Driving Training: ಉಚಿತ ವಸತಿ ಸಹಿತ ಡ್ರೈವಿಂಗ್ ತರಬೇತಿಗೆ ಅರ್ಜಿ ಆಹ್ವಾನ.!

 

Driving Training

WhatsApp Group Join Now
Telegram Group Join Now

ಡ್ರೈವಿಂಗ್ (Driving) ಎನ್ನುವುದು ಕೆಲವರಿಗೆ ಪ್ಯಾಷನ್, ಆದರೆ ಇನ್ನೂ ಕೆಲವು ವರ್ಗಕ್ಕೆ ಅವರ ಜೀವನದ ಆಸರೆಯಾಗಿದೆ. ಯಾಕೆಂದರೆ ಡ್ರೈವಿಂಗ್ ಈಗ ಬೇಸಿಕ್ಸ್ ಸ್ಕಿಲ್ ಮಾತ್ರವಲ್ಲದೆ ಬದುಕನ್ನು ಕಟ್ಟಿಕೊಡುವ ಕಲೆಯಾಗಿ ಹೊರಹೊಮ್ಮಿದೆ. ಡ್ರೈವಿಂಗ್ ಕಲಿತವರಿಗೆ ಸ್ವ ಉದ್ಯಮ ಮಾಡಲು ಸರ್ಕಾರದಿಂದ ನೆರವು ಸಿಗುತ್ತದೆ.

ಅಥವಾ ಅವರು ಯಾವುದೇ ಖಾಸಗಿ ಕಂಪನಿಗೆ ಅಥವಾ ವ್ಯಕ್ತಿಗಳಿಗೆ ಡ್ರೈವರ್ ಆಗಿ ನೇಮಕವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದು. ಅಲ್ಲದೇ ಸರ್ಕಾರಿ ಕ್ಷೇತ್ರದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹಾಗೂ ಉನ್ನತ ಅಧಿಕಾರಿಗಳಿಗೆ ಕಾರ್ ಡ್ರೈವರ್ ಆಗಿ ನೇಮಕವಾಗಿ ಸರ್ಕಾರಿ ಹುದ್ದೆ ಪಡೆದುಕೊಳ್ಳುವ ಅವಕಾಶ ಕೂಡ ಇರುವುದರಿಂದ ಡ್ರೈವಿಂಗ್ ಕಲಿತರೆ ಖಂಡಿತ ಕೈ ಹಿಡಿಯುತ್ತದೆ ಎಂದು ನಂಬಬಹುದು.

ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ, ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೂ ಡ್ರೈವಿಂಗ್ ಕೌಶಲ್ಯ ಉತ್ತಮವಾಗಿದ್ದರೆ ಖಂಡಿತ ಅವರಿಗೆ ಕೆಲಸ ಕೈಹಿಡಿಯುತ್ತಿದೆ. ಇದೆಲ್ಲಾ ಕಾರಣಗಳಿಂದ ನೀವು ಕೂಡ ಡ್ರೈವಿಂಗ್ ಕಲಿಯುವತ್ತಾ‌ ಆಸಕ್ತಿ ಹೊಂದಿದ್ದರೆ ಸರ್ಕಾರ ನಿಮಗೀಕ ಅದ್ಬುತ ಅವಕಾಶ ನೀಡುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಉಚಿತ ವಸತಿ ವ್ಯವಸ್ಥೆಯೊಂದಿಗೆ ಚಾಲನ ತರಬೇತಿ ನೀಡುತ್ತಿದೆ. ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಉಪ ಯೋಜನೆ (S.C.S.P) ಹಾಗೂ ಗಿರಿಜನ ಉಪ ಯೋಜನೆ (T.S.P) ಯೋಜನೆಯಡಿ ಸೌಲಭ್ಯವನ್ನು ಈಗ ನೀಡುತ್ತಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಆಸಕ್ತ ಯುವ ಜನತೆ ಉಚಿತವಾಗಿ ಈ ಯೋಜನೆ ಪ್ರಯೋಜನ ಪಡೆಯಲಿ ಎನ್ನುವುದು ನಮ್ಮ ಅಂಕಣದ ಆಶಯ. ಈ ಪ್ರಯೋಜನ ಪಡೆಯಲು ಅಪ್ಲೈ ಮಾಡುವುದು ಹೇಗೆ? ಅರ್ಹತೆಗಳು ಏನು? ಇತ್ಯಾದಿ ವಿವರ ಹೀಗಿದೆ ನೋಡಿ.

ಅಪ್ಲೈ ಮಾಡಲು ಮನದಂಡಗಳು:-

* ಈ ಮೇಲೆ ತಿಳಿಸಿದಂತೆ ಕರ್ನಾಟಕದ ನಿವಾಸಿಯಾಗಿದ್ದು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು
* ಲಘು ವಾಹನ ಚಾಲನಾ ತರಬೇತಿಗೆ ಅಪ್ಲೈ ಮಾಡಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ವಯಸ್ಸಿನ ಒಳಗಿರಬೇಕು
* ಭಾರಿ ವಾಹನ ಚಾಲನೆ ತರಬೇತಿಗೆ ಅಪ್ಲೈ ಮಾಡಲು ಕನಿಷ್ಠ 20 ವರ್ಷ ಹಾಗೂ ಗರಿಷ್ಟ 45 ವರ್ಷ ವಯಸ್ಸಿನ ಒಳಗಿರಬೇಕು
* ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು

ಇನ್ನಿತರ ಸೂಚನೆಗಳು:-

* ಅತಿ ಮುಖ್ಯವಾಗಿ ನೀಡಿರುವ ಸೂಚನೆ ಏನೆಂದರೆ, ಮೊದಲು ಬಂದವರಿಗೆ‌ ಮೊದಲ ಆದ್ಯತೆಯ ಮೇರೆಗೆ, ಅರ್ಹ ಅಭ್ಯರ್ಥಿಗಳಿಗೆ ಲಘು/ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತದೆ.
* ವಸತಿ ಸಹಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ಸಂಖ್ಯೆಯಂತೆ ತರಬೇತಿ ಅವಧಿಯಲ್ಲಿ ವಸತಿ ಸೌಕರ್ಯ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ನೀಡಲಾಗುತ್ತದೆ.

* ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿ ಎರಡಕ್ಕೂ ವಸತಿ ಸಹಿತ ಹಾಗೂ ವಸತಿ ರಹಿತ ಎರಡು ವಿಧಾನದಲ್ಲಿಯೂ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ.
* ತರಬೇತಿಗೆ ಹಾಜರಾಗುವ ವೇಳೆಯಲ್ಲಿ ಅಭ್ಯರ್ಥಿಗಳು ಅವಶ್ಯಕವಾಗಿ ಕೇಳಲಾಗಿರುವ ಎಲ್ಲಾ ಮೂಲ ದಾಖಲೆ, ಮತ್ತು ಸೇವಾ ಸಿಂಧು ಪೋರ್ಟಲ್‌ನಲ್ಲಿ ಮುದ್ರಿತ ಅರ್ಜಿ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕೆಂದು ತಿಳಿಸಲಾಗಿದೆ.

ಬೇಕಾಗುವ ದಾಖಲೆಗಳು:-
* ಅಭ್ಯರ್ಥಿಯ ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರ

ಅಪ್ಲೈ ಮಾಡುವ ವಿಧಾನ:-
* ಕರ್ನಾಟಕದ ಸೇವಾ ಸಿಂಧು ಪೋರ್ಟಲ್ ನಲ್ಲಿ (https://sevasindhuservices.karnataka.gov.in) ಅಪ್ಲೈ ಮಾಡಬೇಕು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಸೇವಾಸಿಂಧು ಪೋರ್ಟಲ್ ಸಹಾಯ ಕೇಂದ್ರದ ಸಂಪರ್ಕ ಸಂಖ್ಯೆ – 08022279954, 8792662814/ 8792662816
* BMTC ಸಂಸ್ಥೆ ಸಹಾಯವಾಣಿ ಸಂಖ್ಯೆ – 6364858520 / 7760991085
* ವೆಬ್ಸೈಟ್ ವಿಳಾಸ – www.mybmtc.gov.in

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment