Exim: ಇಂಡಿಯಾ ಎಕ್ಸಿಮ್ ಬ್ಯಾಂಕ್‌ನಲ್ಲಿ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

Exim

ಇಂಡಿಯಾ ಎಕ್ಸಿಮ್‌ ಬ್ಯಾಂಕ್‌ (India Exim Bank) ಗುತ್ತಿಗೆ ಆಧಾರದಲ್ಲಿ ವಿವಿಧ ಆಫೀಸರ್ ಹುದ್ದೆ(Officer post)ಗಳನ್ನು ನೇಮಕ (Recruitment) ಮಾಡಲು ಇದೀಗ ನೋಟಿಫಿಕೇಶನ್‌ (Notification) ಬಿಡುಗಡೆ ಮಾಡಿದೆ.

ವಿವಿಧ ಪದವಿ, ವಿವಿಧ ಸ್ನಾತಕೋತ್ತರ ಪದವಿ ಪಾಸಾದವರಿಗೆ ಈ ಉದ್ಯೋಗ ಅವಕಾಶ(Job opportunity)ಗಳು ಇವೆ. ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಆಯ್ಕೆಯಾದವರಿಗೆ ಭರ್ಜರಿ ಆಕರ್ಷಕ ಸಂಬಳವು ಸಿಗಲಿದೆ. ಹುದ್ದೆಗಳ ಹೆಸರು, ಅರ್ಹತೆ, ಇತರೆ ಡೀಟೇಲ್ಸ್‌ ಕೆಳಗಿನಂತಿದೆ ನೋಡಿ.

WhatsApp Group Join Now
Telegram Group Join Now

– ನೇಮಕಾತಿ ಬ್ಯಾಂಕ್ : ಇಂಡಿಯಾ ಎಕ್ಸಿಮ್‌ ಬ್ಯಾಂಕ್‌
– ಹುದ್ದೆ ಹೆಸರು : ವಿವಿಧ ಕಾರ್ಯಕ್ಷೇತ್ರದ ಆಫೀಸರ್‌ಗಳು
– ಹುದ್ದೆಗಳ ಸಂಖ್ಯೆ : 88

ಈ ಸುದ್ದಿ ಓದಿ:- Post Office:‌ ಕೇವಲ 500 ಹೂಡಿಕೆ ಮಾಡಿ 30 ಲಕ್ಷ ಪಡೆಯಿರಿ

ಹುದ್ದೆ ಹೆಸರು – ಹುದ್ದೆ ಸಂಖ್ಯೆ

– ಆಫೀಸರ್ (ಅಡ್ಮಿನಿಸ್ಟ್ರೇಷನ್) – 1
– ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್ – 1
– ಆಫೀಸರ್ (ಕಾಂಪ್ಲಿಯನ್ಸ್‌) – 2
– ಆಫೀಸರ್ (ಕಾರ್ಪೋರೇಟ್ ಕಂಮ್ಯುನಿಕೇಷನ್ಸ್‌) – 2
– ಆಫೀಸರ್ (ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) – 1
– ಆಫೀಸರ್ (ಡಿಜಿಟಲ್ ಟೆಕ್ನಾಲಜಿ ಫಿನಾಕಲ್ ಟ್ರೆಸರಿ) – 8
– ಆಫೀಸರ್ (ಡಿಜಿಟಲ್ ಟೆಕ್ನಾಲಜಿ ಇನ್ಫಾಸ್ಟ್ರಕ್ಚರ್) – 1
– ಆಫೀಸರ್ (ಡಿಜಿಟಲ್ ಟೆಕ್ನಾಲಜಿ ಅಪ್ಲಿಕೇಶನ್ ಮ್ಯಾನೇಜರ್) – 2
– ಎನ್ವಿರಾನ್ಮೆಂಟಲ್ ಸೋಷಿಯಲ್ ಅಂಡ್ ಗವರ್ನೆನ್ಸ್‌ (ಇಎಸ್‌ಜಿ) ಕಾಂಪ್ಲಿಯನ್ಸ್‌ – 2
– ಆಫೀಸರ್ – ಎಕ್ಸಿಮ್ ಮಿತ್ರ – 5
– ಆಫೀಸರ್ ಹ್ಯೂಮನ್ ರಿಸೋರ್ಸ್‌ ಮ್ಯಾನೇಜ್ಮೆಂಟ್ – 2
– ಆಫೀಸರ್ – ಲೀಗಲ್ – 8
– ಆಫೀಸರ್ (ಲೋನ್ ಆಪರೇಷನ್ಸ್‌ ಅಂಡ್ ಲೋನ್ ಮಾನಿಟರಿಂಗ್) – 15
– ಆಫೀಸರ್ (ಮಾರ್ಕೆಟಿಂಗ್ ಅಡ್ವೈಸರಿ ಸರ್ವೀಸ್ ) – 1

ಅರ್ಹತೆಗಳು

– ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ / ಡಿಗ್ರಿ / ಸ್ನಾತಕೋತ್ತರ ಪದವಿಗಳನ್ನು (ಎಂಬಿಎ, ಪಿಜಿಡಿಎಂ, ಹಣಕಾಸು, ಮಾರ್ಕೆಟಿಂಗ್, ಪಿಜಿಡಿಬಿಎ, ಸಿಎ, ಎಂಎಸ್‌ಡಬ್ಲ್ಯೂ, ಸೋಷಿಯಲ್ ವರ್ಕ್‌) ಪಡೆದಿರಬೇಕು.
– ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ 27 / 28 / 30 / 35 / 40 / 45 / 65 ಹೀಗೆ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಮಾಡಲಾಗಿದೆ.

ಪ್ರಮುಖ ದಿನಾಂಕಗಳು

– ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ : 24-09-2024
– ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರಕ್ಕೆ ಕೊನೆ ದಿನಾಂಕ: 14-10-2024
– ಅಪ್ಲಿಕೇಶನ್ ಅರ್ಜಿಯ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 14-10-2024
– ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ: ಅಕ್ಟೋಬರ್ 2024

ಅರ್ಜಿ ಶುಲ್ಕ ವಿವರ

– ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.600.
– ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600.
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ರೂ.100.
– ಅರ್ಜಿ ಶುಲ್ಕವನ್ನು ಡೆಬಿಟ್‌ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕು.

ಈ ಸುದ್ದಿ ಓದಿ:- RC & ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಮಹತ್ವದ ಬದಲಾವಣೆ.!

ಈ ಮೇಲಿನ ಹುದ್ದೆಗಳ ಕುರಿತು, ಯಾವ ಹುದ್ದೆಗೆ ಏನು ವಿದ್ಯಾರ್ಹತೆ, ವಯಸ್ಸಿನ ಅರ್ಹತೆಯನ್ನು ಹುದ್ದೆವಾರು ತಿಳಿಯಲು ನೋಟಿಫಿಕೇಶನ್‌ಗಾಗಿ ವೆಬ್‌ ವಿಳಾಸ https://www.eximbankindia.in/ ಕ್ಕೆ ಭೇಟಿ ನೀಡಿರಿ.

ಆಯ್ಕೆ ವಿಧಾನ ಹೇಗೆ?

– ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕಿರುತ್ತದೆ.
– ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಜತೆಗೆ ನಿಗದಿತ ಕಾರ್ಯಾನುಭವವನ್ನು ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಪಡೆದಿರಬೇಕು.

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment