Central Bank
ವಿದ್ಯಾಭ್ಯಾಸ ಪೂರ್ತಿಗೊಳಿಸಿ ಉದ್ಯೋಗ ಅರಸುವ ಯುವ ಜನತೆಯಲ್ಲಿ ಬಹುತೇಕರು ಬ್ಯಾಕಿಂಗ್ ಕ್ಷೇತ್ರದಲ್ಲಿಯೇ ಭವಿಷ್ಯ ಕಂಡುಕೊಳ್ಳಲು ಬಯಸುತ್ತಾರೆ. ಯಾಕೆಂದರೆ ಬ್ಯಾಂಕ್ ಹುದ್ದೆಗಳಲ್ಲಿ ಕೆಲಸದ ಒತ್ತಡ ಕಡಿಮೆ, ತಿಂಗಳಲ್ಲಿ ಅತಿಹೆಚ್ಚು ರಜಾ ದಿನಗಳು ಸಿಗುತ್ತವೆ, ಕೈತುಂಬ ಉತ್ತಮ ವೇತನವೂ ಇರುತ್ತದೆ ಇನ್ನೂ ಇತ್ಯಾದಿ ಅಂಶಗಳು ಇದಕ್ಕೆ ಕಾರಣವಾಗಿವೆ.
ಹೀಗೆ ನೀವು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬಯಸುತ್ತಾ ಇರುವವರಾದರೆ ಈ ಬ್ಯಾಂಕಿಂಗ್ ಹುದ್ದೆಗಳಿಗಿರುವ ಕಾಂಪಿಟೇಶನ್ ಬಗ್ಗೆಯೂ ಕೂಡ ಗೊತ್ತೇ ಇರುತ್ತದೆ. ಪ್ರತಿ ವರ್ಷವೂ IBPS ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ತೆರವಾಗುವ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮಾಡಲಾಗುತ್ತದೆ.
ಆದರೆ ಇದೀಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಯಾವುದೇ ಪರೀಕ್ಷೆ ಇಲ್ಲದೆ ಆಸಕ್ತರಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಯಾವ ಹುದ್ದೆಗಳು ಖಾಲಿ ಇದೆ? ಯಾರಿಗೆಲ್ಲ ಅರ್ಜಿ ಸಲ್ಲಿಸಲು ಅವಕಾಶವಿದೆ? ಮತ್ತು ಈ ವಿಧಾನ ಹೇಗೆ? ಎನ್ನುವುದರ ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- Power: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಸರ್ಕಾರದಿಂದ ಚಾಲನೆ.! ಇನ್ಮುಂದೆ ಬಿಲ್ ಕಟ್ಟುವ ಟೆನ್ಶನ್ ಬೇಡ.!
ನೇಮಕಾತಿ ಸಂಸ್ಥೆ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಉದ್ಯೋಗ ಸಂಸ್ಥೆ:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳ ಸಂಖ್ಯೆ:- 13 ಹುದ್ದೆಗಳು
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಹುದ್ದೆಗಳ ವಿವರ:-
* ಬ್ಯಾಂಕ್ ಫ್ಯಾಕಲ್ಟಿ
* ಆಫೀಸ್ ಅಸಿಸ್ಟೆಂಟ್
* ಅಟೆಂಡರ್
* ವಾಚ್ಮನ್ / ಗಾರ್ಡನರ್
ವೇತನ ಶ್ರೇಣಿ:-
* ಬ್ಯಾಂಕ್ ಫ್ಯಾಕಲ್ಟಿ – ರೂ.30,000
* ಆಫೀಸ್ ಅಸಿಸ್ಟೆಂಟ್ – ರೂ. 20,000
* ಅಟೆಂಡರ್ – ರೂ.14,000
* ವಾಚ್ಮನ್ / ಗಾರ್ಡನರ್ – ರೂಂ.12,000
ಶೈಕ್ಷಣಿಕ ವಿದ್ಯಾರ್ಹತೆ:-
* ಬ್ಯಾಂಕ್ ಫ್ಯಾಕಲ್ಟಿ – ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷೆ ಬಲ್ಲವರಾಗಿರಬೇಕು ಮತ್ತು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯ ಹೊಂದಿರಬೇಕು
* ಆಫೀಸ್ ಅಸಿಸ್ಟೆಂಟ್ – ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷೆ ಬಲ್ಲವರಾಗಿರಬೇಕು ಮತ್ತು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯ ಹೊಂದಿರಬೇಕು
* ಅಟೆಂಡರ್ – ದ್ವಿತೀಯ PUC ಉತ್ತೀರ್ಣರಾಗಿರಬೇಕು
* ವಾಚ್ಮನ್ / ಗಾರ್ಡನರ್ – 7ನೇ ತರಗತಿ ಉತ್ತೀರ್ಣರಾಗಿರಬೇಕು.
ಈ ಸುದ್ದಿ ಓದಿ:- Aadhaar: ಆಧಾರ್ ಕಾರ್ಡ್ ಇದ್ದವರು ಸೆಪ್ಟೆಂಬರ್ 14 ರ ಒಳಗೆ ಈ ಕೆಲಸ ಮಾಡದಿದ್ದರೆ ದಂಡ ಗ್ಯಾರಂಟಿ.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 22 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* ಮೊದಲಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಿ
* ಸೂಚಿಸಿರುವ ಸೂಚನೆ ಪ್ರಕಾರ ಬಗ್ಗೆ ಅರ್ಜಿ ಫಾರಂ ಪೂರ್ತಿಗೊಳಿಸಿ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ
ಆಯ್ಕೆ ವಿಧಾನ:-
* ಈ ಹುದ್ದೆಗಳ ಭರ್ತಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದಿಲ್ಲ
* ಅರ್ಜಿ ಸಲ್ಲಿಸಿದವರಿಗೆ ನಿಗದಿತ ದಿನಾಂಕದಂದು ಸಂದರ್ಶನ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ಆರಂಭವಾಗಿದೆ
* ಸೆಪ್ಟೆಂಬರ್ 1, 20240ಅರ್ಜಿ ಸಲ್ಲಿಸುವುದಕ್ಕೆ ಕಡೆಯ ಅವಕಾಶವಾಗಿದೆ.