Subsidy
ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದ ವತಿಯಿಂದ ಮಾಸಿಕವಾಗಿ 4,000 ಸಹಾಯ ಸಹಾಯಧನ ನೀಡಲಾಗುತ್ತಿದೆ ಎನ್ನುವ ಸಂಬಂಧಿತ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಸರ್ಕಾರದ ಈವರೆಗಿನ ಯೋಜನೆಗಳಲ್ಲಿ ಇದು ಬಹಳ ವಿಶೇಷ ಎನಿಸಿದ್ದುಈ ಯೋಜನೆಯಿಂದ ಎಷ್ಟೋ ಅಸಹಾಯಕ ಕುಟುಂಬಗಳಿಗೆ ಅದರಲ್ಲೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನುಕೂಲವಾಗುವುದರಲ್ಲಿ ಅನುಮಾನವೇ ಇಲ್ಲ.
ಈ ಸುದ್ದಿ ಓದಿ:- Unemployed: ಕೆಲಸ ಬಿಟ್ಟವರಿಗೆ ಗುಡ್ ನ್ಯೂಸ್: ಸರ್ಕಾರ ನಿಮಗೆ ತಿಂಗಳಿಗೆ ನೀಡಲಿದೆ 25,000 ರೂಪಾಯಿ.!
ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಹೆಚ್ಚು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಮತ್ತು ಏನಿದು ಯೋಜನೆ? ಇದರ ಮಾನದಂಡಗಳೇನು? ಅಪ್ಲೈ ಮಾಡುವುದು ಹೇಗೆ ಇತ್ಯಾದಿ ವಿವರಕ್ಕಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ಈ ಮೇಲೆ ತಿಳಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದ ವತಿಯಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿರುವ ಅನಾಥವಾಗಿರುವ ಅಥವಾ ನಿರಾಶ್ರಿತರಾಗಿರುವ ಮಕ್ಕಳಿಗೆ ಅವರ ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ವಿದ್ಯಾಭ್ಯಾಸದ ಅಗತ್ಯತೆಗಳಿಗೆ ಅನುಕೂಲವಾಗಲಿ ಎಂದು ಇಂತಹದೊಂದು ವಿಶೇಷ ಯೋಜನೆಯ ಮೂಲಕ 18 ವರ್ಷ ಪೂರೈಸುವವರೆಗೆ ಮಾಸಿಕವಾಗಿ ರೂ.4,000 ಸಹಾಯಧನವನ್ನು ನಿರ್ಧರಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು:-
* ತಂದೆಯನ್ನು ಕಳೆದುಕೊಂಡಿರುವ ಮಕ್ಕಳು ಅನಾಥ ಮಕ್ಕಳು ತಾಯಿ ವಿಚ್ಛೇದನ ಪಡೆದಿದ್ದರೆ ಅಥವಾ ಕುಟುಂಬದಿಂದ ಪರಿತ್ಯಕ್ತರಾಗಿದ್ದರೆ ಅಂತಹ ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಇದರೊಂದಿಗೆ ಪೋಷಕರು ಇದ್ದರೂ ತಂದೆ ತಾಯಿ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಅಥವಾ ದೈಹಿಕವಾಗಿ ಅಶಕ್ತರಾಗಿದ್ದರೆ ಅಂತಹ ಮಕ್ಕಳಿಗೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ
* ಬಾಲ ನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯ ಇರುವಂತಹ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಿ ಗುರುತಿಸಿಕೊಂಡಿರುವ ಮಕ್ಕಳು, ನೈಸರ್ಗಿಕ ವಿಕೋಪದ ಕಾರಣದಿಂದ ಆಶ್ರಯ ಕಳೆದುಕೊಂಡಿರುವಂತಹ ಕುಟುಂಬದ ಮಕ್ಕಳು, ಬಾಲ ಕಾರ್ಮಿಕರು, ಬಾಲ್ಯ ವಿವಾಹ ಸಂತ್ರಸ್ತರು, ಕಳ್ಳ ಸಾಕಣಿಕೆಗೆ ಒಳಗಾದ ಮಕ್ಕಳು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ದೈಹಿಕ ಅಂಗವಿಕಲತೆ ಉಳ್ಳ ಪುನರ್ವಸತಿ ಅವಶ್ಯಕತೆ ಇರುವ ಶೋಷಿತ ಮಕ್ಕಳು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ನೆರವು ಪಡೆಯಬಹುದು
ಈ ಸುದ್ದಿ ಓದಿ:- Indian Bank: ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಆಹ್ವಾನ.! ವೇತನ: ₹ 48,480
* 1 ರಿಂದ 18 ವರ್ಷದ ವಯಸ್ಸಿನ ಒಳಗಿನವರಾಗಿರಬೇಕು
* ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದವರಿಗೆ ರೂ.72,000 ಹಾಗೂ ನಗರ ಪ್ರದೇಶದ ರೂ.96,000 ಒಳಗೆ ಇರಬೇಕು
ಬೇಕಾಗುವ ದಾಖಲೆಗಳು:-
* ಯೋಜನೆಯ ನೆರವು ಕೋರಿ ಬರೆದ ಮನವಿ ಪತ್ರ
* ತಂದೆ ಇಲ್ಲದ ಮಕ್ಕಳ ತಂದೆಯ ಮರಣ ಪ್ರಮಾಣ ಪತ್ರ
* ತಾಯಿ ವಿಚ್ಚೇದಿತರಾಗಿದ್ದರೆ ನ್ಯಾಯಾಲಯದ ಆದೇಶ
* ಕುಟುಂಬದಿಂದ ಪರಿತ್ಯಕ್ತಳಾಗಿದ್ದರೆ ಪರಿತ್ಯಕ್ತ ಪ್ರಮಾಣ ಪತ್ರ
* ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ ವೈದ್ಯರಿಂದ ಪಡೆದ ಧೃಡೀಕರಣ ಪತ್ರ
* ನೈಸರ್ಗಿಕ ವಿಕೋಪಕ್ಕೆ ಒಳಗಾಗಿ ಮನೆ ಕಳೆದುಕೊಂಡವರಿಗೆ ಸಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರ
* ಸಕ್ಷಮ ಪ್ರಾಧಿಕಾರ ನೀಡಿದ ಆದಾಯ ಪ್ರಮಾಣ ಪತ್ರ
* ಶಾಲಾ ವ್ಯಾಸಾಂಗ ಪ್ರಮಾಣ ಪತ್ರ
* ಜನನ ಪ್ರಮಾಣ ಪತ್ರ
* ರೇಷನ್ ಕಾರ್ಡ್
* ಮಗು ಹಾಗೂ ಪೋಷಕರ ಆಧಾರ್ ಕಾರ್ಡ್
* ಮಗುವಿನ ಬ್ಯಾಂಕ್ ಖಾತೆ ವಿವರ (ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರಬೇಕು).
ಅರ್ಜಿ ಸಲ್ಲಿಸುವುದು ಹೇಗೆ
ನಿಮ್ಮ ಜಿಲ್ಲೆ ಅಥವಾ ತಾಲೂಕಿನಲ್ಲಿ ಇರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಭೇಟಿಯಾಗಿ ಮೇಲೆ ತಿಳಿಸಿದ ಪೂರಕ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಸಲ್ಲಿಸಬಹುದು
ಆಯ್ಕೆ ಪ್ರಕ್ರಿಯೆ
* ಅರ್ಜಿ ಸಲ್ಲಿಕೆ ಆದನಂತರ ಜಿಲ್ಲಾಧಿಕಾರಿ ಮುಖ್ಯಸ್ಥಿಕೆಯಲ್ಲಿ ಅರ್ಜಿಗಳ ಪರಿಶೀಲನೆ ನಡೆಯುತ್ತದೆ
* ಗೃಹ ತನಿಖೆ ಕೈಗೊಂಡು ಸದರಿ ವರದಿ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ
* ಅನುಮೋದನೆ ಆದ ನಂತರ DBT ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.
* ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ.