Education
ನೋಡ ನೋಡುತ್ತಿದ್ದಂತೆ ದಿನಗಳು ಕಳೆಯುತ್ತಿವೆ. ಈಗಾಗಲೇ ನಾವು 2024ನೇ ವರ್ಷದ ಅರ್ಧ ಸಮಯವನ್ನು ಕಳೆದು ಬಿಟ್ಟಿದ್ದೇವೆ. ಇದನ್ನು ಹೊರತುಪಡಿಸಿ ಹೊಸ ಆರ್ಥಿಕ ವರ್ಷ ಶುರುವಾಗಿ ಮೂರನೇ ತಿಂಗಳಲ್ಲಿದ್ದೇವೆ. 2024-25 ನೇ ಸಾಲಿನ ಶೈಕ್ಷಣಿಕ ವರ್ಷವೂ ಕೂಡ ಆರಂಭಗೊಂಡಿದೆ. ರಾಜ್ಯದಾದ್ಯಂತ ಖಾಸಗಿ ಶಾಲೆಗಳಲ್ಲಿ ಮುಂಚಿತವಾಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೇ 29, 2024 ರಿಂದ ತರಗತಿಗಳು ಆರಂಭವಾಗಿ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ.
ಆದರೆ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವಿಚಾರ ಮಾತ್ರ ಇನ್ನೂ ಇತ್ಯರ್ಥವಾಗದೆ ಬಹಳ ಗೊಂದಲ್ಲದಲ್ಲಿದೆ. ಕಳೆದ ವರ್ಷ ಕೊನೆಯ ದಿನಗಳಲ್ಲಿ ಉಂಟಾದ ಪರಿಸ್ಥಿತಿಯು ಈ ವರ್ಷ ಹೇಗೆ ಮುಂದುವರಿಯಬಹುದು ಎನ್ನುವ ಆತಂಕವು ಸಹಾ ಇದೆ. ರಾಜ್ಯ ಪಠ್ಯಕ್ರಮಗಳ ಕುರಿತ 5, 8 ಮತ್ತು 9ನೇ ತರಗತಿ ಮಕ್ಕಳ ಬೋರ್ಡ್ ಪರೀಕ್ಷೆ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲೇ ಇರುವುದರಿಂದ.
ಸದ್ಯಕ್ಕೀಗ 2024-25ನೇ ಸಾಲಿನಲ್ಲಿ ಈ ಹಿಂದೆ ಇದ್ದಂತೆ ಎಲ್ಲಾ ತರಗತಿಗಳಿಗೂ ಮೌಲ್ಯಾಂಕನ ಮುಂದುವರೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಇದರ ಕುರಿತಾಗಿ ಇಲಾಖೆ ಕಡೆಯಿಂದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೂ ಮಾರ್ಗಸೂಚಿ ಸುತ್ತೋಲೆ ಹೊರಡಿಸಲಾಗಿದ್ದು 2024- 25 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾ ಯೋಜನೆ ಮಾರ್ಗದರ್ಶಿ ವಿವರ ಪ್ರಮುಖಾಂಶಗಳು ಹೀಗಿವೆ ನೋಡಿ.
* ರಾಜ್ಯದ ಎಲ್ಲಾ ಶಾಲೆಗಳಲ್ಲೂ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಚೇತರಿಕೆ ಉಪಕ್ರಮವನ್ನು ಮತ್ತು 2023-24ನೇ ಸಾಲಿನಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ ಕಲಿಕೆಯ ಫಲಾಧಾರಿತ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಚಟುವಟಿಕೆ ಕೋಶಗಳನ್ನು ಸಿದ್ಧಪಡಿಸಿ ಈ ಬೋಧನಾ ಕಲಿಕಾ ಪ್ರಕ್ರಿಯೆ ತರಗತಿಗಳ ಮೂಲಕ ಬಹಳ ದಿನಗಳ ರಜೆ ನಂತರ ಆರಂಭದ ಹಂತದಲ್ಲಿ ಚಾಲೆಂಜಿಂಗ್ ಎನಿಸುವ ಕಲಿಕಾ ಅಂತರವನ್ನು ಬೆಸೆಯಲು ನಿರಂತರವಾಗಿ ಉಪಕ್ರಮಗಳನ್ನು ಅಳವಡಿಸಿ ಮುಂದುವರೆಯುವಂತೆ ಸೂಚಿಸಲಾಗಿದೆ.
* ಈ ಮೇಲೆ ತಿಳಿಸಿದಂತ ಅಂಶಕ್ಕೆ ಪೂರಕವಾದ ಮತ್ತೊಂದು ಕಾರ್ಯಕ್ರಮವಾದ ಸೇತುಬಂಧ ತರಗತಿಗಳ ಕುರಿತಂತೆ ಕೂಡ ಮಾರ್ಗಸೂಚಿ ತಿಳಿಸಲಾಗಿದೆ. ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಸಜ್ಜುಗೊಳಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೇತುಬಂಧ ಕಾರ್ಯಕ್ರಮವನ್ನು ನಡೆಸಲು ಸೂಚಿಸಲಾಗಿದೆ. ಮತ್ತು ಈಗಾಗಲೇ 1ರಿಂದ 10ನೇ ತರಗತಿಗಳ ಸೇತುಬಂಧ ಸಾಹಿತ್ಯವನ್ನು ಸಿದ್ಧಪಡಿಸಿ DSERT websiteನಲ್ಲಿ ಅಳವಡಿಕೆ ಮಾಡಲಾಗಿದೆ.
* ವಿದ್ಯಾರ್ಥಿಗಳ ವಿಚಾರವಾಗಿ ಸವಾಲ್ ಆಗಿದ್ದ ಶಾಲಾ ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೂಡ ಕ್ರಮಗಳನ್ನು ಕೈಗೊಳ್ಳಲಾಗಿತ್ತು 2024-25ನೇ ಸಾಲಿನಿಂದಲೇ ಜಾರಿಗೆ ಬರುವಂತೆ ನಿಯಮವೊಂದನ್ನು ಸಿದ್ಧಪಡಿಸಲಾಗಿದೆ. 2024-25 ನೇ ಸಾಲಿನ ವಾರ್ಷಿಕ ಕಲಿಕೆಯ ಪಠ್ಯಪುಸ್ತಕಗಳನ್ನು ಭಾಗ-1 ಮತ್ತು ಭಾಗ-2 ರಂತೆ ಪ್ರತ್ಯೇಕವಾಗಿ ಮುದ್ರಿಸಿ ಭಾಗ-1ರ ಪಠ್ಯ 50% ಹಾಗೂ ಭಾಗ-2ರ ಪಠ್ಯ 50% ಎಲ್ಲಾ ಸೇರಿ ಶೇಕಡ 100% ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ತಿಳಿಸಲಾಗಿದೆ
* ಈ ಮೇಲೆ ತಿಳಿಸಿದ ಅಂಶಕ್ಕೆ ಪೂರಕವಾಗಿ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನಾಧರಿಸಿಯೇ ವರ್ಷದ ಪಾಠ ಹಂಚಿಕೆ ಮಾಡಿಕೊಂಡು, ಕಲಿಕೆಯನ್ನು ಅನುಕೂಲವಾಗಿಸಲು, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ಕೈಗೊಂಡು, ಮಕ್ಕಳ ಕಲಿಕೆಯ ಸಾಮರ್ಥ್ಯ ಹೆಚ್ಚಿಕೆ ಮಾಡಬೇಕೆಂದು ಮತ್ತು ಇದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿಯನ್ನು ಶಿಕ್ಷಕರು ಕೂಡ ಮಾಡಿಕೊಳ್ಳಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರ ನಡುವೆ ಬೋರ್ಡ್ ಪರೀಕ್ಷೆ ಕುರಿತು ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಕಾದು ನೋಡೋಣ.