Cheque: ಚೆಕ್ ಬುಕ್ ಬಳಕೆ ಮಾಡುವವರಿಗೆ ಗುಡ್ ನ್ಯೂಸ್ ಕೊಟ್ಟ RBI.!

Cheque Book

ಕಳೆದೊಂದು ದಶಕದಲ್ಲಿ ಆದ ಬದಲಾವಣೆಗಳನ್ನೇ ಗಮನಿಸುವುದಾದರೆ ತಂತ್ರಜ್ಞಾನ ವಿಚಾರದಲ್ಲಿ ಬಹಳಷ್ಟು ಮುಂದುವರಿದಿದೆ. ಇಂಟರ್ನೆಟ್ ಯುಗದ ಹೊಸದೊಂದು ಪರ್ವಕ್ಕೆ ಇಡೀ ಜಗತ್ತು ಹೊಂದಿಕೊಂಡಿದ್ದು ಇದು ಬಹುತೇಕ ಎಲ್ಲಾ ರಂಗಗಳಿಗೂ ಆವರಿಸಿಕೊಂಡಿದೆ ಎಂದೇ ಒಪ್ಪಬಹುದಾಗಿದೆ.

ಇದಕ್ಕೆ ಹಣಕಾಸು ವಹಿವಾಟು ಹರತೇನಲ್ಲ ಅಥವಾ ನೇರವಾಗಿ ಹೇಳುವುದಾದರೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕೂಡ ನೋಡ ನೋಡುತ್ತಿದ್ದಂತೆ ನಾವು ಖಾತೆಗೆ ಹಣ ಹಾಕುವುದಕ್ಕೆ ಹಾಗೂ ಖಾತೆಯಿಂದ ಹಣ ತೆಗೆಯುವುದಕ್ಕಾಗಿಯೂ ಸರತಿ ಸಾಲಿನಲ್ಲಿ ಬ್ಯಾಂಕ್ ಮುಂದೆ ಗಂಟೆಗಟ್ಟಲೆ ನಿಲ್ಲುತ್ತಿದ್ದ ಸಮಯದಿಂದ.

WhatsApp Group Join Now
Telegram Group Join Now

ಬೆರಳ ತುದಿಯಲ್ಲಿ ಬ್ಯಾಂಕ್ ಕಡೆ ಹೋಗದೆ ಆನ್ಲೈನ್ ನಲ್ಲಿಯೇ ಎಲ್ಲಾ ವಹಿವಾಟು ಮುಗಿಸಿ ಹಣದ ಜೊತೆಗೆ ಸಮಯ ಹಾಗೂ ಶ್ರಮದ ಉಳಿತಾಯ ಕೂಡ ಮಾಡಿಕೊಳ್ಳುತ್ತಿದ್ದೇವೆ. ಇಷ್ಟು ಸೌಲಭ್ಯವಿರುವ ಈ ಸಮಯದಲ್ಲೂ ಬ್ಯಾಂಕ್ ನ ಕೆಲ‌ ಸೇವೆಗಳು ವಿಳಂಬವಾಗುತ್ತಿರುವ ಬಗ್ಗೆಯೂ ಅಸಮಾಧಾನ ಇದ್ದೇ ಇದೆ ಎನ್ನುವುದನ್ನು ಕೂಡ ಒಪ್ಪಲೇ ಬೇಕು. ಈಗ RBI ಕಡೆಯಿಂದ ಈ ವಿಚಾರವಾಗಿ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಈ ಸುದ್ದಿ ಓದಿ:-Health: ಇನ್ಮುಂದೆ ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ.!

ಬಹುತೇಕರ ದೂರಾಗಿದ್ದ ಚೆಕ್ ವಿನಿಮಯ ಬಹಳ ತಡವಾಗುತ್ತಿದ್ದೆ ಎನ್ನುವ ಸಮಸ್ಯೆಗೆ, RBI ಕಡೆಯಿಂದ ಸಮಸ್ಯೆ ಇತ್ಯರ್ಥದ ಬಗ್ಗೆ ಭರವಸೆ ಕೇಳಿ ಬಂದಿದೆ. ಈಗ ಜನಸಾಮಾನ್ಯರು ಹೆಚ್ಚಾಗಿ ಹಣ ವಿನಿಮಯಕ್ಕೆ UPI ಆಧಾರಿತ ಆಪ್ ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಸೆಕೆಂಡ್ ಗಳಲ್ಲಿಯೇ ತರಕಾರಿ ವ್ಯಾಪಾರ ದಿಂದ ಹಿಡಿದು ದುಬಾರಿ ಬೆಲೆ ಶಾಪಿಂಗ್ ವರೆಗೆ ಎಲ್ಲವೂ ಮುಗಿದೆ ಹೋಗುತ್ತದೆ.

ಇನ್ನು RTGS & ನಿಫ್ಟಿ (NIFT) ಮೂಲಕ ಕೂಡ ಹಣ ವರ್ಗಾವಣೆ ಮಾಡುವಂತಹ ಸೌಲಭ್ಯ ಇರುವ ಈ ಕಾಲದಲ್ಲಿಯೂ ಚೆಕ್ ನೀಡಿ ಹಣ ಪಡೆಯುವುದಕ್ಕೆ ಎರಡು ಮೂರು ದಿನಗಳು ಹಾಗೂ ಬ್ಯಾಂಕ್ ರಾಜ್ಯಗಳು ಇದ್ದ ಸಂದರ್ಭದಲ್ಲಿ ಇದಕ್ಕಿಂತಲೂ ಹೆಚ್ಚಿನ ಸಮಯ ತಗಲುತ್ತಿತ್ತು.

ಆದರೂ ಈಗಲೂ ಕೂಡ ಪ್ರೊಫೆಷನಲ್ ಆಗಿ ಹಲವಾರು ವಾಣಿಜ್ಯ ವಹಿವಾಟುಗಳಿಗೆ ಹಣದ ಮೊತ್ತ ಹೆಚ್ಚಿದೆ ಎನ್ನುವ ಕಾರಣಕ್ಕೆ ಅಥವಾ ಶ್ಯೂರಿಟಿ ಎನ್ನುವ ಕಾರಣಕ್ಕೆ ಚೆಕ್ ಮೂಲಕ ಹಣ ಪಡೆದುಕೊಳ್ಳುವ ಅಥವಾ ನೀಡುವ ಚಟುವಟಿಕೆ ಚಾಲ್ತಿಯಲ್ಲಿದೆ.

ಈ ಸುದ್ದಿ ಓದಿ:- Property: ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತೆ.? ಕಾನೂನಾತ್ಮಕ ಆಸ್ತಿ ಪಡೆಯೋದು ಹೇಗೆ.? ಸಂಪೂರ್ಣ ಮಾಹಿತಿ.!

ಈ ರೀತಿ ಪಡೆದುಕೊಂಡ ಚೆಕ್ ಗಳನ್ನು ತಮ್ಮ ಖಾತೆಗೆ ಹಾಕಿ ಹಣ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕೆ ಜಗತ್ತು ಇಷ್ಟು ಮುಂದುವರಿದ ಕಾಲದಲ್ಲೂ ಇಷ್ಟು ತಡವಾಗುತ್ತಿದೆ ಎನ್ನುವುದು ಜನಸಾಮಾನ್ಯರ ಸಮಸ್ಯೆಗಳಲ್ಲಿ ಒಂದಾಗಿತ್ತು.

ಇದೀಗ ಇದಕ್ಕೂ ಕೂಡ ಸಮಯ ಬಂದಿದೆ ಇನ್ನು ಮುಂದೆ ನೀವು ಚೆಕ್ ಹಾಕಿದ ಕೆಲವೇ ಗಂಟೆಗಳಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ. ಸ್ವತಃ RBI ಈ ಬಗ್ಗೆ ಭರವಸೆ ನೀಡಿದೆ ಎಂದು ಬಲವಾದ ಮೂಲಗಳು ತಿಳಿಸಿವೆ. ಇತ್ತೀಚಿಗೆ ನಡೆದ RBI ನ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರ ಹಾಗೂ ಬದಲಾವಣೆಗಳಲ್ಲಿ ಇದು ಕೂಡ ಒಂದಾಗಿತ್ತು.

ಇದರೊಂದಿಗೆ ರೆಪೋ ದರದ ವ್ಯತ್ಯಾಸದ ಬಗ್ಗೆಯೂ ಮಂದಿಯ ಗಮನ ಹರಿದಿತ್ತು ಈ ಬಗ್ಗೆ ಗವರ್ನರ್ ಶಕ್ತಿ ಕಾಂತ್ ದಾಸ್ ಕೂಡ ಮಾತನಾಡಿ ಯತಾಸ್ಥಿತಿ ಮುಂದುವರೆಯಲಿದೆ ಎಂದು ತಿಳಿಸಿದರು. 6 ಸದಸ್ಯರ ಸಭೆಯಲ್ಲಿ 4 ಸದಸ್ಯರು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಇಚ್ಛೆ ಪಟ್ಟಿರುವುದರಿಂದ ಎಲ್ಲವನ್ನು ಚರ್ಚಿಸಿ ಈ ತೀರ್ಮಾನಕ್ಕೆ ಬರಲಿದೆ ಎನ್ನುವ ಸ್ಪಷ್ಟತೆಯನ್ನು ಕೂಡ ನೀಡಿದರು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment