Employees: ನೌಕರರಿಗೆ ಸಿಹಿ ಸುದ್ದಿ, ಸೆಪ್ಟೆಂಬರ್‌ನಲ್ಲಿ ಸಂಬಳ ಹೆಚ್ಚಳ ಜೊತೆ ಬೋನಸ್‌ ಕೂಡ ಸಿಗಲಿದೆ, ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

Employees

ಈಗಷ್ಟೇ ಕರ್ನಾಟಕ ರಾಜ್ಯ ಸರ್ಕಾರವು 7ನೇ ವೇತನ ಆಯೋಗ ಶಿಫಾರಸ್ಸಿನ ಅಧಾರದ ಮೇಲೆ ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಈಡೇರಿಸಿತ್ತು. ಈಗ ಮುಂದುವರೆದು ಕೇಂದ್ರ ಸರ್ಕಾರ ನೌಕರರಿಗೆ ಇದೇ ಮಾದರಿಯ ಗುಡ್ ನ್ಯೂಸ್ ಇದೆ. ಕೇಂದ್ರ ಸರ್ಕಾರದ ಸಂಸ್ಥೆಗಳು, ಸಚಿವಾಲಯಗಳಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಕೇಂದ್ರ ಸರ್ಕಾರವು ಬಂಪರ್ ಆಫರ್ ನೀಡಿದೆ.

WhatsApp Group Join Now
Telegram Group Join Now

ಈ ವಿಚಾರವು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಅಂದರೆ ಡಿಎ (DA) ಹೆಚ್ಚಾಗುವ ಕುರಿತ ವಿಚಾರವಾಗಿದೆ. ಈವರೆಗೂ ತಿಳಿದು ಬಂದಿರುವ ಮಾಹಿತಿಯ ಪ್ರಕಾರವಾಗಿ 3% DA ಹೆಚ್ಚಳವು ಇಲ್ಲಿಯವರೆಗೆ ಸ್ಥಿರವಾಗಿದೆ. ಹಣದುಬ್ಬರದ ಪರಿಸ್ಥಿತಿಗಳ ಆಧಾರದ ಮೇಲೆ 4% ವರೆಗೂ ಹೆಚ್ಚಳವಾಗುವ ಸಾಧ್ಯತೆ ಇದೆ ಮತ್ತು ಸೆಪ್ಟೆಂಬರ್‌ನಲ್ಲಿ DA ಹೆಚ್ಚಳವಾಗಿದ್ದರೂ ಜುಲೈ 1, 2024 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂಬ ಮಾಹಿತಿಯು ತಿಳಿದು ಬಂದಿದೆ.

ಪ್ರಸ್ತುತವಾಗಿ DA ನೌಕರನ ಮೂಲ ವೇತನದ 50% ರಷ್ಟಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲವಾದರೂ DA 50% ಗಿಂತ ಹೆಚ್ಚಾದಾಗ, ಮನೆ ಬಾಡಿಗೆ ಭತ್ಯೆ (HRA) ನಂತಹ ಭತ್ಯೆಗಳನ್ನು ಕೂಡ ಹೆಚ್ಚಿಸಲಾಗುತ್ತದೆ ಈ ಬದಲಾವಣೆಗಳು ಈಗಾಗಲೇ ಹಿಂದೆ ಕೂಡ ಅನೇಕ ಬಾರಿ ನಡೆದಿದೆ.

ಈ ಸುದ್ದಿ ಓದಿ:- Gruhalakshmi: ಈ ಜಿಲ್ಲೆ ಮಹಿಳೆಯರಿಗೆ ಜುಲೈ ತಿಂಗಳ ಗೃಹಲಕ್ಷ್ಮಿ ಹಣ 2000 ಜಮೆ ಆಗಿದೆ.!

ಮಾರ್ಚ್ 2024 ರಲ್ಲಿ, ಸರ್ಕಾರವು ತುಟ್ಟಿಭತ್ಯೆಯನ್ನು 4% ರಷ್ಟು ಹೆಚ್ಚಿಸಿತ್ತು, ಈ ಮೊತ್ತವು ಮೂಲ ವೇತನದ 50% ತಲುಪಿತ್ತು. ಈ ಬಾರಿ DA ಜೊತೆಗೆ ಪಿಂಚಣಿದಾರರಿಗೆ ನೀಡಲಾಗುವ ಡಿಯರ್‌ನೆಸ್ ರಿಲೀಫ್ (DR) ಕೂಡ 4% ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ, ಜನವರಿ ಮತ್ತು ಜುಲೈನಿಂದ ಜಾರಿಗೆ ಬರುತ್ತದೆ ವರ್ಷದಲ್ಲಿ ಎರಡು ಬಾರಿ DA & DR ಪರಿಷ್ಕರಿಸಲಾಗುತ್ತದೆ.‌

ಕೂಡಲೇ 8ನೇ ವೇತನ ಆಯೋಗ ರಚನೆ ಹಾಗೂ ಹಳೆಯ ಪಿಂಚಣಿ ಪದ್ಧತಿಯನ್ನು ಮರುಸ್ಥಾಪಿಸಬೇಕು ಈ ಬೇಡಿಕೆಗಳನ್ನು ಇಟ್ಟು ಕೇಂದ್ರ ಸರಕಾರಿ ನೌಕರರು ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟಗಳು ಒತ್ತಾಯಿಸುತ್ತಲೇ ಇವೆ. ಈ ಬಗ್ಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಜುಲೈ 30 ರಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿ, ಪ್ರಸ್ತುತ 8ನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಯೋಜನೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.

7 ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ರಚಿಸಲಾಗಿತು ಹಾಗೂ ಇದರ ಶಿಫಾರಸುಗಳನ್ನು ಜನವರಿ 1, 2016 ರಿಂದ ಜಾರಿಗೆ ತರಲಾಗಿತ್ತು. ಸಾಮಾನ್ಯವಾಗಿ, ಸರ್ಕಾರಿ ನೌಕರರ ವೇತನವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಹೀಗೆ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚಿಸಲಾಗುತ್ತದೆ.

ಈ ಸುದ್ದಿ ಓದಿ:- SBI ಬ್ಯಾಂಕ್ & PNB ಬ್ಯಾಂಕ್‌ನೊಂದಿಗಿನ ವಹಿವಾಟು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ.!

ವೇತನ ಆಯೋಗಗಳು ಇದನ್ನು ಹೇಗೆ ನಿರ್ವಹಿಸುತ್ತವೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಆ ಬಗ್ಗೆ ಹೇಳುವುದಾದರೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (AICPI) 12-ತಿಂಗಳ ಸರಾಸರಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ DA ಹೆಚ್ಚಳವನ್ನು ಲೆಕ್ಕ ಹಾಕಿ ಸರ್ಕಾರಕ್ಕೆ ಆಯೋಗಗಳು ವರದಿ ನೀಡುತ್ತವೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment