Driving License: ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ವಾಹನ ಸವಾರರು ತಪ್ಪದೆ ಈ ವಿಷಯ ತಿಳಿದುಕೊಳ್ಳಿ

Driving License:

ಸಂಚಾರಿ ನಿಯಮಗಳು ವರ್ಷದಿಂದ ವರ್ಷಕ್ಕೆ ಬಹಳಷ್ಟು ಬಿಗಿಕೊಳ್ಳುತ್ತಿವೆ. ವಾಹನದಟ್ಟನೆ, ಸಂಚಾರ ದಟ್ಟನೆ ಹಾಗೂ ಸವಾರರ ಸುರಕ್ಷತೆ ದೃಷ್ಟಿಯಿಂದ ಹೊಸ ನಿಯಮಗಳು ಸೇರ್ಪಡೆ ಹಾಗೂ ಹಳೆ ನಿಯಮಗಳ ಪರಿಷ್ಕರಣೆಯಾಗುತ್ತಿದೆ ಹಾಗೂ ಕೆಲವು ನಿಯಮಗಳಲ್ಲಿ ಸಡಿಲಿಕೆ ಕೂಡ ನೀಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಆದ ಮಹತ್ವದ ಬದಲಾವಣೆಗಳ ಕುರಿತು ನಾವು ಮತ್ತೊಮ್ಮೆ ಮನನ ಮಾಡಿಕೊಳ್ಳಬಹುದು.

ಅದರಲ್ಲೂ ಇತ್ತೀಚಿಗೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಕಚೇರಿಗಳಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ ಹತ್ತಿರದ ಸರ್ಕಾರ ಸೂಚಿಸಿದ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಕೂಡ ಪರೀಕ್ಷೆಗಳನ್ನು ನೀಡಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ಎಂದು ನೀಡಿದ ಅನುಮತಿಯು ದೇಶದ ಲಕ್ಷಾಂತರ ಜನರ ಪಾಲಿಗೆ ಉಪಕಾರವಾಗಿದೆ ಎಂದರೆ ತಪ್ಪಾಗುವುದಿಲ್ಲ.

WhatsApp Group Join Now
Telegram Group Join Now

ಇದರಿಂದ ಜನರ ಸಮಯ ಹಾಗೂ ಹಣ ಉಳಿತಾಯವಾಗಿದೆ ಆದರೆ ಇದರೊಂದಿಗೆ ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ಇದರ ಕುರಿತು ಒಂದಿಷ್ಟು ಪ್ರಮುಖ ಸಂಗತಿಗಳನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಹೌದು ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಬಹಳ ಸುಲಭ ಆದರೆ ಇದಕ್ಕಿರುವ ಕಂಡೀಷನ್ ಗಳು ಇನ್ನಷ್ಟು ಟಫ್ ಆಗಿವೆ.

ಒಂದು ವೇಳೆ ನೀವು ಈ ಸಂಚಾರಿ ನಿಯಮಗಳನ್ನು ಮೀರಿ ವಾಹನ ಚಲಾವಣೆ ಮಾಡಿ ಸಿಕ್ಕಿಬಿದ್ದಲ್ಲಿ ಬೀಳುವ ದಂಡದ ಮೊತ್ತ ಹಾಗೂ ಶಿಕ್ಷೆ ಪ್ರಮಾಣ ಕೂಡ ಹೆಚ್ಚಾಗುತ್ತಿದೆ ಜೂನ್ 1ನೇ ತಾರೀಖಿನಿಂದ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಕೂಡ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದಾಗಿದೆ ಆದರೆ ಎಲ್ಲಾ ಡ್ರೈವಿಂಗ್ ಶಾಲೆಗಳಿಗೂ ಈ ಅಧಿಕಾರ ನೀಡಿಲ್ಲ ಕಂಡೀಶನ್ ಆಧಾರದ ಮೇಲೆ ಕೆಲವು ಅರ್ಹ ಶಾಲೆಗಳು ಮಾತ್ರ ಈ ರೀತಿ ಡ್ರೈವಿಂಗ್ ಲೈಸೆನ್ಸ್ ನೀಡಲು ಅನುಮತಿ ಪಡೆದಿವೆ. ಹಾಗಾದರೆ ಡ್ರೈವಿಂಗ್ ಶಾಲೆಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಾವೆಲ್ಲ ಕಂಡಿಷನ್ ಇದೆ ಮತ್ತು ಎಷ್ಟು ಹಣ ನೀಡಬೇಕು ಎನ್ನುವುದರ ವಿವರ ಹೀಗಿದೆ.

ಡ್ರೈವಿಂಗ್ ಲೈಸನ್ಸ್ ಪಡೆಯಲು ಕಂಡಿಷನ್ ಗಳು:-

* ಚಾಲನಾ ಪರವಾನಗಿಗಾಗಿ RTO ಕಚೇರಿ ಬದಲಾಗಿ ಹತ್ತಿರದ ಡ್ರೈವಿಂಗ್ ಸೆಂಟರ್‌ಗೆ ಹೋಗಿ ಅಪ್ಲೈ ಮಾಡಬಹುದು, ಚಾಲನಾ ಪರೀಕ್ಷೆ ನಡೆಸಿ ಲೈಸೆನ್ಸ್ ನೀಡುವ ತರಬೇತಿ ಶಾಲೆಗಳು ಕನಿಷ್ಠ ಎರಡು ಎಕರೆ ಜಾಗ ಹೊಂದಿರಬೇಕು ಎಂಬ ನಿಯಮ ಮಾಡಲಾಗಿದೆ.
* ಕನಿಷ್ಠ 18 ವರ್ಷ ಪೂರೈಸಿರಬೇಕು ಮುಂತಾದ ಹಿಂದಿನ ಎಲ್ಲಾ ಪ್ರಮುಖ ಕಂಡಿಶನ್ ಜೊತೆಗೆ ಲಘು ಮೋಟಾರು ವಾಹನಗಳ ತರಬೇತಿ ಅಂದರೆ 29 ಗಂಟೆಗಳ ಒಟ್ಟಾರೆ ಸಿದ್ಧಾಂತ ಮತ್ತು ಪ್ರಾಯೋಗಿಕ ತರಬೇತಿಯನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಬೇಕು, ಭಾರೀ ಮೋಟಾರು ವಾಹನಗಳ ತರಬೇತಿಗಾಗಿ 8 ಗಂಟೆಗಳ ಸಿದ್ಧಾಂತ ಮತ್ತು 31 ಗಂಟೆಗಳ ಪ್ರಾಯೋಗಿಕ, ಒಟ್ಟು 39 ಗಂಟೆಗಳ ತರಬೇತಿಯನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು ಎನ್ನುವ ಕಂಡೀಶನ್ ಕೂಡ ಇದೆ ಎಂದು ತಿಳಿಸಬಯಸುತ್ತೇವೆ

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪಾವತಿಸಬೇಕಾದ ಶುಲ್ಕ (ಪರೀಷ್ಕೃತ ಪಟ್ಟಿ):-

* ಕಲಿಕಾ ಪರವಾನಗಿಗೆ (LL) ರೂ.150 ಮತ್ತು ಕಲಿಕಾ ಪರವಾನಗಿ ಪರೀಕ್ಷೆಗೆ ರೂ. 50
* ಚಾಲನಾ ಪರವಾನಗಿ ಪರೀಕ್ಷೆಗೆ ರೂ.300 ರೂಪಾಯಿ ಮತ್ತು ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ರೂ.200 * ಇಂಟರ್ನ್ಯಾಷನಲ್  ಡ್ರೈವಿಂಗ್ ಪರ್ಮಿಟ್ ಪಡೆಯ ಬಯಸುವುದಾದರೆ  ರೂ.1000 ಮತ್ತು ಇನ್ನೊಂದು ಮಾರ್ಗವನ್ನು ಸೇರಿಸಲು ರೂ.500 ಶುಲ್ಕವನ್ನು ವಿಧಿಸಲಾಗುತ್ತದೆ
* ಹೆಚ್ಚಿನ ಮಾಹಿತಿಗಾಗಿ ಹತ್ತಿರದ RTO ಕಚೇರಿ ಅಥವಾ ಡ್ರೈವಿಂಗ್ ಶಾಲೆಗಳಿಗೆ ಭೇಟಿ ನೀಡಿ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment