Driving
ವಾಹನ ಹೊಂದಿರುವ ಪ್ರತಿಯೊಬ್ಬರೂ ಕೂಡ ವಾಹನದ ದಾಖಲೆಗಳ ಜೊತೆ ಹೊಂದಿರಲೇಬೇಕಾದ ಪ್ರಮುಖ ದಾಖಲೆ ಏನೆಂದರೆ, ಅದು ಡ್ರೈವಿಂಗ್ ಲೈಸೆನ್ಸ್ (Driving License). ಸಂಚಾರಿ ನಿಯಮದ ಪ್ರಕಾರ ಡ್ರೈವಿಂಗ್ ಲೈಸನ್ಸ್ ಹೊಂದಿರದೆ ಇದ್ದವರು ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿದರೆ ದಂಡ ಬೀಳುವುದು ಗ್ಯಾರಂಟಿ.
ಅಲ್ಲದೇ ಜೀವ ವಿಮೆ, ಅಪಘಾತ ವಿಮೆ ಇವುಗಳನ್ನು ಕ್ಲಿಯರ್ ಮಾಡುವ ಸಮಯದಲ್ಲಿ ಕಾನೂನು ತೊಡುಕುಗಳಾದರೆ ಡ್ರೈವಿಂಗ್ ಲೈಸೆನ್ಸ್ ಇಲ್ಲದ ವ್ಯಕ್ತಿ ಚಾಲನೆ ಮಾಡಿ ಅ’ಪ’ಘಾ’ತವಾಗಿದ್ದರೆ ಕಾನೂನು ಹೋರಾಟಗಳಲ್ಲಿ ಹಿನ್ನಡೆಯಾಗುತ್ತದೆ ಮತ್ತು ಜವಾಬ್ದಾರಿಯುತ ಪ್ರತಿಯೊಬ್ಬ ವ್ಯಕ್ತಿಯು ಕೂಡ ಮೊದಲಿಗೆ ಡೈವಿಂಗ್ ಲೈಸೆನ್ಸ್ ಪಡೆದು ನಂತರವೇ ವಾಹನ ಚಾಲನೆ ಮಾಡಬೇಕು.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೂಡ ಕೆಲ ನಿಯಮಗಳು ಇದೆ. ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು. ದ್ವಿಚಕ್ರ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ ಪಡೆದು ನಾಲ್ಕು ಚಕ್ರದ ವಾಹನ ಕೂಡ ಚಾಲನೆ ಮಾಡಲು ಅನುಮತಿ ಹೊಂದಿದ್ದಾರೆ ಎಂದು ಅರ್ಥ ಅಲ್ಲ, ಲಘು ವಾಹನ ಚಾಲನಾ ಪರವಾನಗಿ ಮತ್ತು ಭಾರಿ ವಾಹನ ಚಾಲನಾ ಪರವಾಗಿ ಎನ್ನುವ ಪ್ರತ್ಯೇಕ ವಿಭಾಗಗಳು ಕೂಡ ಇವೆ ಮತ್ತು ಇವುಗಳಿಗೆ ಲೈಸೆನ್ಸ್ ಗಳನ್ನು ಪ್ರತ್ಯೇಕವಾಗಿ ಪಡೆಯಬೇಕಿರುತ್ತದೆ.
ಡ್ರೈವಿಂಗ್ ಲೈಸೆನ್ಸ್ (DL) ಪಡೆಯುವ ಮೊದಲು ಲರ್ನಿಂಗ್ ಲೈಸೆನ್ಸ್ (LL) ಪಡೆದಿರಬೇಕು. ಲರ್ನಿಂಗ್ ಲೈಸೆನ್ಸ್ ಮತ್ತು ಡ್ರೈವಿಂಗ್ ಲೈಸನ್ಸ್ ಪಡೆಯಲು RTO ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಅವರು ನಿಗದಿಪಡಿಸಿದ ದಿನದಂದು ಪರೀಕ್ಷೆಗಳನ್ನು ಎದುರಿಸಬೇಕು, ನಂತರ ಅರ್ಜಿ ಸ್ವೀಕೃತಿ ಪ್ರತಿ ಪಡೆದು.
ಆಗಾಗ ಆತರ ಸ್ಥಿತಿ ತಿಳಿದುಕೊಳ್ಳಲು RTO ಕಚೇರಿಗಳಿಗೆ ಹೋಗಿ ಅಂತಿಮವಾಗಿ ಡ್ರೈವಿಂಗ್ ಲೈಸೆನ್ಸ್ ಸಿದ್ಧವಾದಾಗ ಪಡೆದುಕೊಳ್ಳಬೇಕಿತ್ತು, ಇದಕ್ಕಾಗಿ ಸಾಕಷ್ಟು ಬಾರಿ RTO ಕಛೇರಿಗಳಿಗೆ ಅಲೆಯಬೇಕು ಎನ್ನುವುದು ಅನೇಕರ ಬೇಸರಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಇದಕ್ಕೊಂದು ಪರಿಹಾರವನ್ನು ಕೇಂದ್ರ ಸಾರಿಗೆ ಸಚಿವಾಲಯವು ಸೂಚಿಸಿದೆ.
ಇನ್ನು ಮುಂದೆ ನೀವು ಮನೆಯಲ್ಲಿ ಕುಳಿತು ಟ್ರೈನಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿ ನಿಮ್ಮ ಮನೆ ವಿಳಾಸಕ್ಕೆ ಬರುವಂತೆ ಮಾಡಬಹುದು. ಅದು ಹೇಗೆಂದರೆ
*ಮೊದಲಿಗೆ ನೀವು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು, https://parivahan.gov.in/parivahan ಕ್ಲಿಕ್ ಮಾಡುವ ಮೂಲಕ ಡೈರೆಕ್ಟ್ ಪೋರ್ಟಲ್ ಗೆ ಹೋಗಬಹುದು.
* ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ಭರ್ತಿ ಮಾಡಿ, ಲರ್ನಿಂಗ್ ಲೈಸನ್ಸ್ ಸೇರಿದಂತೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ನಿಮಗೆ ಯಾವ ದಿನ ಪರೀಕ್ಷೆ ಇರುತ್ತದೆ ಎಂದು ಗೊತ್ತು ಪಡಿಸಿರುವ ದಿನಾಂಕ ತಿಳಿದುಕೊಂಡು ಆ ದಿನ ಹೋಗಿ ಪರೀಕ್ಷೆ ಎದುರಿಸಿ, ನೀವು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸಕ್ಕೆ ಪೋಸ್ಟ್ ಮೂಲಕ DL ತಲುಪುತ್ತದೆ.
* ಡ್ರೈವಿಂಗ್ ಲೈಸನ್ಸ್ ಗೂ ಮೊದಲು ಲರ್ನಿಂಗ್ ಲೈಸೆನ್ಸ್ ನ್ನು ಈ ರೀತಿ ಪಡೆದುಕೊಳ್ಳಬೇಕು, ನಂತರ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಹಾಕಬೇಕು. ನೀವು ಲರ್ನಿಂಗ್ ಲೈಸನ್ಸ್ (LL) ಪಡೆದ ಆರು ತಿಂಗಳ ಒಳಗೆ ನೀವು ಡ್ರೈವಿಂಗ್ ಲೈಸೆನ್ಸ್ (DL) ಪಡೆಯಬಹುದು.
ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
* ಆಧಾರ್ ಕಾರ್ಡ್
* ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿ
* 8ನೇ ತರಗತಿ ಅಥವಾ 10ನೇ ತರಗತಿ ಅಂಕಪಟ್ಟಿಗಳು
* ಪ್ಯಾನ್ ಕಾರ್ಡ್
* ವೋಟರ್ ಐಡಿ
* ರೇಷನ್ ಕಾರ್ಡ್
* ಮೊಬೈಲ್ ನಂಬರ್
* ಸರ್ಕಾರ ನಿಗದಿಪಡಿಸಿದ ಕನಿಷ್ಠ ಶುಲ್ಕ.