Property
2006ರ ಹಿಂದೂ ಉತ್ತರಾಧಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಅಧಿಕಾರ ಹೊಂದಿದ್ದಾರೆ. ಹೀಗಿದ್ದು ಕೂಡ ಅನೇಕರಿಗೆ ಈಗಲೂ ಸಹ ತಮ್ಮ ತವರು ಮನೆ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಇರುವುದಿಲ್ಲ.
ಯಾವ ಯಾವ ಸಂದರ್ಭಗಳಲ್ಲಿ ಈ ರೀತಿ ಹೆಣ್ಣು ಮಕ್ಕಳು ತವರು ಮನೆಯ ತಮ್ಮ ಭಾಗದ ಮೇಲಿನ ಅಧಿಕಾರ ಕಳೆದುಕೊಳ್ಳುತ್ತಾರೆ, ಯಾಕೆ ಅವರು ಅದರಲ್ಲಿ ಪಾಲು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ? ಎನ್ನುವ ಪ್ರಮುಖ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಸಂದರ್ಭಗಳು:-
* 2005ಕ್ಕಿಂತ ಮುಂಚೆಯೇ ಅವಿಭಕ್ತ ಕುಟುಂಬದಲ್ಲಿ ಆಸ್ತಿಯು ವಿಭಾಗವಾಗಿ ಈಗಾಗಲೇ ಅವರವರ ಪಾಲಿನ ಆಸ್ತಿಯೂ ವಿಲೇವಾರಿಯಾಗಿ ಹೋಗಿದ್ದರೆ ಅಂದರೆ ಈ ಮೇಲೆ ತಿಳಿಸಿದಂತೆ ಹಿಂದೂ ಉತ್ತರಾಧಿತ್ವ ಕಾಯ್ದೆ ತಿದ್ದುಪಡಿ ಅನ್ವಯ ಕುಟುಂಬದಲ್ಲಿ ಅಣ್ಣ-ತಮ್ಮಂದಿರ ನಡುವೆ ಆಸ್ತಿಯು ಹಂಚಿಕೆಯಾಗಿ ಈಗ ಅವರ ಹೆಸರಿಗೆ ಆಗಿ ಅನುಭವಿಸಿಕೊಂಡು ಹೋಗುತ್ತಿದ್ದರೆಷಅಂತಹ ಆಸ್ತಿಗಳಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಲು ಬರುವುದಿಲ್ಲ.
ಈ ಸುದ್ದಿ ಓದಿ:-ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
* ಕುಟುಂಬದಲ್ಲಿ ಆಸ್ತಿ ಹಂಚಿಕೆ ಆಗುವ ಸಮಯದಲ್ಲಿ ಅಥವಾ ಅನಾರೋಗ್ಯ ಅಥವಾ ಕುಟುಂಬದಲ್ಲಿ ಹಣಕಾಸಿನ ಅನಿವಾರ್ಯತೆ ಇಂತಹ ಯಾವುದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ಪಾಲಿನ ಆಸ್ತಿಯನ್ನು ಬಿಟ್ಟು ಕೊಡುವುದಕ್ಕೆ ಹಕ್ಕು ಬಿಡುಗಡೆ ಪತ್ರ ಮಾಡಿ ನಂತರ ಹಲವು ವರ್ಷ ಆದಮೇಲೆ ಮನಸ್ಸು ಬದಲಾಯಿಸಿಕೊಂಡು.
ತನಗೂ ಆಸ್ತಿಯಲ್ಲಿ ಪಾಲು ಬೇಕು ಎಂದು ಮತ್ತೆ ಕೋರಿಕೊಳ್ಳುವುದಾದರೆ ಆಗಲು ಕೂಡ ಅಂತಹ ಕೇಸ್ ನಿಲ್ಲುವುದಿಲ್ಲ. ಒಮ್ಮೆ ಹಕ್ಕು ಬಿಡುಗಡೆ ಪತ್ರ ಮಾಡಿ ತಮ್ಮ ಪಾಲಿನ ಆಸ್ತಿ ಹಕ್ಕನ್ನು ತ್ಯಾಗ ಮಾಡಿದ ಮೇಲೆ ಮರಳಿ ಹಕ್ಕು ಪ್ರತಿಷ್ಠಾಪನೆ ಮಾಡುವುದು ಬಹಳ ಕಷ್ಟ
* ಕಾಲಮಿತಿ ಕಾಯ್ದೆ ಎನ್ನುವುದು ಕೂಡ ಅನ್ವಯ ಆಗುತ್ತದೆ ಇದರ ಪ್ರಕಾರ ತವರು ಮನೆಯಲ್ಲಿ ಆಸ್ತಿ ವಿಭಾಗ ಆಗುವ ಸಂದರ್ಭದಲ್ಲಿ ವಿಷಯ ಗೊತ್ತಿದ್ದು ಕೂಡ ಸುಮ್ಮನೆ ಇದ್ದು, ತಮ್ಮ ಪಾಲನ್ನು ಕೇಳದೆ ಅಥವಾ ಇದಕ್ಕಾಗಿ ಯಾವುದೇ ತಕರಾರು ಕೂಡ ತೆಗೆಯದೆ ಹಲವು ವರ್ಷ ಕಳೆದ ಮೇಲೆ.
ಮರಳಿ ಬಂದು ಪಾಲು ಮಾಡುವ ಸಂದರ್ಭದಲ್ಲಿ ನಮಗೆ ಏನನ್ನು ಕೂಡ ನೀಡಿಲ್ಲ ಎಂದು ಕೋರುವುದಾದರೆ ಅಂತಹ ಸಂದರ್ಭಗಳಲ್ಲಿ ಕೂಡ ಪಾಲು ಸಿಗುವುದು ಕಷ್ಟ. ಏಕೆಂದರೆ ಕಾಲಮಿತಿ ಕಾಯ್ದೆ ಅನ್ವಯ ಕಾನೂನು ಅದನ್ನು ಒಪ್ಪುವುದಿಲ್ಲ, ವಿಭಾಗ ಆಗುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಸುಮ್ಮನಿದ್ದರೂ ಎನ್ನುವ ಪ್ರಶ್ನೆ ಬರುತ್ತದೆ.
ಈ ಸುದ್ದಿ ಓದಿ:-ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!
* ಅದೇ ರೀತಿಯಾಗಿ ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬದಲ್ಲಿ ವಿಭಾಗ ಮಾಡಿಕೊಳ್ಳುವಾಗ ಒಂದು ವೇಳೆ ಆ ಆಸ್ತಿಯ ಮೇಲೆ ಯಾವುದಾದರೂ ಸಾಲಗಳು ಇದ್ದರೆ ಅಂತಹ ಸಾಲಗಳ ಋಣವನ್ನು ತೀರಿಸಲು ಹೆಣ್ಣು ಮಕ್ಕಳು ಒಪ್ಪದೇ ಹೋದರೆ ಆಗಲು ಕೂಡ ಆಸ್ತಿ ಮೇಲಿನ ಹಕ್ಕು ಬಿಟ್ಟು ಹೋಗಬಹುದು, ಆಸ್ತಿಯ ಹಕ್ಕಿನ ಜೊತೆಗೆ ಋಣ ಭಾರವನ್ನು ಕೂಡ ಪಾಲು ಪಡೆದುಕೊಳ್ಳುವುದಕ್ಕೆ ಒಪ್ಪಿಕೊಳ್ಳಲೇಬೇಕು.
* ತಂದೆ ಅಥವಾ ತಾಯಿಯು ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದರೆ ಮಾತ್ರ ಅದರಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಮಾನ ಪಾಲು ಸಿಗುತ್ತದೆ. ಒಂದು ವೇಳೆ ಇದು ತಂದೆ ತಾಯಿಯ ಸ್ವಯಾರ್ಜಿತ ಆಸ್ತಿ ಆಗಿದ್ದರೆ.
ಮಕ್ಕಳಿಗೆ ಆಗಲಿ ಅಥವಾ ಆ ಕುಟುಂಬದ ಯಾವುದೇ ಸದಸ್ಯನಿಗೆ ಆಗಲಿ ಪಾಲು ಕೇಳುವ ಅವಕಾಶವೇ ಸಿಗುವುದಿಲ್ಲ. ಒಂದು ವೇಳೆ ಪೋಷಕರು ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಯಾರ ಹೆಸರಿಗೂ ಮಾಡದೆ ವಿಲ್ ಕೂಡ ಮಾಡದೆ ಮೃ’ತಪಟ್ಟಿದ್ದ ಪಕ್ಷದಲ್ಲಿ ಈ ಮೇಲೆ ತಿಳಿಸಿದ ರೀತಿಯಲ್ಲಿ ಕಾನೂನುಗಳು ಅನ್ವಯವಾಗುತ್ತದೆ.