Torn Note
ಡಿಜಿಟಲ್ ಇಂಡಿಯಾ ಎನ್ನುವ ಕಾನ್ಸೆಪ್ಟ್ ಗೆ ಭಾರತ ಬಹುಬೇಗ ಹೊಂದಿಕೊಳ್ಳುತ್ತಿದೆ ಎಂದು ಹೇಳಬಹುದು. ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಂತೂ ಹೊಸ ಕ್ರಾಂತಿಯೇ ನಡೆದಿದೆ. ನೋಟ್ ಅಮಾನ್ಯೀಕರಣವಾದ ಸಂದರ್ಭದಲ್ಲಿ ಉಂಟಾದ ಅನಿವಾರ್ಯತೆಯೋ ಅಥವಾ ಇಂಟರ್ನೆಟ್ ಸೌಲಭ್ಯ ಹೊಂದಿರುವ ಆಂಡ್ರಾಯ್ಡ್ ಮೊಬೈಲ್ ಗಳು ಎಲ್ಲರ ಕೈ ಸೇರಿರುವುದೇ ಈ ರೂಢಿ ಮಾಡಿಸಿತೋ ಗೊತ್ತಿಲ್ಲ ಜನರು ಅತಿ ಹೆಚ್ಚು ವಹಿವಾಟನ್ನು ಆನ್ಲೈನ್ ಮೂಲಕವೇ ಮಾಡುತ್ತಿದ್ದಾರೆ.
ಸಣ್ಣ ಪುಟ್ಟ ತರಕಾರಿ ಅಂಗಡಿ ವ್ಯಾಪಾರದಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ವರೆಗೆ UPI ಆಧಾರಿತ ಆಪ್ ಗಳ ಮೂಲಕವೇ ವಹಿವಾಟು ನಡೆಯುತ್ತಿದೆ ಆದರೆ ಸಂಪೂರ್ಣವಾಗಿ ಕ್ಯಾಶ್ ಲೆಸ್ ಆಗದಿದ್ದರೂ ಲೆಸ್ಕಾಶ್ ಕಾನ್ಸೆಪ್ಟನ್ನು ಚಾಲ್ತಿಯಲ್ಲಿದೆ ಎಂದು ಒಪ್ಪಬಹುದು. ನಗದು ಹಣ ಓಡಾಡುವುದು ಕಡಿಮೆ ಆಗಿದೆ ಎನ್ನುವುದನ್ನು ನಾವೇ ಗಮನಿಸಿದ್ದರೂ ಸಂಪೂರ್ಣವಾಗಿ ಎಲ್ಲಾ ಕಡೆಯೂ ಆನ್ಲೈನ್ ನನ್ನೇ ನಂಬಿ ಬದುಕಲು ಆಗುವುದಿಲ್ಲ ಎನ್ನುವ ಅನುಭವ ಕೂಡ ಪಡೆದಿರುತ್ತೇವೆ.
ಈ ಸುದ್ದಿ ಓದಿ:- Bank Loan: ಪರ್ಸನಲ್ ಲೋನ್, ವೆಹಿಕಲ್ ಲೋನ್, ಹೋಂ ಲೋನ್, ಇನ್ನಿತರ ಸಾಲ ಇದೆಯೇ.? EMI ಕಟ್ಟುತ್ತಿದ್ದೀರಾ.? ಆಗಿದ್ರೆ ನಿಮಗೊಂದು ಗುಡ್ ನ್ಯೂಸ್.!
ಈ ನಗದು ವಹಿವಾಟಿನ ಸಂದರ್ಭಗಳಲ್ಲಿ ನಾವು ಹೆಚ್ಚಾಗಿ ಅನುಭವಿಸುವ ಒಂದು ಸಮಸ್ಯೆ ಎಂದರೆ ನೀವು ಕೊಟ್ಟ ನೋಟ್ ಹಿಡಿಯುವುದಿಲ್ಲ ಎಂದು ಹೇಳುವುದು. ನಮ್ಮ ಹಣದ ನೋಟುಗಳು ಹಳೆಯದಾಗಿರುವ ಕಾರಣ, ಹರಿದು ಹೋದ ಕಾರಣ, ಮಣ್ಣು ಇಂಕು ಅಥವಾ ಇನ್ನೇನಾದರೂ ಬಹಳ ಕೊಳಕಾದ ಕಾರಣ ಈ ರೀತಿ ಹೇಳಿರುತ್ತಾರೆ.
ಆ ನೋಟಿಗೆ ಈ ರೀತಿ ಆದ ಮಾತ್ರಕ್ಕೆ ಆ ಹಣಕ್ಕಿರುವ ವ್ಯಾಲ್ಯೂ ಕಡಿಮೆ ಆಗುವುದಿಲ್ಲ ಎನ್ನುವುದು ನಿಮಗೆ ಗೊತ್ತಿರಲಿ. ನೋಟು ಹರಿದಿರುವ ಅಥವಾ ಮಣ್ಣಾಗಿರುವ ಅಥವಾ ನೀವು ಕೊಡುತ್ತಿರುವ ಆ ನೋಟನ್ನು ಹಾಳಾಗಿದೆ ಎನ್ನುವ ಕಾರಣಕ್ಕೆ ಯಾರು ಸ್ವೀಕರಿಸುತ್ತಿಲ್ಲ ಎನ್ನುವ ಸಂದರ್ಭ ಬಂದಿದ್ದರೆ ನೀವು ನೇರವಾಗಿ ಬ್ಯಾಂಕ್ ಗಳಿಗೆ ಹೋಗುವ ಮೂಲಕ ಆ ಹಣಕ್ಕೆ ಎಕ್ಸ್ಚೇಂಜ್ ಪಡೆಯಬಹುದು.
ಆದರೆ ಇಲ್ಲೂ ಕೂಡ ಒಂದೆರಡು ನಿಯಮಗಳಿವೆ. ಇವುಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ಹರಿದಿರುವ ಅಥವಾ ಹಳೆಯ ನೋಟಿಗೆ ಎಕ್ಸ್ಚೇಂಜ್ ಸಿಗುತ್ತದೆ. ಆ ನಿಯಮಗಳು ಹೀಗಿವೆ ನೋಡಿ.
ಈ ಸುದ್ದಿ ಓದಿ:- PM Kaushal Vikas Yojan: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 8,000 ಸಿಗಲಿದೆ.!
• ಮೊದಲನೇದಾಗಿ ನೀವು ಎಕ್ಸ್ಚೇಂಜ್ ಕೊಡುತ್ತಿರುವ ನೋಟಿನಲ್ಲಿ ಆ ನೋಟಿನ ಸಂಖ್ಯೆಗಳು ಕಾಣಿಸುವ ರೀತಿ ಇರಬೇಕು ಅದನ್ನು ಪರಿಶೀಲನೆ ಮಾಡಿದ ನಂತರವೇ ಬ್ಯಾಂಕ್ ನಿಮಗೆ ಎಕ್ಸ್ಚೇಂಜ್ ನೋಟ್ ಕೊಡಲು ಸಾಧ್ಯ ಜೊತೆಗೆ ಅದರಲ್ಲಿ ಭದ್ರತೆಯ ಚಿಹ್ನೆಗಳು ಕೂಡ ಕಾಣುವಂತಿರಬೇಕು ಎನ್ನುವುದು ಗೊತ್ತಿರಲಿ.
• ರೂ.5,000 ಕ್ಕಿಂತ ಹೆಚ್ಚು ಬೆಲೆಯ ನೋಟ್ ಗಳು ಹರಿದು ಹೋಗಿದ್ದರೆ ಬ್ಯಾಂಕ್ ಆ ನೋಟುಗಳ ಮೌಲ್ಯದ ಆಧಾರದ ಮೇಲೆ ಎಕ್ಸ್ಚೇಂಜ್ ಗೆ ಶುಲ್ಕ ವಿಧಿಸುತ್ತದೆ
• ನೀವು ನೀಡುತ್ತಿರುವ ನೋಟುಗಳು ಒರಿಜಿನಲ್ ನೋಟ್ ಗಳು ಆಗಿದ್ದರೆ ಮಾತ್ರ ಎಕ್ಸ್ಚೇಂಜ್ ಸಿಗುತ್ತದೆ ನಕಲಿ ನೋಟುಗಳಿಗೆ ಎಕ್ಸ್ಚೇಂಜ್ ಮಾಡಲು ಹೋದರೆ ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿ ಕಂಫರ್ಮ್ ಮಾಡಿಕೊಂಡು ನಿಮ್ಮನ್ನು ಪೊಲೀಸರಿಗೆ ಒಪ್ಪಿಸುತ್ತಾರೆ ಎಚ್ಚರಿಕೆ ಇರಲಿ.
• ಅಂತೆಯೇ ಯಾವುದಾದರೂ ಬ್ಯಾಂಕ್ ಒಂದು ವೇಳೆ ನಿಮ್ಮ ನೋಟಿಗೆ ಎಕ್ಸ್ಚೇಂಜ್ ಕೊಡಲು ಒಪ್ಪದೇ ಹೋದರೆ ನೀವು ಆ ಬ್ಯಾಂಕ್ ಮೇಲೆ RBI ಗೆ ದೂರು ಸಲ್ಲಿಸಬಹುದು. ಹೀಗಾಗಿ ಇನ್ನು ಮುಂದೆ ನಿಮಗೆ ಹರಿದಿರುವ ನೋಟ್ ಬಂದರೆ ಬೇಜಾರು ಆಗದೆ ಆಯಾ ಬ್ಯಾಂಕ್ ನಿಯಮಗಳ ಅನುಸಾರ ಎಕ್ಸ್ಚೇಂಜ್ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.