drought: ಪ್ರತಿ ಗ್ರಾಮಗಳಿಗೂ 40 ಲಕ್ಷ ಹಣ ಬಿಡುಗಡೆ, ರೈತರು ತಪ್ಪದೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.!

Drought

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಬರದ ಪರಿಸ್ಥಿತಿ (drought) ಉಂಟಾಗಿದೆ. ಈ ಕಾರಣದಿಂದಾಗಿ ಈ ವರ್ಷ ಕೃಷಿ ಕ್ಷೇತ್ರವು (Agriculture) ಸಂಪೂರ್ಣ ನೆಲಕಚ್ಚಿದ್ದು ರೈತರಿಗಾಗಿರುವ (farmers) ಅಪಾರ ನ’ಷ್ಟವನ್ನು ಅಲ್ಪಮಟ್ಟದಲ್ಲಾದರೂ ಬರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕೈಲಾದಷ್ಟು ಯೋಜನೆಗಳ ಮೂಲಕ ರೈತರಿಗೆ ನೆರವು ನೀಡುತ್ತಿವೆ.

ಇದೇ ಸಂದರ್ಭದಲ್ಲಿ ಅಂತರ್ಜಲ ಮಟ್ಟವನ್ನು ರಕ್ಷಿಸಲು ಹಾಗೂ ಕೃಷಿಯಲ್ಲಿ ನೀರಿನ ಪೋಲಾಗುವಿಕೆ ತಡೆಗಟ್ಟಲು, ಈ ಮೂಲಕ ಕೃಷಿ ಚಟುವಟಿಕೆಗೆ ನೀರಿನ ಕೊರತೆ ಉಂಟಾಗದಂತೆ ಮಾಡಿ ಪರೋಕ್ಷವಾಗಿ ಭೂಮಿಯ ಫಲವತ್ತತೆಯನ್ನು ಕೂಡ ರಕ್ಷಿಸಲು ಪೂರಕವಾಗಿರುವಂತಹ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ನೀರಾವರಿ ಸೌಲಭ್ಯ ಹೊಂದಿರುವ ರೈತರು ಅನುಸರಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರೇರೇಪಿಸುತ್ತಿದೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗಾಗಿ ವಿಶೇಷ ಯೋಜನೆಯ ಮೂಲಕ ಸೂಕ್ಷ್ಮ ನೀರಾವರಿ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಶೇಕಡ 90ರಷ್ಟು ಸಬ್ಸಿಡಿ ಸಹ ನೀಡುತ್ತಿದೆ ಇದರ ಕುರಿತಾದ ವಿವರ ಹೀಗಿದೆ ನೋಡಿ. ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆ (Prandana Mantri Krishi Sichay Scheme) ಮತ್ತು ಅಟಲ್ ಭೂಜಲ್ ಯೋಜನೆಯಡಿ (Atal Bhoojal Scheme) ತುಂತುರು ನೀರಾವರಿ ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು.

ಕೃಷಿ ಬೆಳೆಗಳಿಗೆ ನೀರು ಹರಿಸಿದರೆ ಈ ಮೇಲೆ ತಿಳಿಸಿದ ಅನುಕೂಲತೆ ಆಗುತ್ತದೆ ಎಂದು ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗೆ 40 ಲಕ್ಷ ಹಣವನ್ನು ಸೂಕ್ಷ್ಮ ನೀರಾವರಿ ಘಟಕಗಳನ್ನು ಸ್ಥಾಪಿಸಿಕೊಳ್ಳುವ ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡಲು ಹಣ ಮಂಜೂರು ಮಾಡಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಈ ಯೋಜನೆ ಲಭ್ಯವಿದ್ದು ಮೊದಲ ಹಂತದಲ್ಲಿ ನಮ್ಮ ರಾಜ್ಯದ 14 ಜಿಲ್ಲೆಗಳು ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳು ಈ ವ್ಯಾಪ್ತಿಗೆ ಬರಲಿದ್ದು.

ಈಗಾಗಲೇ ಜಮೀನಿನಲ್ಲಿ ನೀರಾವರಿ ಸೌಲಭ್ಯ ಹೊಂದಿರುವಂತಹ ಯಾವುದೇ ರೈತನು ಸರ್ಕಾರದ ಈ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೂ ಜಲ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು, ಮೊದಲು ಬಂದವರಿಗೆ ಆದ್ಯತೆ ಎನ್ನುವ ಸೂಚನೆಯನ್ನು ಸರ್ಕಾರ ನೀಡಿದೆ.

ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ. ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಯಶಸ್ವಿಯಾಗಿ ಮೊದಲಿಗೆ ಜಾರಿಗೆ ಬರುತ್ತಿದ್ದು ನಂತರ ಉಳಿದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸಲಿದೆ.

ಈ ಜಿಲ್ಲೆಗಳ ಅದರಲ್ಲೂ ಬರಪೀಡಿತ ಎಂದು ಘೋಷಿತವಾಗಿರುವ ತಾಲೂಕುಗಳ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ. ಯೋಜನೆ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ, ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಅಥವಾ ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಯೋಜನೆ ಕುರಿತ ಪ್ರಮುಖ ಅಂಶಗಳು:-

* 2 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತನಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಈ ಮೇಲ್ಕಂಡ ಯೋಜನೆಗಳ ಘಟಕ ಅಳವಡಿಕೆಗೆ 90% ಮತ್ತು ಇತರೆ ವರ್ಗದ ರೈತರಿಗೆ 45% ಸಹಾಯಧನ ಸಿಗಲಿದೆ.

* ಸೂಕ್ತ ದಾಖಲೆಗಳೊಂದಿಗೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಹೋಗಿ ನೋಂದಣಿ ಮಾಡಿಕೊಳ್ಳಿ, ಮೊದಲು ಬಂದ ರೈತರಿಗೆ ಮೊದಲ ಆದ್ಯತೆ. ಪ್ರತಿ ಗ್ರಾಮ ಪಂಚಾಯಿತಿಗೂ 40 ಲಕ್ಷ ಮಾತ್ರ ಅನುದಾನ ಇರುವುದರಿಂದ ಜನಸಂಖ್ಯೆ ಹೆಚ್ಚಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮೊದಲು ನೊಂದಾಯಿಸಿಕೊಂಡವರಿಗಷ್ಟೇ ಇದರ ಅನುಕೂಲತೆ ಸಿಗಬಹುದು. ಹಾಗಾಗಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಇಂದೇ ನೋಂದಾಯಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿ ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment