ಸಾಲ ಮನ್ನಾ
ಕಳೆದ ವಾರ ಕರ್ನಾಟಕ ರಾಜ್ಯದ ನೆರೆಯ ರಾಜ್ಯವಾದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ರೈತರ ಸಾಲ ಮನ್ನಾ ಘೋಷಣೆ ಮಾಡಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಾರಂಗಲ್ ನಲ್ಲಿ ನಡೆದ ಸಮಾರಂಭ ಒಂದರಲ್ಲಿ ರೈತರ ಬಗ್ಗೆ ಮಾತನಾಡುತ್ತಾ ರೈತರ ಅಭಿವೃದ್ಧಿಗೆ ನಾಡಿನ ಅಭಿವೃದ್ಧಿ, ರೈತರಿಗೆ ಕೃಷಿ ಚಟುವಟಿಕೆ ಸಂಭ್ರಮವಾಗಬೇಕು ಹೊರತು ಕಣ್ಣೀರಾಗಬಾರದು ಹಾಗಾಗಿ ರೈತನಿಗೆ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎನ್ನುವುದೇ ನಮ್ಮ ಸರ್ಕಾರದ ಧ್ಯೇಯ.
ಹೀಗಾಗಿ ರೂ.2 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದರು. ಈ ಹಿಂದೆ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಪ್ರಚಾರದ ವೇಳೆ ರೈತರಿಗೆ ಈ ಭರವಸೆಯನ್ನು ಕೊಟ್ಟಿದ್ದರು. ಅದರಂತೆ ಈಗ ಕೃಷಿ ಸಾಲ ಮನ್ನಾ ಆಗಿದೆ ಇದರ ಬೆನ್ನೆಲ್ಲೇ ಸಹಜವಾಗಿ ರಾಜ್ಯದಲ್ಲೂ ಇಂತಹ ನಿರೀಕ್ಷೆಗಳು ಹೆಚ್ಚಾಗುತ್ತಿದೆ ಕಳೆದ ವರ್ಷ ನಮ್ಮ ರಾಜ್ಯದಲ್ಲೂ ಕೂಡ ಭೀಕರ ಬರಗಾಲದ ಪರಿಸ್ಥಿತಿ ಎದುರಾಯಿತು.
ಮುಂಗಾರು ಮಳೆ ವೈಫಲ್ಯದಿಂದ ಆರಂಭದಿಂದಲೂ ಕೂಡ ಕೃಷಿ ಚಟುವಟಿಕೆ ಅಡಚಣೆಗಳಾಗಿ ಕೆಲವು ಕಡೆ ಸಂಪೂರ್ಣವಾಗಿ ಕೃಷಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಕಾಡಿದ್ದರೆ ಇನ್ನು ಕೆಲವೆಡೆ ಬಿದ್ದ ಮಳೆ ನಂಬಿ ಬಿತ್ತನೆ ಮಾಡಿದರು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬರದೇ ನಷ್ಟವಾಗಿದೆ. ಹಾಗಾಗಿ ಸಮೀಕ್ಷೆಯನ್ನು ನಡೆಸಿ NDRF ಕೈಪಿಡಿ ಅನ್ವಯ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕಳೆದ 70 ವರ್ಷಗಳ ಇತಿಹಾಸದಲ್ಲಿ ಕಳೆದ ಸಾಲಿನಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಮಳೆ ಉಂಟಾಗಿದ್ದು ಹಾಗೂ ರೈತನಿಗ ಅಪಾರ ನಷ್ಟವಾಗಿದ್ದು ಎನ್ನುವ ಮಾತುಗಳೇ ಇವೆ.
ಹೀಗಾಗಿ ಸರ್ಕಾರವು ಸಾಲ ಮನ್ನಾ ಮಾಡುವ ಮೂಲಕ ರೈತನ ಸಮಸ್ಯೆ ಪರಿಹರಿಸುತ್ತದೆ ಎಂದು ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳ ಮೂಲಕ ರೈತರಿಗೆ ಅನುಕೂಲತೆಗಳು ಸಿಗುತ್ತಿವೆ. ಪ್ರೋತ್ಸಾಹ ಧನ ಮತ್ತು ಈ ವರ್ಷ ಬೆಳೆ ಪರಿಹಾರ ಬರಗಾಲದ ಪರಿಹಾರ ಸೇರಿದಂತೆ ಹಣಕಾಸಿನ ನೆರವನ್ನು ಕೂಡ ನೀಡಲಾಗಿದೆ. ಆದರೂ ಕೃಷಿ ಸಾಲ ಮನ್ನವಾದರೆ ಹೆಚ್ಚು ಅನುಕೂಲ ಎಂದು ರೈತರು ಈ ಬಗ್ಗೆ ಆಗ್ರಹಿಸುತ್ತಿದ್ದಾರೆ. ಆದರೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟವು ಈ ಬಗ್ಗೆ ಇನ್ನು ಚರ್ಚೆಯಲ್ಲಿದೆ.
ಸದ್ಯಕ್ಕೆ ತಿಳಿದು ಬಂದಿರುವ ಬಲವಾದ ಮೂಲಗಳ ಮಾಹಿತಿ ಪ್ರಕಾರವಾಗಿ ಮಾನ್ಯ ಮುಖ್ಯಮಂತ್ರಿಗಳು ಇನ್ನೂ ಸಹ ಸ್ಪಷ್ಟವಾಗಿ ರೈತರ ಕೃಷಿ ಸಾಲ ಮನ್ನಾ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ. ಯಾಕೆಂದರೆ ರಾಜ್ಯದಲ್ಲಿ ಈಗ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ ಮತ್ತು ಈ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಈ ಗ್ಯಾರಂಟಿ ಯೋಜನಾ ಪ್ರಯೋಜನ ಪಡೆಯುತ್ತಿರುವವರಲ್ಲಿ ರೈತರ ಕುಟುಂಬಗಳು ಕೂಡ ಸೇರಿವೆ ಹಾಗಾಗಿ ರೈತನಿಗೂ ಅನುಕೂಲವಾಗುತ್ತದೆ.
ಇದರ ಜೊತೆಗೆ ಬರ ಪರಿಹಾರ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳ ಮೂಲಕ ಇನ್ನಷ್ಟು ರೈತರಿಗೆ ನೆರವಾಗುವ ಪ್ರಯತ್ನ ಸರ್ಕಾರ ಮಾಡುತ್ತದೆ. ಕಳೆದ ವರ್ಷ ಸಹಕಾರಿ ಸಂಘಗಳ ಮಧ್ಯಮಾವತಿ ಸಾಲದ ಮೇಲಿನ ಬಡ್ಡಿಯನ್ನು ಮನ್ನ ಮಾಡಿದ್ದೇವೆ ಆದರೆ ಒಂದೇ ಬಾರಿಗೆ ರೈತನ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಾಗುವುದಿಲ್ಲ ಎಂದು ನುಡಿದಿದ್ದಾರೆ ಎಂಬ ಮಾಹಿತಿಯ ತಿಳಿದು ಬಂದಿದೆ.
2018ನೇ ಇಸ್ವಿಯಲ್ಲಿ ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸರ್ಕಾರವು ರಾಜ್ಯದ ಸುಮಾರು 17 ಲಕ್ಷಕ್ಕೂ ಹೆಚ್ಚಿನ ರೈತರ ರೂ. 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿತ್ತು. ಈಗ ನೆರೆಯ ತೆಲಂಗಾಣ ರಾಜ್ಯದಲ್ಲಿ ಆಡಳಿತದಲ್ಲಿ ಇರುವುದು ಕೂಡ ಕಾಂಗ್ರೆಸ್ ಪಕ್ಷವೇ ಆಗಿದೆ ಮತ್ತು ಅಲ್ಲಿ ರೂ.2ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗಿರುವುದರಿಂದ ನಮ್ಮ ರಾಜ್ಯದಲ್ಲೂ ಕೂಡ ಇದೇ ರೀತಿ ನಿರ್ಧಾರಕ್ಕೆ ಬರುತ್ತಾರೆ ಎನ್ನುವ ನಂಬಿಕೆ ಮೇಲೆ ಅಗ್ರಹ ಜೋರಾಗಿತ್ತು.
ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಬೇರೆಯದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಹಾಗಾಗಿ ಸದ್ಯಕ್ಕೆ ಈ ವರ್ಷ ಸಾಲ ಮನ್ನಾ ಮಾಡುವ ಸಾಧ್ಯತೆ ಕಡಿಮೆ ಎಂದೇ ಅಂದು ಕೊಳ್ಳಬಹುದು ಅಥವಾ ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಮನಸ್ಸು ಮಾಡುತ್ತದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.