Education: ವಿದೇಶದಲ್ಲಿ ಶಿಕ್ಷಣ ಮಾಡುವವರಿಗೆ ಸಹಾಯಧನ, ಸರ್ಕಾರವೇ ನೀಡುತ್ತದೆ ಸಂಪೂರ್ಣ ನೆರವು.!

Education

ಡಿಸೆಂಬರ್ 23ರಂದು ರೈತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ರೈತ ಮತ್ತು ಕೃಷಿ ಕ್ಷೇತ್ರವು ಜೀವಸಂಕುಲಕ್ಕೆ ಎಷ್ಟು ಪ್ರಮುಖವಾದದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ ಈಗ ಪ್ರತಿಯೊಬ್ಬರು ಖುಷಿ ಹಾಗೂ ರೈತನ ಮಹತ್ವವನ್ನು ಅರಿತಿದ್ದಾರೆ. ರೈತ ದಿನಾಚರಣೆಯ ಪ್ರಯುಕ್ತವಾಗಿ ಸರ್ಕಾರ ಕೂಡ ಈ ದಿನ ರೈತರ ಸಲುವಾಗಿ ಮೂರು ಮಹತ್ವವಾದ ಯೋಜನೆಗಳನ್ನು ಜಾರಿಗೆ ತರುವುದರ ಬಗ್ಗೆ ಸೂಚನೆ ಕೊಟ್ಟಿದ್ದು ಇದರಲ್ಲಿ ಮುಖ್ಯವಾಗಿ ರೈತರ ಮಕ್ಕಳ ವಿದೇಶ ಶಿಕ್ಷಣದ ಕನಸು ಕೂಡ ಸೇರಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ರೈತನನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರನ್ನಾಗಿಸಿ ರೈತನು ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಬೇಕಾದ ಅನೇಕ ಯೋಜನೆಗಳನ್ನು ರೂಪಿಸಿ ನೆರವು ಮಾಡಿಕೊಟ್ಟಿದೆ. ರೈತನಿಗಾಗಿ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆಗಳು ಕೂಡ ಜಾರಿ ಆಗಿದ್ದರೂ ಕೂಡ ರೈತನ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿಲ್ಲ ಎನ್ನುವುದು ನಿಜ. ಹೀಗಾಗಿ ಆತ ತನ್ನ ಕುಟುಂಬದ ಅನೇಕ ಕನಸುಗಳನ್ನು ನನಸಾಗಿಸಲು ವಿಫಲನಾಗಿದ್ದಾನೆ.

WhatsApp Group Join Now
Telegram Group Join Now

ಇದರಲ್ಲಿ ಮುಖ್ಯವಾಗಿ ರೈತನ ಮಕ್ಕಳ ವಿದೇಶಿ ವಿದ್ಯಾಭ್ಯಾಸದ ಕನಸು ಕೂಡ ಸೇರಿದೆ. ರೈತನ ಮಕ್ಕಳು ಕೂಡ ಪ್ರತಿಭಾವಂತರಾಗಿದ್ದು ಇವರಿಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಇಚ್ಛೆ ಇರುತ್ತದೆ. ಆದರೆ ರೈತನ ಪರಿಸ್ಥಿತಿ ಅಷ್ಟು ಉತ್ತಮವಾಗಿ ಇಲ್ಲದಿರುವ ಕಾರಣ ವಿದೇಶಗಳಿಗೆ ಹೋಗಿ ವಿದೇಶದ ವಿದ್ಯಾಭ್ಯಾಸಗಳಲ್ಲಿ ರೈತನ ಮಕ್ಕಳು ವಿದ್ಯಾಭ್ಯಾಸ ಮಾಡುವುದು ಆಕಾಶ ಕುಸುಮವಾಗಿದೆ.

ಪ್ರಸ್ತುತವಾಗಿ ರಾಜ್ಯ ಸರ್ಕಾರವು ರೈತನ ಮಕ್ಕಳಿಗಾಗಿಯೇ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದು ವಿದ್ಯಾರ್ಥಿ ವೇತನ ನೀಡುತ್ತಿದ್ದರು ಕೂಡ ಅದರ ಮೂಲಕ ಸಿಗುತ್ತಿರುವ ವಿದ್ಯಾರ್ಥಿ ವೇತನವು ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವಷ್ಟು ಸಾಲುತ್ತಿಲ್ಲ ಎನ್ನುವುದು ಕೂಡ ನಿಜ.

ಇದನ್ನೆಲ್ಲ ಮನಗಂಟು ವಿದ್ಯಾನಿಧಿ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಸರ್ಕಾರವು ವಾರ್ಷಿಕವಾಗಿ ಕನಿಷ್ಠ ನೂರು ರೈತರ ಮಕ್ಕಳಿಗಾದರೂ ವಿದೇಶಕ್ಕೆ ಹೋಗಿ ಅವರು ಇಷ್ಟಪಟ್ಟ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಮತ್ತು ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದಲೇ ಭರಿಸು‌ವುದು ಎಂದು ನಿರ್ಧರಿಸಿದೆ.

ಉನ್ನತ ಶಿಕ್ಷಣ, ಸಂಶೋಧನೆ ಹೀಗೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಹಾಗೆ ವ್ಯಾಸಂಗ ಮಾಡಿದರು ಸಂಪೂರ್ಣ ನೆರವನ್ನು ಸರ್ಕಾರದಂತೆ ನೀಡಲು ನಿರ್ಧರಿಸಲಾಗಿದ್ದು ಇದಕ್ಕೆ ವಾರ್ಷಿಕ ರೂ.100 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಆದರೂ ಕೂಡ ಈ ಯೋಜನೆ ಜಾರಿಗೆ ತರುವುದು ಅನಿವಾರ್ಯ ಎಂದು ಮನಗಂಡಿರುವ ಸರ್ಕಾರವು ಮುಂದಿನ ಬಜೆಟ್ ನೊಂದಿಗೆ ಈ ಬಗ್ಗೆ ಘೋಷಣೆ ಮಾಡುವುದು ಗ್ಯಾರಂಟಿ ಎನ್ನುವುದು ತಿಳಿದು ಬಂದಿದೆ. ಈ ಮಹತ್ವದ ಸುಧಾರಣೆಯಿಂದ ರೈತರ ವಿದೇಶಿ ಕಲಿಕೆಯ ಕನಸು ನನಸಾಗಲಿದ್ದು ಪ್ರತಿಭೆ ಇದ್ದರೂ ಕೂಡ ಹಣಕಾಸಿನ ವಿಚಾರದಿಂದಾಗಿ ತಮ್ಮ ಕನಸನ್ನು ಕೈಬಿಡಬೇಕಾಗಿದ್ದ ರೈತನ ಮಕ್ಕಳಿಗೆ ಬಹಳ ದೊಡ್ಡ ವರದಾನವಾಗಲಿದೆ.

ಪ್ರತಿಯೊಬ್ಬ ರೈತನು ಕುಟುಂಬವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿ ಎನ್ನುವುದು ನಮ್ಮ ಅಂಕಣದ ಇಚ್ಛೆ ಹಾಗಾಗಿ ಹೆಚ್ಚಿನ ರೈತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ. ರೈತ ವಿದ್ಯಾನಿಧಿ ಯೋಜನೆಯನ್ನು ಮೊದಲು ರೈತರ ಮಕ್ಕಳಿಗಾಗಿ ಜಾರಿಗೆ ತರಲಾಗಿತ್ತು ನಂತರ ರೈತನಂತೆ ಕೃಷಿ ಕಾರ್ಮಿಕರು, ನೇಯ್ಗೆಗಾರರು ಹಾಗೂ ಮೀನುಗಾರರು ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳಿಗೂ ಕೂಡ ವಿಸ್ತರಿಸಲಾಗಿದೆ. ಈ ರೈತ ವಿದ್ಯಾನಿಧಿ ಯೋಜನೆ ಪ್ರಯೋಜನವನ್ನು ಕೂಡ ಅರ್ಹರು ತಪ್ಪದೇ ಪಡೆದುಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment