Drought relief: ಬೆಲೆ ಸಮೀಕ್ಷೆ ಮಾಡಿದ ರೈತರಿಗೆ ಮಾತ್ರ ಬರ ಪರಿಹಾರ ಹಣ ಜಮೆ ಆಗೋದು.!

Drought relief

ರಾಜ್ಯದಲ್ಲಿ ಹೊಸ ಭರವಸೆಯೊಂದಿಗೆ 2024-25 ನೇ ಸಾಲಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಮುಂಗಾರು ಹಂಗಾಮಿನ ಕೃಷಿ ಆರಂಭಿಸಿದ್ದಾರೆ. ಆದರೆ ಕಳೆದ ವರ್ಷ ಉಂಟಾದ ನಷ್ಟದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇಂತಹ ಸಂದರ್ಭಗಳಲ್ಲಿ ಅಥವಾ ಇದನ್ನು ಹೊರತುಪಡಿಸಿ ಇನ್ನು ಅನೇಕ ಕೃಷಿ ಇಲಾಖೆ ಹಾಗೂ ರೇಷ್ಮೆ ಇಲಾಖೆ ಕಡೆಯಿಂದ ರೈತರಿಗೆ ಸಿಗುವ ಸಹಾಯಧನಗಳು, ಅನುದಾನಗಳು, ಪರಿಹಾರಗಳನ್ನು ಪಡೆಯಲು ರೈತರ ಬೆಳೆ ಸಮೀಕ್ಷೆ ದಾಖಲೆ ಅನಿವಾರ್ಯ.

ಈ ಸುದ್ದಿ ಓದಿ:- Today Gold Rate: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆ 2,200 ಇಳಿಕೆ ಇವತ್ತಿನ ರೇಟ್ ಎಷ್ಟಿದೆ ನೋಡಿ.!

ಹಾಗಾಗಿ ರಾಜ್ಯ ಕೃಷಿ ಇಲಾಖೆಯ ರೈತರಿಗೆ 2024-25 ನೇ ಸಾಲಿನ ಮುಂಗಾರು ಬೆಳೆ ವಿವರಗಳನ್ನು ಪಹಣಿಯಲ್ಲಿ ದಾಖಲಿಸುವಂತೆ ರೈತರಿಗೆ ಸೂಚನೆ ಕೊಟ್ಟಿದೆ. ಆಫ್ ಲೈನ್ ನಲ್ಲಿ ಮಾತ್ರವಲ್ಲದೇ ಈಗ ಆನ್ಲೈನಲ್ಲಿ ಕೂಡ ಸ್ವತಃ ರೈತರು ತಮ್ಮ ಬಳಿ ಇರುವ ಮೊಬೈಲ್ ಫೋನ್ ಮೂಲಕ ಬೆಳೆಯ ವಿವರಗಳನ್ನು ಪಹಣಿಯಲ್ಲಿ ದಾಖಲೆ ಮಾಡಬಹುದು. ಬಹಳ ಸರಳ ಹಂತಗಳಲ್ಲಿ ಈ ಪ್ರಕ್ರಿಯೆ ಪೂರ್ತಿಗೊಳಲಿದ್ದು ಇದರ ಮಾರ್ಗಸೂಚಿಗಳನ್ನು ಕೂಡ ಕೃಷಿ ಇಲಾಖೆ ತಿಳಿಸಿದೆ.

WhatsApp Group Join Now
Telegram Group Join Now

ಸರ್ಕಾರದ ನಿಯಮದಂತೆ ಇದನ್ನು ಪಾಲಿಸದೆ ಇದ್ದಲ್ಲಿ ರೈತರಿಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಬೆಳೆ ವಿಮೆ, ಬೆಳೆ ಪರಿಹಾರ, ಬರ ಪರಿಹಾರ, ಬೆಂಬಲ ಬೆಲೆ ಮುಂತಾದ ಸರ್ಕಾರದಿಂದ ಕೃಷಿ ಕ್ಷೇತ್ರಕ್ಕೆ ಸಿಗುವ ಅನುಕೂಲತೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ನ’ಷ್ಟವಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಪ್ರತಿಯೊಬ್ಬ ರೈತನು ಕೂಡ ಇದನ್ನು ಪಾಲಿಸಿ. ಮೊಬೈಲ್ ಮೂಲಕ ಹೇಗೆ ಬೆಳೆ ಸಮೀಕ್ಷೆ ದಾಖಲಿಸುವುದು ಎನ್ನುವ ವಿವರವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- Bank Recruitment: DCC ಬ್ಯಾಂಕ್ ನಲ್ಲಿ FDA ಹುದ್ದೆಗಳ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ.! ವೇತನ: 56,655/-

* ಮೊದಲಿಗೆ Play store ಗೆ ಹೋಗಿ ಬೆಳೆ ಸರ್ವೆ ಮೊಬೈಲ್ ಅಪ್ಲಿಕೇಶನ್ (crop survey mobile application) ಡೌನ್ಲೋಡ್ ಮಾಡಿಕೊಳ್ಳಿ
* ಆರಂಭದಲ್ಲಿ ಹಲವು ಅನುಮತಿಗಳನ್ನು ಕೇಳುತ್ತದೆ ಅವುಗಳನ್ನು ಓದಿಕೊಂಡು 3-4 ಬಾರಿ allow ಕೊಟ್ಟು ಕೊನೆಯಲ್ಲಿ Agree ಎಂಬುದರ ಮೇಲೆ ಕ್ಲಿಕ್ ಮಾಡಿ

* ಮಂದಿನ ಹಂತದಲ್ಲಿ e-KYC ಪೂರ್ತಿಗೊಳಿಸಬೇಕಿರುತ್ತದೆ, e-KYC ಮೂಲಕ ಆಧಾರ್ ಧೃಡೀಕರಿಸಿ ಎಂಬ ಆಯ್ಕೆ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆಯನ್ನು ಹಾಕಲು ಸಹಮತಿಯ ಎನ್ನುವ ಆಪ್ಷನ್ ಇರುತ್ತದೆ ಕ್ಲಿಕ್ ಮಾಡುವ ಮೂಲಕ ಅನುಮತಿಸಿ ದೃಢೀಕರಣ ವಿಧಾನ ಸೆಲೆಕ್ಟ್ ಮಾಡಿ Get OTP ಎಂಬುದರ ಮೇಲೆ ಕ್ಲಿಕ್ ಮಾಡಿ

* ರೈತನ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದಿರುತ್ತದೆ 6 ಅಂಕಿಗಳ OTPಯನ್ನು ಎಂಟ್ರಿ ಮಾಡಿದರೆ ನಿಮ್ಮ ಹೆಸರಿನಲ್ಲಿ ಇರುವ ಪಹಣಿಗಳ ವಿವರ ಬರುತ್ತದೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಸಕ್ರಿಯಗೊಳಿಸಿ ಎನ್ನುವ ಆಪ್ಷನ್ ಕ್ಲಿಕ್ ಮಾಡಿ.

ಈ ಸುದ್ದಿ ಓದಿ:- BPL Ration Card Cancellation: ರಾಜ್ಯದಲ್ಲಿ 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಈ ಲಿಸ್ಟ್ ನಲ್ಲಿ ಇದಿಯಾ.? ಹೀಗೆ ಚೆಕ್ ಮಾಡಿ.!

* ಇದರಲ್ಲಿ ಒಂದಕ್ಕಿಂತ ಹೆಚ್ಚು ಪಹಣಿಗಳಿದ್ದರೆ ಅದನ್ನು ಸೆಲೆಕ್ಟ್ ಮಾಡಿ ಅದೇ ಜಮೀನಿಗೆ ಭೇಟಿ ಕೊಟ್ಟು ಬೆಳೆ ವಿವರ ದಾಖಲಿಸಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ಜಮೀನಿನಲ್ಲಿ ಬೆಳದಿರುವ ಬೆಳೆಗೆ ಎರಡು ಫೋಟೋಗಳನ್ನು ತೆಗೆದುಕೊಂಡು ಅಪ್ಲೋಡ್ ಮಾಡಿ ಬೆಳೆ ವಿವರ ದಾಖಲಿಸಬೇಕು.

* ಒಂದು ವೇಳೆ ರೈತನ ಸರ್ವೇ ನಂಬರ್ ತೋರಿಸದೆ ಇದ್ದಲ್ಲಿ ಸರ್ವೆ ನಂಬರ್ ಸೇರಿಸಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಡ್ ಮಾಡಿದ ನಂತರ ಮುಂದುವರಿಯಬಹುದು
* ಕೊನೆಯಲ್ಲಿ ಅಪ್ಲೋಡ್ ಮಾಡಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ ನೀವು ಬೆಳೆದಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಿ ಈ ಪ್ರಕ್ರಿಯೆ ಪೂರ್ತಿಗೊಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರೊಡನೆ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment