Corp Insurance
ಕೇಂದ್ರ ಸರ್ಕಾರ(Central Govt)ದ ಹವಾಮಾನ ಆಧರಿತ ಬೆಳೆ ವಿಮೆ(Crop insurance)ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ ತಿಂಗಳ ಅಂತ್ಯದವರೆಗೆ ವಿಸ್ತರಿಸಲು ಗ್ರೀನ್ ಸಿಗ್ನಲ್ ನೀಡಲಾಗಿದ್ದು, ರಾಜ್ಯದ ರೈತ(farmer)ರಿಗೆ ಈ ಅಬ್ಬರದ ಮಳೆಯ ನಡುವೆ ಗುಡ್ ನ್ಯೂಸ್ ಸಿಕ್ಕಿದೆ.
ರಾಜ್ಯ ಸರ್ಕಾರ(State Govt)ವು ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ(Raitha Suraksha Pradhan Mantri Fasal Bhima Yojana)ಯ ಅಡಿಯಲ್ಲಿ ರೈತರಿಗೆ ಬೆಳೆ ವಿಮೆ (Crop Incurance) ನೀಡಲು ಮುಂದಾಗಿದ್ದು , ಇದರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅವಧಿ ವಿಸ್ತರಿಸುವುದಾಗಿ ಮಾಹಿತಿ ಲಭ್ಯವಾಗಿದೆ. ಆಸಕ್ತ ರೈತರು ಕೂಡಲೇ ಬರಗಾಲದಿಂದ ನಷ್ಟ ಅನುಭವಿಸಿದ ನಿರ್ದಿಷ್ಟ ಬೆಳೆಗೆ ವಿಮೆಯನ್ನು ಪಡೆಯಬಹುದಾಗಿದೆ.
ಹಾಗಾದರೆ, ಏನಿದು ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ? ನೀವು ಸಹ ಅರ್ಜಿ ಸಲ್ಲಿಸಲು ಆಸಕ್ತರೆ? ಆದರೆ ಬೆಳೆ ವಿಮೆ ಅರ್ಜಿ ಸಲ್ಲಿಕೆ ಬೇಕಾಗುವ ದಾಖಲೆಗಳು ಅಥವಾ ಅರ್ಹತೆಗಳು ಏನು? ಎನ್ನುವ ಗೊಂದಲ ಇದ್ದರೆ, ಈ ಲೇಖನದಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಈ ಸುದ್ದಿ ಓದಿ:- Ganga Kalyana Scheme : ಸರ್ಕಾರದಿಂದ ರೈತರಿಗೆ ಉಚಿತ ಬೋರ್‌ವೆಲ್ ಪಡೆಯಲು ಅರ್ಜಿ ಆಹ್ವಾನ.!
ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆನ್ಸೆನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾದ ಬಳಿಕ ಕೆಲ ಕಾರಣಕ್ಕೆ ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ಸಂಸತ್ತಿನಲ್ಲಿ ನಾನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೆ ತಂದಿದ್ದು.
ನನ್ನ ಈ ಮನವಿಗೆ ಸ್ಪಂದಿಸಿ ಅವರು ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಈ ವಿಷಯ ತಿಳಿಸಿದ್ದು, ರಾಜ್ಯದ ರೈತರು ಈ ಯೋಜನೆಯ ಸದುಪಯೋಗ ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ.
ಇನ್ನೂ ಈ ಕುರಿತು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಉಡುಪಿ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ರೈತಾಪಿ ವರ್ಗ ಕೇಂದ್ರ ಸರ್ಕಾರದ ಹವಾಮಾನ ಆಧಾರಿತ ಬೆಳೆ ವಿಮೆಯ ಸದುಪಯೋಗ ಪಡೆಯುತ್ತಿದ್ದು ಪ್ರಸ್ತುತ ಆನ್ಲೈನ್ ಅರ್ಜಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಹಲವಾರು ತೊಡಕುಗಳಿಂದ ರೈತರಿಗೆ ದಾಖಲಾತಿಗಳೊಂದಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ.
ಈ ಸುದ್ದಿ ಓದಿ:- Ration Card: ಹೊಸ ರೇಷನ್ ಕಾರ್ಡ್, ಹೆಸರು ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ.! ಯಾವ್ಯಾವ ದಾಖಲೆಗಳು ಬೇಕು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಆದ್ದರಿಂದ ಜುಲೈ ತಿಂಗಳ ಅಂತ್ಯದಲ್ಲಿ ಮುಗಿಯುವ ಬೆಳೆ ವಿಮೆ ಅವಧಿಯನ್ನು ಆಗಸ್ಟ್ ತಿಂಗಳ ಅಂತ್ಯದವರೆಗೆ ವಿಸ್ತರಿಸಿ ರೈತಾಪಿ ವರ್ಗಕ್ಕೆ ಸಹಾಯ ಮಾಡಬೇಕೆಂದು ಗೌರವಾನ್ವಿತ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್‌ಅವರಲ್ಲಿ ಸಂಸತ್ತಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಇನ್ನು, ಮನವಿಗೆ ಸ್ಪಂದಿಸಿದ ಸಚಿವರಿಗೆ ಧನ್ಯವಾದವನ್ನ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ?
– ರೈತರು ಆಹಾರ ಬೆಳೆ: ರೈತರಿಗೆ ಆಹಾರ ಬೆಳೆಗಳ ವಿಮೆಯ ಅರ್ಜಿ ಸಲ್ಲಿಕೆಗೆ 31-07-2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
– ಎಣ್ಣೆಕಾಳು ಮತ್ತು ವಾರ್ಷಿಕ ವಾಣಿಜ್ಯ ಬೆಳೆಗಳು: ಈ ಬೆಳೆಗಳ ವಿಮೆಯ ಅರ್ಜಿ ಸಲ್ಲಿಕೆ ಮಾಡಲು ರೈತರಿಗೆ 15-01-2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
– ತೋಟಗಾರಿಕಾ ಬೆಳೆ: ರೈತರಿಗೆ ತೋಟಗಾರಿಕಾ ಬೆಳೆಗಳ ವಿಮೆಯ ಅರ್ಜಿ ಸಲ್ಲಿಕೆಗೆ 31-07-2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
ಬೆಳೆ ವಿಮೆ ನೊಂದಣಿ ಮಾಡಿಸಲು ಬೇಕಾಗುವ ದಾಖಲೆಗಳು?
– ಬ್ಯಾಂಕ್ ಖಾತೆಯ ವಿವರಗಳು
– ಗುರುತಿನ ದಾಖಲೆ (ಆಧಾರ್ ಕಾರ್ಡ್)
– ಜಮೀನಿಗೆ ಸಂಬಂದಿತ ದಾಖಲೆಗಳು (ಪಹಣಿ ಪತ್ರ)
ರೈತರು ಬೆಳೆ ವಿಮೆಯ (Crop Insurance) ಅರ್ಜಿ ಸಲ್ಲಿಕೆ ಮಾಡಲು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ (CSC) ಭೇಟಿ ನೀಡಬಹುದು ಅಥವಾ ಕರ್ನಾಟಕ್ ಒನ್ ಅಥವಾ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.