ಹೆಚ್ಚುತ್ತಿರುವ ಡಿಜಿಟಲೀಕರಣ(Digitization)ದ ಕಾರಣ ಹೆಚ್ಚಿನ ಜನರು ಡಿಜಿಟಲ್ ಪಾವತಿ(Digital Payment))ಗಳನ್ನು ಬಳಸುತ್ತಾರೆ. ಆದರೆ, ದೊಡ್ಡ ವಹಿವಾಟುಗಳಿಗೆ ಚೆಕ್‌ಗಳನ್ನು ಬಳಸುವವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಯಾವುದೇ ವ್ಯಕ್ತಿಗೆ ಚೆಕ್ (Cheque) ನೀಡುವಾಗ, ಅವರು ಕೆಲವು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ.
ಇದರಿಂದಾಗಿ ಅವರು ನಂತರ ಕೆಲ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಚೆಕ್‌ಗಳಿಗೆ ಸಹಿ ಮಾಡುವಾಗ ಅಥವಾ ಚೆಕ್‌ಗಳ ಮೂಲಕ ವಹಿವಾಟು ಮಾಡುವಾಗ ಯಾವುದೇ ವಂಚನೆ ಸಂಭವಿಸದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಾವು ಈ ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…
ಈಗ ಬಹುತೇಕ ಜನರು ಹಣದ ವ್ಯವಹಾರವನ್ನು ಆನ್ಲೈನ್ ನಲ್ಲಿ (Online Banking), ಗೂಗಲ್ ಪೇ ಮತ್ತು ಫೋನ್ ಪೇ (Google Pay / PhonePe) ಮೂಲಕ ವ್ಯವಹಾರ ಮಾಡುತ್ತಾರೆ. ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ಬ್ಯುಸಿನೆಸ್ ಮಾಡುವವರು ಹಾಗೂ ಇನ್ನಿತರ ಕೆಲಸಗಳನ್ನು ಮಾಡುವವರು ಹಣದ ವ್ಯವಹಾರವನ್ನು ಚೆಕ್ ಮೂಲಕ ನಡೆಸುತ್ತಾರೆ.
ಹೌದು, ಡಿಜಿಟಲ್ ಪೇಮೆಂಟ್ ಗಳು (Digital Payment) ಜಾಸ್ತಿ ಆಗಿದ್ದರೂ ಸಹ, ಚೆಕ್ ಮೂಲಕ ನಡೆಯುವ ವ್ಯವಹಾರಗಳು ಕೂಡ ಅಷ್ಟೇ ಪ್ರಮುಖವಾದದ್ದು. ನಿಮ್ಮ ಅಕೌಂಟ್ ಇರುವ ಬ್ಯಾಂಕ್ ಇಂದ ಚೆಕ್ ಬುಕ್ (Cheque Book) ಪಡೆಯಬೇಕು ಎಂದರೆ ಅದು ಸುಲಭ ಅಲ್ಲ.
ಅದಕ್ಕೆ ಕೆಲವು ನಿಯಮಗಳಿವೆ, ಬ್ಯಾಂಕ್ ಇಂದ (Bank) ಕೆಲವು ಮಾಹಿತಿಗಳನ್ನು ಪಡೆದುಕೊಂಡು ನಂತರ ಚೆಕ್ ಬುಕ್ ಕೊಡುತ್ತಾರೆ. ಚೆಕ್ ಬುಕ್ ನಿರ್ವಹಣೆ ಮಾಡುವುದನ್ನ ಸರಿಯಾಗಿ ತಿಳಿದುಕೊಂಡಿರಬೇಕು, ಚೆಕ್ ಬುಕ್ ನಲ್ಲಿ ತಪ್ಪಾಗಿ ನಮೂದಿಸಿದರೆ ಚೆಕ್ ಬೌನ್ಸ್ ಕೇಸ್ ಗೆ ಸಿಲುಕಿಕೊಳ್ಳುವ ಪ್ರಮೇಯ ಕೂಡ ಇರುತ್ತದೆ. ಹಾಗಾಗಿ ಇದೆಲ್ಲವನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು..
ಚೆಕ್ ಬೌನ್ಸ್ ಕೇಸ್ ಸುಲಭವಾದದ್ದಂತೂ ಅಲ್ಲ, ನಾವೆಲ್ಲಾ ಮಾಧ್ಯಮಗಳಲ್ಲಿ ನೋಡಿರುವ ಶ್ರೀಮಂತ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಕೂಡ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಸಿಲುಕಿಕೊಂಡಿದ್ದು ಇದೆ. ಹಾಗಾಗಿ, ಚೆಕ್ ಗಳ ವಿಚಾರದಲ್ಲಿ ಜಾರಿಗೆ ಬಂದಿರುವ ನಿಯಮಗಳನ್ನು ತಿಳಿದುಕೊಂಡಿರಬೇಕು. ಯಾವ ಯಾವ ಕಾರಣಕ್ಕೆ ಚೆಕ್ ಬೌನ್ಸ್ (Reasons For Cheque Bounce) ಆಗುತ್ತದೆ ಎನ್ನುವುದು ಕೂಡ ಗೊತ್ತಿರಬೇಕು. ಹಾಗಿದ್ದಲ್ಲಿ ಇಂದು ಅದರ ಬಗ್ಗೆ ತಿಳಿದುಕೊಳ್ಳೋಣ.
ಯಾಕೆ ಚೆಕ್ ಬೌನ್ಸ್ ಆಗುತ್ತೆ?
* ಅಕೌಂಟ್ ನಲ್ಲಿ ಎಷ್ಟು ಹಣವಿದೆಯೋ ಅದನ್ನು ನೋಡಿಕೊಂಡು ಚೆಕ್ ಮೇಲೆ ಅಮೌಂಟ್ ಬರೆದುಕೊಡಿ, ನೀವು ಬರೆದಷ್ಟು ಮೊತ್ತದ ಹಣ ಅಕೌಂಟ್ ನಲ್ಲಿ ಇಲ್ಲಾ ಎಂದರೆ, ಚೆಕ್ ಬೌನ್ಸ್ ಆಗುತ್ತದೆ.
* ಚೆಕ್ ಮೇಲೆ ನೀವು ಹಾಕುವ ಸೈನ್ ತುಂಬಾ ಮುಖ್ಯ. ಒಂದು ಬ್ಯಾಂಕ್ ನ ಇತರೆ ಕೆಲಸಗಳಿಗೆ ಮಾಡುವ ಸೈನ್ ಒಂದು ಥರ ಇದ್ದು, ಚೆಕ್ ಮೇಲೆ ಬೇರೆ ಥರ ಸೈನ್ ಮಾಡಿದರೆ, ಅದರಿಂದ ಚೆಕ್ ಬೌನ್ಸ್ ಆಗಬಹುದು. ಹಾಗಾಗಿ ಸೈನ್ ಮಾಡುವಾಗ ಹುಷಾರಾಗಿರಿ.
* ನೀವು ಚೆಕ್ ನಲ್ಲಿ ಬರೆಯುತ್ತಿರುವ ಮೊತ್ತವನ್ನು ಅಕ್ಷರಗಳಲ್ಲಿ ಮತ್ತು ಅಂಕಿಗಳಲ್ಲಿ ಎರಡು ರೀತಿಯಲ್ಲಿ ಬರೆಯಿರಿ. ಆಗ ಚೆಕ್ ಇಂದ ಆಗುವ ಸಮಸ್ಯೆಗಳನ್ನು ತಡೆಗಟ್ಟಬಹುದು.
* ಚೆಕ್ ಪಾವತಿ ದಿನಾಂಕ ಬರೆಯುವ ವೇಳೆ, ಕ್ರಾಸ್ ಚೆಕ್ ಮಾಡಿ ಬರೆಯಿರಿ.
ಚೆಕ್ ಅನ್ನು ಕಂಪ್ಲೀಟ್ ಆಗಿ ಚೆಕ್ ಮಾಡಿ
ಸಿನಿಮಾ ಫೀಲ್ಡ್, ಬ್ಯುಸಿನೆಸ್ ಗಳು ಹಾಗೂ ಇನ್ನಿತರ ಹಲವು ಕ್ಷೇತ್ರಗಳಲ್ಲಿ ಚೆಕ್ ವ್ಯವಹಾರ ನಡೆಯುತ್ತದೆ. ಹಾಗಾಗಿ, ನೀವು ಯಾರಿಂದಲಾದರು ಚೆಕ್ ಪಡೆಯುವಾಗ ಚೆಕ್ ನಲ್ಲಿರುವ ಮಾಹಿತಿ ಪೂರ್ತಿಯಾಗಿ ಸರಿ ಇದೆಯಾ ಎಂದು ಒಮ್ಮೆ ಚೆಕ್ ಮಾಡಿ. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆಗಳು, ಚೆಕ್ ಬೌನ್ಸ್ ಆಗುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಹುಷಾರಾಗಿರಿ. ಇನ್ನು ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ದಂಡ ಕೂಡ ವಿಧಿಸಬಹುದು. ಆದ್ದರಿಂದ, ಚೆಕ್ ವ್ಯವಹಾರ ಮಾಡುವಾಗ ಕಾಳಜಿ ಇರಲೇಬೇಕು.