Health: ಇನ್ಮುಂದೆ ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ.!

Health

ರಾಜ್ಯದ ಜನತೆಗೆ ರಾಜ್ಯ ಸರ್ಕಾರ(State government) ಗುಡ್‌ ನ್ಯೂಸ್‌ ನೀಡಿದೆ. ಇನ್ಮುಂದೆ ನೀವು ಅನಾರೋಗ್ಯದ ಕಾರಣ ಆಸ್ಪತ್ರೆ(Hospital)ಗಳ ಮೆಟ್ಟಿಲು ಹತ್ತುವ ಚಿಂತೆ ಇಲ್ಲ. ಹೌದು, ಇನ್ಮುಂದೆ ನಿಮ್ಮ ಆರೋಗ್ಯ ತಪಾಸಣೆ(Health check) ನಿಮ್ಮ ಮನೆ(House) ಬಾಗಿಲಲ್ಲೇ ನಡೆಯಲಿದೆ.

ಹೌದು, ಮನೆ ಬಾಗಿಲಲ್ಲಿಯೇ ತಪಾಸಣೆ ನಡೆಸಿ, ಅಗತ್ಯ ಔಷಧಿ(Medicine)ಗಳನ್ನು ಒದಗಿಸುವ ಗೃಹ ಆರೋಗ್ಯ ಯೋಜನೆ(Home Health Plan)ಯನ್ನು ಮುಂದಿನ ತಿಂಗಳು ರಾಜ್ಯದಲ್ಲಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌(Dinesh Gundurao) ತಿಳಿಸಿದ್ದಾರೆ.

WhatsApp Group Join Now
Telegram Group Join Now

ಮಧುಮೇಹ(Diabetic) ಹಾಗೂ ಅಧಿಕ ರಕ್ತದೊತ್ತಡ(Hypertension) ಸಮಸ್ಯೆ ಎದುರಿಸುತ್ತಿರುವವರಲ್ಲಿ ಕೆಲವರು ನಿಯಮಿತವಾಗಿ ಮಾತ್ರೆಗಳನ್ನು ಸೇವಿಸುತ್ತಿಲ್ಲ….

ಈ ಸುದ್ದಿ ಓದಿ:- Property: ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತೆ.? ಕಾನೂನಾತ್ಮಕ ಆಸ್ತಿ ಪಡೆಯೋದು ಹೇಗೆ.? ಸಂಪೂರ್ಣ ಮಾಹಿತಿ.!

ಆರ್ಥಿಕ ಹೊರೆ ಸೇರಿ ವಿವಿಧ ಕಾರಣಗಳಿಂದ ಮಾತ್ರೆಗಳನ್ನು ಖರೀದಿಸುತ್ತಿಲ್ಲ. ಗೃಹ ಆರೋಗ್ಯ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಸಮಸ್ಯೆಯಾದ ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ರಸ್ತೆ, ವಿದ್ಯುತ್‌, ಕುಡಿಯುವ ನೀರು, ಕಾಳಜಿ ಕೇಂದ್ರ ಸೇರಿದಂತೆ ಅಗತ್ಯ ಪರಿಹಾರೋಪಾಯಗಳನ್ನು ಆರಂಭಿಸಲಾಗಿದೆ. ಮುಂದಿನ ವಾರ ಇನ್ನೂ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ಇದೆ. ವಿಪತ್ತು ನಿರ್ವಹಣೆಗೆ ಎಲ್ಲ ಇಲಾಖೆಗಳನ್ನೂ ಸಜ್ಜುಗೊಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿ ದಿನ 20 ಮನೆಗೆ ಭೇಟಿ

ಮಧ್ಯಾಹ್ನ ಮತ್ತು ಬೆಳಗಿನ ಅವಧಿಯಲ್ಲಿ ವಾರ ಮೂರು ದಿನ (ಸೋಮವಾರ, ಬುಧವಾರ ಹಾಗೂ ಶುಕ್ರವಾರ) ಆರೋಗ್ಯ ಸಿಬ್ಬಂದಿ ಪ್ರತಿ ದಿನ 20 ಮನೆಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಲಿದ್ದಾರೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರದ (ಎಚ್‌ಡಬ್ಲ್ಯುಸಿ) ವ್ಯಾಪ್ತಿಯಲ್ಲಿನ ಎಲ್ಲ ಮನೆಗಳನ್ನು 16 ವಾರಗಳಲ್ಲಿ ತಪಾಸಣೆ ಮಾಡಿ ಮುಗಿಸಬೇಕು.

ರಾಜ್ಯದ ಜನಸಾಮಾನ್ಯರ ಮನೆ ಅಂಗಳಕ್ಕೆ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಗೃಹ ಆರೋಗ್ಯ ಒಂದು ಮಹತ್ವದ ಕಾರ್ಯಕ್ರಮ. ಮೊದಲ ಹಂತದಲ್ಲಿ8 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗುತ್ತಿದೆ. ಉಚಿತವಾಗಿ ಜನರ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುತ್ತೇವೆ. ಈ ಯೋಜನೆಯಿಂದಾಗಿ ರಾಜ್ಯದ ಲಕ್ಷಾಂತರ ಜನರ ಜೀವ ರಕ್ಷಣೆಯಾಗಲಿದೆ ಎಂಬುದು ನನ್ನ ಭಾವನೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ಸುದ್ದಿ ಓದಿ:- Gruhalakshmi: ಇನ್ನೂ ನಿಮ್ಮ ಖಾತೆಗೆ ʻಗೃಹಲಕ್ಷ್ಮಿʼ ಹಣ ಜಮೆ ಆಗಿಲ್ಲವೇ.? ಇಲ್ಲಿದೆ ಪರಿಹಾರ

ಭೇಟಿ ನೀಡಿದ ಪ್ರತಿ ಮನೆಗೆ ಗೃಹ ಆರೋಗ್ಯ ಸ್ಟಿಕ್ಕರ್‌ ಅಂಟಿಸಲಾಗುತ್ತದೆ. ಅಸಾಂಕ್ರಾಮಿಕ ರೋಗಿಗಳಿರುವ (ಎನ್‌ಸಿಡಿ) ಮನೆಗಳನ್ನು ಗುರುತಿಸಲು ಕಲರ್‌ ಕೋಡೆಡ್‌ ಸ್ಟಿಕ್ಕರ್‌ಗಳನ್ನು ಬಳಸಲಾಗುತ್ತದೆ. ಈ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿ ಎನ್‌ಸಿಡಿ ಆ್ಯಪ್‌ನಲ್ಲಿ ನೋಂದಣಿ ಮಾಡುತ್ತಾರೆ.

ರೋಗಿಗಳಿಗೆ ಮಾಸಿಕ ಶಿಬಿರದ ಮೂಲಕ ತಪಾಸಣೆ

ಬಿಪಿ (ಅಧಕ ರಕ್ತದೊತ್ತಡ) ಮತ್ತು ಮಧುಮೇಹ ಹೊಂದಿರುವ ರೋಗಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮಾಸಿಕ ಶಿಬಿರಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ಮಾಸಿಕ ಶಿಬಿರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಅಂಗನವಾಡಿ, ಶಾಲೆ, ಪಂಚಾಯಿತಿ ಕಟ್ಟಡ ಮಂತಾದ ಸಾರ್ವಜನಿಕ ಸ್ಥಳಗಳಲ್ಲಿ ವೈದ್ಯಾಧಿಕಾರಿಗಳ ತಂಡ ಪ್ರತಿ 15 ದಿನಕ್ಕೊಮ್ಮೆ ನಡೆಸುತ್ತದೆ.

ರೋಗಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುತ್ತಾರೆ. ಈ ಉದ್ದೇಶಕ್ಕಾಗಿ ಎನ್‌ಸಿಡಿ ಕ್ಲಿನಿಕ್‌ ತಂಡಗಳನ್ನು ಕೂಡ ನಿಯೋಜನೆಗೆ ಅವಕಾಶ ಕಲ್ಪಿಸಲಾಗಿದೆ.

ತಪಾಸಣೆ ವಿಧಾನ

– ಮನೆ-ಮನೆಗೆ ತೆರಳುವ ಪ್ರತಿ ತಂಡದಲ್ಲಿ ಇಬ್ಬರಿಂದ ನಾಲ್ವರು ಸಿಬ್ಬಂದಿ ಕೆಲಸ.
– ವೈದ್ಯಾಧಿಕಾರಿಗಳ ತಂಡದಿಂದ ಪ್ರತಿ 15 ದಿನಕ್ಕೊಮ್ಮೆ ಶಿಬಿರ ಆಯೋಜನೆ.
– ಆರೋಗ್ಯ ಸಿಬ್ಬಂದಿ ಪ್ರತಿ ದಿನ 20 ಮನೆಗಳಿಗೆ ಭೇಟಿ ನೀಡಲಿದ್ದಾರೆ.
– ಭೇಟಿ ನೀಡಿದ ಪ್ರತಿ ಮನೆಗೆ ಗೃಹ ಆರೋಗ್ಯ ಸ್ಟಿಕ್ಕರ್‌ ಅಂಟಿಸಲಾಗುವುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment