Corp Insurance: ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್.!

Corp Insurance

ರೈತರ ಬೆಳೆ ವಿಮೆ ಪಾವತಿ(Farmers’ Crop Insurance Payment) ವಿಳಂಬವಾದಲ್ಲಿ ಸಂಬಂಧಿಸಿದ ಕಂಪನಿ(Company)ಗಳ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಿದ್ದು, ಈ ದಂಡ(Punishment)ದ ಹಣ(Money) ನೇರವಾಗಿ ರೈತರ ಖಾತೆ(Farmers’ Account)ಗೆ ಜಮಾ ಆಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ(Central Agriculture and Farmers’ Welfare and Rural Development) ಸಚಿವ ಶಿವರಾಜ್ ಸಿಂಗ್ ಚೌಹಣ್(Shivraj Singh Chauhan ಹೇಳಿದ್ದಾರೆ.

ಈ ಸುದ್ದಿ ಓದಿ:- SBI Recruitment: ಸ್ಟೇಟ್​ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ವೇತನ:85,920 ಆಸಕ್ತರು ಅರ್ಜಿ ಸಲ್ಲಿಸಿ.!

ಸಂಸತ್‌ನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ(Prime Minister Fasal Bhima Plan) ಕುರಿತಾಗಿ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಹಳೆಯ ಬೆಳೆ ವಿಮೆ ಯೋಜನೆಯಲ್ಲಿ ಅನೇಕ ಗೊಂದಲಗಳಿದ್ದವು. ಪ್ರೀಮಿಯ ಮೊತ್ತ ಹೆಚ್ಚಾಗಿತ್ತು. ವಿಮೆ ಹಣ ಪಾವತಿಯಲ್ಲಿ ವಿಳಂಬವಾಗುತ್ತಿತ್ತು. ಮೊದಲು ಕೇವಲ 3.51 ಕೋಟಿ ಅರ್ಜಿ ಬರುತ್ತಿದ್ದವು. ಪ್ರಧಾನಿ ಮೋದಿ ಹೊಸ ಯೋಜನೆ ಪರಿಚಯಿಸಿದ ನಂತರ 8.69 ಕೋಟಿ ಅರ್ಜಿ ಸಲ್ಲಿಕೆಯಾಗಿವೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

ಯೋಜನೆಯ ಲಾಭ ಪಡೆದುಕೊಳ್ಳಲು ರೈತರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಸರಳೀಕರಣಗೊಳಿಸಲಾಗುತ್ತಿದೆ. ಬೆಳೆ ವಿಮೆ ಹಣ ಜಮಾ ವಿಳಂಬವಾದಲ್ಲಿ ಕಂಪನಿಗಳಿಗೆ ಶೇಕಡ 12ರಷ್ಟು ದಂಡ ವಿಧಿಸಲಿದ್ದು, ಅದನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಫಸಲ್ ಭಿಮಾದಿಂದ ಅನುಕೂಲ

ಹಿಂದಿನ ಬೆಳೆ ವಿಮೆ ಯೋಜನೆಗಳಲ್ಲಿ ಅನೇಕ ತೊಂದರೆಗಳಿದ್ದವು. ಕಂತಿನ ಮೊತ್ತ ಜಾಸ್ತಿ ಇತ್ತು. ವಿಮೆದಾರರಿಗೆ ಹಣ ಸಂದಾಯದಲ್ಲಿ ವಿಳಂಬ ಮಾಡಲಾಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಜಾರಿಗೆ ತಂದರು. ಆನಂತರ ಎಲ್ಲವೂ ಬದಲಾಯಿತು ಎಂದು ವಿವರಿಸಿದರು.

ಈ ಹಿಂದೆ ವಾರ್ಷಿಕ ಕೇವಲ 3.51 ಕೋಟಿ ಅರ್ಜಿಗಳು ಬರುತ್ತಿದ್ದವು. ಈಗ 8.69 ಕೋಟಿ ಅರ್ಜಿಗಳು ಬಂದಿವೆ. ಏಕೆಂದರೆ ರೈತರಿಗೆ ವಿಶ್ವಾಸವಿದೆ. ಕಾಂಗ್ರೆಸ್‌ ಅಡಳಿತವಿದ್ದಾಗ ಸಾಲ ಪಡೆಯದ ರೈತರಿಂದ ಕೇವಲ 20 ಲಕ್ಷ ಅರ್ಜಿಗಳು ಬರುತ್ತಿದ್ದವು, ಈಗ ಅಂತಹ ರೈತರಿಂದ 5.48 ಕೋಟಿ ಅರ್ಜಿಗಳು ಬಂದಿವೆ. ಹಿಂದಿನ ಸರಕಾರದಲ್ಲಿ ಒಟ್ಟು ರೈತರ ಅರ್ಜಿಗಳು 3.71 ಕೋಟಿ ಇದ್ದವು. ಅದು ಈಗ 14.17 ಕೋಟಿಗೆ ಏರಿದೆ. ರೈತರು 32,440 ಕೋಟಿ ರೂಪಾಯಿಗಳ ಕಂತು ಪಾವತಿಸಿದ್ದರೆ, ಅವರಿಗೆ ಸಂದಾಯವಾದ ಹಣ 1.64 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ವಿವರಿಸಿದರು.

ವಿಮಾ ಕಂಪನಿಗಳಿಗೆ ಎಚ್ಚರಿಕೆ

ಈಗ ವಿಮೆ ಕಡ್ಡಾಯವಲ್ಲ. ಹಿಂದೆ ಸಾಲ ಮುಕ್ತ ರೈತರಿಗೆ ವಿಮೆ ಸಿಗುತ್ತಿರಲಿಲ್ಲ. ಆದರೆ, ಈಗ ರೈತರು ಬಯಸಿದರೆ ವಿಮೆ ಪಡೆಯಬಹುದು. ಈಗ ವಿಮೆ ವ್ಯಾಪ್ತಿಗೆ 3.97 ಕೋಟಿ ರೈತರು ಬಂದಿದ್ದಾರೆ. ವಿಮೆಯನ್ನು ಕ್ಲೈಮ್‌ ಮಾಡಿದಾಗ ಈಗ ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ ಎಂದು ವಿಮಾ ಕಂಪನಿಗಳಿಗೆ ತಾಕೀತು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರವು ಜಾರಿಗೆ ತಂದಿರವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)ಯು ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಅನಿರೀಕ್ಷಿತ ಘಟನೆಗಳಿಂದ ಆಗುವ ಬೆಳೆ ನಷ್ಟ/ಹಾನಿಗಳಿಗೆ ರೈತರಿಗೆ ಆರ್ಥಿಕ ನೆರವು ನೀಡುವುದು. ಕೃಷಿಯಲ್ಲಿ ರೈತರ ನಿರಂತರತೆ ಖಚಿತಪಡಿಸಿಕೊಳ್ಳಲು ಆದಾಯ ಸ್ಥಿರಗೊಳಿಸುವುದು ನೂತನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸುವುದು.

ಈ ಸುದ್ದಿ ಓದಿ:- Gruhalakshmi: ಇನ್ನೂ ನಿಮ್ಮ ಖಾತೆಗೆ ʻಗೃಹಲಕ್ಷ್ಮಿʼ ಹಣ ಜಮೆ ಆಗಿಲ್ಲವೇ.? ಇಲ್ಲಿದೆ ಪರಿಹಾರ

ಕೃಷಿ ವಲಯಕ್ಕೆ ಸಾಲದ ಹರಿವನ್ನು ಖಾತರಿಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ಆಹಾರ ಭದ್ರತೆ, ಬೆಳೆ ವೈವಿಧ್ಯೀಕರಣ ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ ರೈತರನ್ನು ಉತ್ಪಾದನಾ ಅಪಾಯಗಳಿಂದ ರಕ್ಷಿಸುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment