Farmer
ಸರ್ಕಾರಿ ಭೂಮಿ ಒತ್ತುವರಿ (Govt land Encroachment) ಆಗಿರುವುದು ಮತ್ತು ಈ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸುವುದಕ್ಕಾಗಿ ಯೋಜನೆ ಸಿದ್ಧವಾಗಿ ಈಗಾಗಲೇ ಕಾರ್ಯಾಚರಣೆಯಲ್ಲಿರುವುದು ರಾಜ್ಯದಲ್ಲಿ ಬಹಳ ದಿನಗಳಿಂದ ಚರ್ಚೆಯಲ್ಲಿರುವ ವಿಷಯವೇ ಆಗಿದೆ.
ಈ ವಿಷಯದ ಕುರಿತ ಮತ್ತಷ್ಟು ಹೊಸ ಅಪ್ಡೇಟ್ ಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ಅದೇನೆಂದರೆ, ಕಳೆದ 8 ತಿಂಗಳಿಂದ ಕಂದಾಯ ಇಲಾಖೆ (Revenue Department) ಕಡೆಯಿಂದ ರಾಜ್ಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ಸರ್ವೆ ಕಾರ್ಯ ನಡೆದಿದೆ.
ಇದಕ್ಕಾಗಿ ತಂತ್ರಜ್ಞಾನವನ್ನು ಕೂಡ ಬಳಸಿಕೊಳ್ಳಲಾಗಿದ್ದು ಲ್ಯಾಂಡ್ ಬೀಟ್ ಆಪ್ (Land beat app) ಅಭಿವೃದ್ಧಿಪಡಿಸಿ ಆ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ಸರ್ವೆ ನಂಬರ್ ಲೊಕೇಶನ್ ಸಹಿತವಾದ ಮಾಹಿತಿ ಕಲೆ ಹಾಕಲಾಗಿದೆ. ಈ ಪ್ರಕಾರವಾಗಿ ಸಿಕ್ಕ ಮಾಹಿತಿಯನುಸಾರ ಇವು ಅರಣ್ಯ, ಕಂದಾಯ, ಶಿಕ್ಷಣ, ಲೋಕೋಪಯೋಗಿ ಮತ್ತು ವಿವಿಧ ಸರ್ಕಾರಿ ಇಲಾಖೆಗೆ ಸೇರಿದ ಸ್ವತ್ತು ಎಂದು ತಿಳಿದು ಬಂದಿದೆ.
ಶೀಘ್ರದಲ್ಲಿಯೇ ಇವುಗಳನ್ನು ತೆರೆವು ಗೊಳಿಸುವ ಕಾರ್ಯಾಚರಣೆ ಕೂಡ ಆರಂಭವಾಗುತ್ತಿತ್ತು ಈ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರೇ (Minister Krisnabairegowda) ಸುದ್ದಿಗೋಷ್ಠಿಯೊಂದರಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 1ರಂದು ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು ಈ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು.
ಈಗಾಗಲೇ ಇಲಾಖೆ ಕಳೆದ 8 ತಿಂಗಳ ಹಿಂದೆಯಿಂದ ಈ ಬಗ್ಗೆ ಕಾರ್ಯಗವಾಗಿದೆ ಮತ್ತು ಒತ್ತುವರಿಯಾಗಿರುವ ಜಮೀನಿನ ನಿಖರವಾದ ಮಾಹಿತಿಯನ್ನು ಕಲೆ ಹಾಕಿದೆ. ಗ್ರಾಮ ಆಡಳಿತ ಅಧಿಕಾರಿ (VAO) ಮೂಲಕ ಈ ಕಾರ್ಯ ನಡೆದಿದ್ದು 14 ಲಕ್ಷ ಸರ್ವೆ ನಂಬರ್ ಗಳನ್ನು ಖುದ್ದು ಅಧಿಕಾರಿಗಳು ಕೂಡ ಭೇಟಿ ಮಾಡಿದ್ದಾರೆ.
ಹಲವೆಡೆ ಒತ್ತುವರಿ ಆಗಿರುವುದು ಸ್ಪಷ್ಟವಾಗಿ ಕಂಡುಬಂದಿದ್ದು ಕೃಷಿ ಉದ್ದೇಶವನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ವೆ ನಂಬರ್ ಗಳನ್ನು ಕೂಡ ತಹಶೀಲ್ದಾರ್ ಮೂಲಕ ತೆರುಗುಗೊಳಿಸಲಾಗುವುದು ಮತ್ತು ಈ ಕಾರ್ಯವು ಇದೇ ಸೆಪ್ಟೆಂಬರ್ ನಿಂದಲೇ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡರು.
ಆದರೆ ಈ ಬಗ್ಗೆ ಸದ್ಯಕ್ಕೆ ರೈತರಿಗೆ ಒಂದು ಸಮಾಧಾನಕರ ಸುದ್ದಿ ಇದೆ. ಅದೇನೆಂದರೆ ಕಳೆದ 15 ವರ್ಷಗಳಿಂದ ಕೃಷಿ ಉದ್ದೇಶಕ್ಕಾಗಿಯೇ ಸರ್ಕಾರಿ ಜನಮೋನನ್ನು ಆಶ್ರಯಿಸಿ ಒತ್ತುವರಿಗೊಳಿಸಿದ್ದರೆ ಅಂತಹ ರೈತರಿಗೆ ರಿಯಾಯಿತಿ (Concetion) ಸಿಗಲಿದೆ ಎನ್ನುವ ಮಾಹಿತಿಯನ್ನು ಕಂದಾಯ ಸಚಿವರು ನೀಡಿ ಸಮಾಧಾನಗೊಳಿಸಿದ್ದಾರೆ.
ಈಗಾಗಲೇ ಬಗರ್ ಹುಕುಂ (Bagar Hukum) ಆಪ್ ಮೂಲಕ ಅರ್ಜಿ ಆಹ್ವಾನ ಮಾಡಿ ಸ್ಯಾಟಲೈಟ್ ಕ್ಲಿಪಿಂಗ್ಸ್ ಮೂಲಕ ಕಳೆದ 15 ವರ್ಷಗಳ ವಸ್ತು ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಅದೇ ಪ್ರಕಾರವಾಗಿ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನುವಂತಹ ಭರವಸೆಯು ಕಂದಾಯ ಸಚಿವರಿಂದ ಸಿಕ್ಕಿದೆ.
ಆದರೆ ನಮ್ಮ ರಾಜ್ಯದಲ್ಲಿ ಕೃಷಿ ಭೂಮಿ ಹೆಸರಿನಲ್ಲಿ ವಂಚಿಸಿರುವ ಪ್ರಕರಣಗಳಿಗೇನು ಕಡಿಮೆ ಇಲ್ಲ. ಹೀಗಾಗಿ ಕೃಷಿ ಭೂಮಿ ಹೆಸರಿನಲ್ಲಿ ಹಕ್ಕೋತ್ತಾಯ ಮಂಡಿಸುತ್ತಿರುವವರ ಅರ್ಜಿಗಳ ಪರಿಶೀಲನೆಯನ್ನು ಜಾಗ್ರತೆಯಾಗಿ ನಡೆಸಿ ಇದರಲ್ಲಿ ಅನರ್ಹರೆಂದು ಕಂಡು ಬಂದವರ ಜಮೀನುಗಳನ್ನು ಖಚಿತವಾಗಿ ತೆರವುಗೊಳಿಸಲಾಗುತ್ತದೆ.
ಎನ್ನುವ ಖಡಕ್ ಎಚ್ಚರಿಕೆ ಕೂಡ ಇಲಾಖೆ ಕಡೆಯಿಂದ ನೀಡಲಾಗಿದೆ ಹಾಗಾಗಿ ರಾಜ್ಯದ ರೈತರು ಅರ್ಹರಾಗಿದ್ದು ಈ ಮೇಲೆ ತಿಳಿಸಿದಂತೆ ಕೃಷಿ ಉದ್ದೇಶಕ್ಕಾಗಿಯೇ ಒತ್ತುವರಿ ಮಾಡಿ ಸರಿಯಾದ ದಾಖಲೆಗಳನ್ನು ಹೊಂದಿದ್ದರೆ ಈ ಬಗ್ಗೆ ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬಹುದು.