ ಮೊದಲು ಜನರು ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಮಾಡಲು ನಿರಾಕರಿಸುತ್ತಿದ್ದರು ಮತ್ತು ಸಂಗ್ರಹಿಸಿದ ಹಣವನ್ನು ತಮ್ಮ ಮನೆಗಳಲ್ಲಿ ಎಲ್ಲೋ ಬಚ್ಚಿಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಜನರು ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಖರ್ಚು ಮಾಡುತ್ತಾರೆ.

ಮನೆಯಲ್ಲಿ ಎಷ್ಟು ಹಣ ಇಡಬಹುದು?

ಮನೆಯಲ್ಲಿ ಎಷ್ಟು ಹಣವನ್ನು ಇರಿಸಬಹುದು. ಹೆಚ್ಚಿನ ಹಣ ಇಟ್ಟುಕೊಂಡರೆ, ಎಷ್ಟು ದಂಡವನ್ನು ವಿಧಿಸಲಾಗುತ್ತದೆ? ಇಂತಹ ಹಲವು ಪ್ರಶ್ನೆಗಳು ಈಗ ಮನದಲ್ಲಿ ಹುಟ್ಟಿಕೊಂಡಿರಬಹುದು. ಆದಾಯ ತೆರಿಗೆ ನಿಯಮಗಳ ಪ್ರಕಾರ, ನಾವು ಎಷ್ಟು ಆದಾಯ ಮತ್ತು ಆದಾಯ ಮೂಲಗಳನ್ನು ಘೋಷಣೆ ಮಾಡುತ್ತೇವೋ ಅಷ್ಟು ಪ್ರಮಾಣದ ಹಣವನ್ನು ಮನೆಯಲ್ಲಿ ಇರಿಸಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಹೆಚ್ಚಿನ ಹಣ ಇಟ್ಟುಕೊಂಡಿದ್ದರೆ ತನಿಖಾ ಸಂಸ್ಥೆ ಕೇಳುವ ಪ್ರಶ್ನೆಗಳಿಗೆ ಮುಖ್ಯವಾಗಿ ಆದಾಯ ಅಥವಾ ಆ ಹಣದ ಮೂಲವನ್ನು ಹೇಳಬೇಕಾಗುತ್ತದೆ. ಒಂದು ವೇಳೆ ತೆರಿಗೆ ಫೈಲ್ ಮಾಡಿದರೆ ಚಿಂತೆ ಇರುವುದಿಲ್ಲ.

ನಿಮ್ಮ ಬಳಿ ದಾಖಲೆಗಳಿರಲಿ

ನಗದು ಹರಿವಿನ ಸಂಪೂರ್ಣ ಮೂಲವನ್ನು ತಿಳಿದಿರುವುದು ಮತ್ತು ಆದಾಯದ ಮೂಲವನ್ನು ಸಹ ತಿಳಿದುಕೊಳ್ಳುವುದು ಮುಖ್ಯ. ಇದಕ್ಕಾಗಿ ಸಂಪೂರ್ಣ ದಾಖಲೆಗಳನ್ನು ಹೊಂದಿರಬೇಕು. ಅಗತ್ಯವಿದ್ದಾಗ ಇದನ್ನು ತೋರಿಸಬಹುದು. ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ, ಚಿಂತಿಸಬೇಕಾಗಿಲ್ಲ. ಆದರೆ, ನಗದು ಆದಾಯ ತೆರಿಗೆ ನಿಯಮಗಳ ಪ್ರಕಾರ ಇರಬೇಕು. ಆದಾಯ ತೆರಿಗೆ ನಿಯಮಗಳ ಪ್ರಕಾರ ವಾರ್ಷಿಕವಾಗಿ 5ರಿಂದ 50 ಲಕ್ಷ ರೂಪಾಯಿ ನಗದು ಇಟ್ಟುಕೊಂಡರೆ ಸಮಸ್ಯೆ ಇರುವುದಿಲ್ಲ. ಆದರೆ, ಇದಕ್ಕೆ ಸೂಕ್ತ ದಾಖಲೆಗಳು ಇರಬೇಕು.

ಸಮಸ್ಯೆ ಯಾವಾಗ ಉಂಟಾಗುತ್ತದೆ?

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಸಮಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ನಗದು ಖಾತೆಯ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯ ದಾಳಿಯ ಸಮಯದಲ್ಲಿ ಆದಾಯದ ಬಗ್ಗೆ ಖಚಿತವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಸರಿಯಾದ ಮಾಹಿತಿಯನ್ನು ಹೊಂದಿದ್ದರೆ ಯಾವುದೇ ರೀತಿಯ ದಂಡವನ್ನು ಪಾವತಿಸಬೇಕಾಗಿಲ್ಲ.

ಆದರೆ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದರೆ ಪತ್ತೆಯಾದ ನಗದಿನ ಮೇಲೆ ಶೇ. 137ರಷ್ಟು ತೆರಿಗೆಯನ್ನು ವಿಧಿಸಬಹುದು. ಅಂದರೆ, ನೀವು ನಗದು ಜೊತೆಗೆ ಶೇ. 37ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಜತೆಗೆ ದಂಡ ಮತ್ತು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment