Drought
ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಬರಗಾಲ (drought) ಆವರಿಸಿದೆ. ರೈತರಿಗೆ ಮುಂಗಾರು ಮಳೆ ಕೈ ಕೊಟ್ಟ ಕಾರಣ ಮುಂಗಾರು ಮತ್ತು ಹಿಂಗಾರು ಫಸಲು ಕೂಡ ನ’ಷ್ಟ ಆಗಿದೆ. ಈಗಾಗಲೇ ಕೃಷಿ ಉದ್ದೇಶಕ್ಕಾಗಿ ಸಾಲ ಮಾಡಿದ್ದ ರೈತನಿಗೆ ಬಿತ್ತಿದ್ದ ಬೆಳೆಯು ಕೈಗೆ ಬರದೆ ಹಾಕಿದ ಬಂಡವಾಳದ ಸಾಲ ಹೊತ್ತಿದ್ದಾನೆ, ಅದರ ನಡುವೆ ಜೀವನ ನಿರ್ವಹಣೆಗೆ ಈ ಸಮಯಕ್ಕೆ ಬೆಳೆ ಬಂದಿದ್ದರೆ ಅನುಕೂಲವಾಗುತ್ತಿತ್ತು.
ಆದರೆ ಅದು ಕೂಡ ಆಗದ ಕಾರಣ ದಿನನಿತ್ಯದ ಖರ್ಚಿಗೂ ಸಮಸ್ಯೆ ಅನುಭವಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಬೆಳೆ ಪರಿಹಾರದ (drought releif fund) ಹಣವಾದರೂ ತಲುಪಿದ್ದರೆ ಸ್ವಲ್ಪ ಪ್ರಮಾಣದಲ್ಲಿ ನೆರವಾಗುತ್ತಿತ್ತು. ಆದರೆ ರಾಜ್ಯದಲ್ಲಿ ಬರ ಅಧ್ಯಯನ ನಡೆದು ಬಹುತೇಕ ಎಲ್ಲಾ ಜಿಲ್ಲೆಗಳ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿ ತಿಂಗಳುಗಳೇ ಕಳೆದರು ಕೇಂದ್ರ ಸರ್ಕಾರದಿಂದ (Central Government) ಬರ ಪರಿಹಾರ ಹಣ ರೈತರ ಖಾತೆ ತಲುಪಿಲ್ಲ.
ಇನ್ನು ರಾಜ್ಯ ಸರ್ಕಾರವು (State Government) ಕೂಡ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ನೆರವನ್ನೇ ಕಾಯುತ್ತಿದ್ದೆ ಎಂದು ವಿಪಕ್ಷಗಳು ತೋರುತ್ತಿದ್ದವು ಇದರ ನಡುವೆ ಪ್ರಸ್ತುತ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು (Agricultural Minister Cheluvaraya Swamy) ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡುವ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ರಾಜ್ಯ ಸರ್ಕಾರ ಕೂಡ ತನ್ನ ಕೆಲಸ ಮಾಡುತ್ತದೆ ಒಟ್ಟಿನಲ್ಲಿ ರೈತನ ಸಮಸ್ಯೆ ಪರಿಹರಿಸಲು ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆ ನೀಡಿದ್ದರು. ಇದೆಲ್ಲದರ ನಡುವೆ ಈ ಬಾರಿ ರೈತರ ಖಾತೆಗೆ ಬರ ಪರಿಹಾರದ ಹಣ ನೀಡಲು ಬದಲಿ ಕ್ರಮ ಕೈಕೊಂಡು FID ಕಡ್ಡಾಯಗೊಳಿಸಲಾಗಿದೆ.
ಯಾಕೆಂದರೆ ಇದುವರೆಗೂ ಪರಿಹಾರ (Parihara) ತಂತ್ರಾಂಶದ ಮೂಲಕ NDRF ಮಾರ್ಗಸೂಚಿ ಪ್ರಕಾರ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಅದರಲ್ಲಿ ಅನೇಕ ಲೋಪದೋಷಗಳಾಗಿರುವುದು ಕಂಡುಬಂದಿದ್ದು ಯಾವುದೋ ರೈತನ ಮಾಹಿತಿಗೆ ಮತ್ಯಾರೋ ಖಾತೆ ವಿವರ ಕೊಟ್ಟು ಹಣ ಹೊಡೆಯುತ್ತಿದ್ದರು.
ಇದನ್ನು ತಪ್ಪಿಸಲು ರೈತ ತನ್ನ ಎಲ್ಲಾ ಜಮೀನಿನ ಸರ್ವೇ ನಂಬರ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕೊಟ್ಟು ಫ್ರೂಟ್ಸ್ ತಂತ್ರಾಂಶದಡಿ (FRUITS) ನೋಂದಾಯಿಸಿಕೊಳ್ಳಬೇಕು ಮತ್ತು ಬರ ಪರಿಹಾರದ ಹಣವು ಆತನ ಜಮೀನಿನ ವಿವರದ ಆಧಾರದ ಮೇಲೆ ಆತನ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ dbt ಮೂಲಕ ವರ್ಗಾವಣೆ ಆಗುತ್ತದೆ ಎಂದು ಕಳೆದ ತಿಂಗಳು ರಾಜ್ಯ ಸರ್ಕಾರ ಈ ಬಗ್ಗೆ ಎಲ್ಲ ರೈತರಿಗೂ ಪ್ರಕಟಣೆ ಹೊರಡಿಸಿ ತಿಳಿಸಿದೆ. ಹಾಗಾಗಿ ರೈತರು ಈ ಪ್ರಕ್ರಿಯೆ ಪೂರ್ತಿಗೊಳಿಸಿದರೆ ಮಾತ್ರ ಬರ ಪರಿಹಾರ ಹಣ ಖಾತೆ ಸೇರುವುದು.
ನಿಮ್ಮ ಹೆಸರು ಕೂಡ ಈ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.
* ಮೊದಲಿಗೆ https://fruitspmk.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ.
* Farmers Registration and Unified beneficiary Information System PM-KISAN ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ.
* ಆಧಾರ್ ನಂಬರ್ ಕೇಳಲಾಗಿರುತ್ತದೆ, ಅದನ್ನು ನಮೂದಿಸಿ Search ಬಟನ್ ಕ್ಲಿಕ್ ಮಾಡಿ.
* FruitsID 16 ಸಂಖ್ಯೆ ಮತ್ತು ನಿಮ್ಮ ಹೆಸರನ್ನು ತೋರಿಸಿದರೆ, ನೀವು ಬರ ಪರಿಹಾರದ ಹಣವನ್ನು ಪಡೆಯಲು ಅರ್ಹರಾಗಿದ್ದೀರಿ ಎಂದು ಅರ್ಥ.
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಬಟನ್ ಕ್ಲಿಕ್ ಮಾಡಿದಾಗ Fruits ID ಹಾಗೂ ಹೆಸರು ತೋರಿಸದೆ object reference not set to an instance of an object ಅಥವಾ Aadhar number number is incorrect ಅಥವಾ no data found ಎಂದು ಇದ್ದರೆ ತಕ್ಷಣ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ.
ರೈತನು ತನ್ನ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ ಮತ್ತು ತನ್ನ ಎಲ್ಲಾ ಜಮೀನುಗಳ RTC ನಂಬರ್ ಕೊಟ್ಟು ಫ್ರೂಟ್ಸ್ ಫಲಿತಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆದುಕೊಳ್ಳಬೇಕು ಅಥವಾ ಯಾವುದೇ ಗ್ರಾಮ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಮಾಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯಬಹುದು ದಯವಿಟ್ಟು ಈ ಉಪಯುಕ್ತ ಮಾಹಿತಿಯೂ ಎಲ್ಲ ರೈತರಿಗೂ ತಲುಪುವಂತೆ ಶೇರ್ ಮಾಡಿ ಇದೇ ರೀತಿಯ ಹೆಚ್ಚುವರಿ ಉಪಯುಕ್ತ ಮಾಹಿತಿ ತಿಳಿಯಲು ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಿ.!