Cast & Income Certificate
ಸ್ನೇಹಿತರೆ ನಾವು ನಮ್ಮ ಭಾರತ ದೇಶದ ಯಾವುದೇ ಒಂದು ಸೇವೆಯನ್ನು ಅನುಭವಿಸಲು ಕಡ್ಡಾಯವಾಗಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು ಅದರಲ್ಲೂ ಯಾವುದೇ ಮೀಸಲಾತಿಯನ್ನು ಅನುಭವಿಸಲು ಈ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಅತಿ ಅವಶ್ಯಕವಾಗಿದೆ. ಇನ್ನೂ ಇದು ಭಾರತ ಸರ್ಕಾರದಿಂದಲೇ ನಿಗದಿಯಾಗಿರುವುದು ಈ ಮೊದಲು ಆನ್ಲೈನ್ ಸೇವೆಗಳು ಇರುತ್ತಿರಲಿಲ್ಲ.
ಕಚೇರಿಗಳಿಗೆ ಅಲೆದಾಡುವ ಜನರ ಒದ್ದಾಟದಿಂದ ತಪ್ಪಿಸಲು ನಮ್ಮ ಕೇಂದ್ರ ಸರ್ಕಾರವು ನಾಡಕಚೇರಿ ಅರ್ಜಿಯನ್ನು ಹಾಕಲು ಅವಕಾಶವನ್ನು ನೀಡಿದೆ ಅಲ್ಲದೆ ಆದಾಯ ಹಾಗೂ ಜಾತಿ ಪ್ರಮಾಣ ಪತ್ರವೂ ಐದು ವರ್ಷಕ್ಕಾಗಿ ಮೀಸಲಾಗಿರುತ್ತದೆ ನಂತರ ಮತ್ತೊಮ್ಮೆ ಹೊಸ ಅರ್ಜಿಯಾಗಿ ಪಡೆಯಬೇಕಾಗುತ್ತದೆ ಇಂದಿನ ವಿಶೇಷವಾದ ಮಾಹಿತಿಯಲ್ಲಿ ತಿಳಿಸುವುದೇನೆಂದರೆ ಈ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ರಿನಿವಲ್ ಮಾಡುವುದು ಹೇಗೆ ಎಂಬುದು.
ಅಲ್ಲದೆ ಯಾವುದೇ ಒಂದು ಮಗುವಿನ ಹೊಸ ಅಡ್ಮಿಶನ್ ಗಾಗಿ ತಂದೆಯ ಅಥವಾ ತಾಯಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಕೇಳುತ್ತದೆ. ಜಾತಿ ಪ್ರಮಾಣಪತ್ರವನ್ನು ನೀಡುವುದರ ಮುಖ್ಯ ಉದ್ದೇಶವೆಂದರೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ರಾಜ್ಯ/ಕೇಂದ್ರ ಸರ್ಕಾರದ ಅಡಿಯಲ್ಲಿರುವ ಮೀಸಲು ಹುದ್ದೆಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಸುಲಭಗೊಳಿಸುವುದು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು.
ಆದಾಯ ಪ್ರಮಾಣಪತ್ರವು ಒಂದು ಪ್ರಮುಖ ಪೋಷಕ ದಾಖಲೆಗಳಾಗಿದ್ದು, ನೀವು ವಿವಿಧ ರಾಜ್ಯ ಸರ್ಕಾರದ ಕಲ್ಯಾಣ ಮತ್ತು ಸಬ್ಸಿಡಿ ಯೋಜನೆಗಳನ್ನು ಪಡೆದುಕೊಳ್ಳಬೇಕಾಗಬಹುದು. ಇದು ನಿಮ್ಮ ವೈಯಕ್ತಿಕ ಅಥವಾ ಕುಟುಂಬದ ವಾರ್ಷಿಕ ಆದಾಯವನ್ನು ಮೌಲ್ಯೀಕರಿಸುತ್ತದೆ ಅಥವಾ ಪ್ರಮಾಣೀಕರಿಸುತ್ತದೆ, ಕೆಲವು ರಾಜ್ಯ ಪ್ರಯೋಜನಗಳನ್ನು ಪಡೆಯಲು ನೀವು ಸ್ಥಾಪಿಸಬೇಕಾಗಬಹುದು.
ಇನ್ನು ಈ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರಿನಿವಲ್ ಮಾಡುವುದು ಹೇಗೆ…?
*ಮೊದಲನೆಯದಾಗಿ ಗೂಗಲ್ ಕ್ರೋಮ್ ನ ಟ್ಯಾಗ್ ಬಟನ್ ನಲ್ಲಿ ಇನ್ಕಮ್ ಅಂಡ್ ಕಾಸಿಫಿಕೇಟ್ ಕರ್ನಾಟಕ ಅಂತ ಕೊಡಿ ಅಥವಾ ಎ ಜೆ ಎಸ್ ಕೆ ಹೋಂ ಪೇಜ್ ಗೆ ಹೋಗಬೇಕು.
*ಇನ್ನು ಈ ಹೋಂ ಪೇಜ್ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ಟ್ಯಾಬ್ ಒಂದು ತೆರೆಯುತ್ತದೆ ಅಲ್ಲಿ ಬಹಳ ಆಯ್ಕೆಗಳು ಕಂಡುಬಂದರು ಅಲ್ಲಿ ಆನ್ಲೈನ್ ಅಪ್ಲಿಕೇಶನ್ ಎಂಬ ಆಯ್ಕೆಯನ್ನು ಆರಿಸಬೇಕು.
*ಇನ್ನು ಆನ್ಲೈನ್ ಅಪ್ಲಿಕೇಶನ್ ಎಂಬ ಆಯ್ಕೆಯನ್ನು ಅದರ ಕೆಳಗೆ ಬಹಳ ಆಯ್ಕೆಗಳು ನಾವು ಕಾಣಬಹುದಾಗಿದೆ ಹಾಗಾಗಿ ನಾವು ಮಾಡಲು ಸಾಧ್ಯವಾಗುವುದಿಲ್ಲ ಹೊಸ ಅರ್ಜಿಯನ್ನೇ ಹಾಕಬೇಕಾಗುತ್ತದೆ.
*ಈಗ ಆನ್ಲೈನ್ ಅಪ್ಲಿಕೇಶನ್ ಕೆಳಗಡೆ ಅಪ್ಲೈ ಆನ್ಲೈನ್ ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು.
*ಇನ್ನೂ ಅಪ್ಲೈ ಆನ್ಲೈನ್ ಎಂಬ ಆಯ್ಕೆಯನ್ನೂ ಒತ್ತಿದ ನಂತರ ಅಲ್ಲಿ ಒಂದು ಮೊಬೈಲ್ ನಂಬರನ್ನು ಹಾಕುವ ಹಾಗೂ ಆಫ್ಟರ್ಪಿ ಯನ್ನು ಹಾಕುವ ಜಾಗವು ಕಂಡುಬರುತ್ತದೆ ಆಗ ಮೊಬೈಲ್ ನಂಬರ್ ಹಾಗೂ ಓಟಿಪಿಯನ್ನು ಹಾಕಿ ನಾವು ಲಾಗಿನ್ ಆಗಬೇಕಾಗುತ್ತದೆ. ಇನ್ನು ಇವೆಲ್ಲವನ್ನೂ ಹಾಕಿದ ನಂತರ ನಾಡಕಚೇರಿಯ ಇನ್ನೊಂದು ಪೇಜ್ ಗೆ ನಾವು ಹೋಗಬಹುದು.
ಅಲ್ಲಿ ನ್ಯೂ ರಿಕ್ವೆಸ್ಟ್ ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ನ್ಯೂ ರಿಕ್ವೆಸ್ಟ್ ಆರಿಸಿಕೊಂಡ ನಂತರ ನಮಗೆ ಅಲ್ಲಿ ಬಹಳ ಆಯ್ಕೆಗಳು ಕಂಡುಬರುತ್ತದೆ. ಇನ್ನು ಅಲ್ಲಿ ಕ್ಯಾಸ್ಟ್ ಇನ್ಕಮ್ ಸೇರಿದಂತೆ ಹಲವಾರು ಸರ್ಟಿಫಿಕೇಟ್ ಗಳಿಗಾಗಿ ರಿಕ್ವೆಸ್ಟ್ ಅನ್ನು ಕಾಣಬಹುದು ಸದ್ಯ ಇನ್ಕಮ್ ಸರ್ಟಿಫಿಕೇಟ್ ತಾತ್ಕಾಲಿಕವಾಗಿ ಸಾಧ್ಯವಿಲ್ಲ ಆದ್ದರಿಂದ ಹೊಸ ಅರ್ಜಿಯನ್ನು ಹಾಕಬೇಕಾಗಿದೆ.