Farmer: ಪಂಪ್‌ಸೆಟ್ ಇರುವ ರೈತರಿಗೆ ಹೊಸ ರೂಲ್ಸ್.!

Farmer

ರಾಜ್ಯ ಸರ್ಕಾರ(State Govt)ದಿಂದ ರೈತರಿಗೆ(Farmers) ಮತ್ತೊಂದು ಸುದ್ದಿ ಸಿಕ್ಕಿದೆ. ಹೌದು, ಇದರ ಬಗ್ಗೆ ಮಾಹಿತಿ ಇಲ್ಲಿದೆ. ಇಂದು ರೈತರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ(rain)-ಬೆಳೆ(crop) ಇಲ್ಲದೆ ರೈತರು ಸರಿಯಾಗಿ ಬೇಸಾಯ(farming) ಮಾಡಲು ಸಾಧ್ಯವಾಗುತ್ತಿಲ್ಲ.

ಅಷ್ಟೇ ಅಲ್ಲದೆ, ರೈತರು ನೀರಿಗಾಗಿಯೂ ಕೂಡ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ-ಗದ್ದೆಗಳ ಪಕ್ಕದಲ್ಲಿಯೇ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು(Bore well) ಕೊರೆಸಿ ತಮ್ಮ ಜಮೀನಿಗೆ ಕೃಷಿ ಪಂಪ್ ಸೆಟ್ ಗಳನ್ನು (Agricultural pump set) ಅಳವಡಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now

ಹಾಗೆಯೇ ಇದೀಗ ಸರ್ಕಾರವು ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ್(Aadhaar card) ಜೋಡಣೆ ಕಡ್ಡಾಯ(link Aadhar to pump set) ಮಾಡಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ‌ ಬನ್ನಿ ನೀರಾವರಿ ಪಂಪ್‌ಸೆಟ್ ಗಳಿಗೆ ಆಧಾರ್ ನಂಬರ್ (Adhar number) ಜೋಡಣೆ ಬಗ್ಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ

ಕರ್ನಾಟಕದ ಇಂಧನ ಇಲಾಖೆ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಗೆ ಆಧಾರ್ ನಂಬರ್ ಜೋಡಣೆ (Adhar number link) ಮಾಡಬೇಕು ಎಂದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ ನೀಡಿತ್ತು. ಈಗ ಇದರ ಕುರಿತಾಗಿ ವರದಿ ನೀಡುವಂತೆ ಸೂಚನೆ ನೀಡಿಲಾಗಿದೆ.

ಈ ಸುದ್ದಿ ಓದಿ:- RC & ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಮಹತ್ವದ ಬದಲಾವಣೆ.!
ಹಲವು ವಿದ್ಯುತ್ ಕಂಪನಿಗಳಿಗೆ ಈ ಕುರಿತ ಪತ್ರ ಬರೆಯಲಾಗಿದೆ :

ವಿವಿಧ ಆದೇಶಗಳಲ್ಲಿ ಉಲ್ಲೇಖಿಸಿ ವಿನೋದ್ ಕುಮಾರ್ ಡಿ. ಎಂ. ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ, ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನಿಯಮಿತಗಳಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ.

ಆಧಾರ್ ಜೋಡಣೆ ಬಗ್ಗೆ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ದಾಖಲಿಸಲಾಗಿದೆ :

ಇಂಧನ ಇಲಾಖೆ ಅಧ್ಯಕ್ಷತೆಯಲ್ಲಿ ದಿನಾಂಕ 20.07.2024 ರಂದು ನಡೆದ ಸಭೆಯಲ್ಲಿ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಗೆ ಆಧಾರ್ ಜೋಡಣೆಯನ್ನು ಈಗಾಗಲೇ ದಿನಾಂಕ 31.07.2024 ರೊಳಗಾಗಿ ಪೂರ್ಣಗೊಳಿಸಲು ಹಾಗೂ ಪೂರ್ಣಗೊಳಿಸಲಾಗದಿರುವ ಸನ್ನಿವೇಶದಲ್ಲಿ ಹೆಚ್ಚುವರಿ ಕಾಲಾವಕಾಶ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ (Karnataka Electricity Regulation) ಆಯೋಗಕ್ಕೆ ದಾಖಲಿಸಲಾಗಿದೆ.

ಭೂ ವಿಸ್ತೀರ್ಣ ಮತ್ತು ಇತರೆ ಅಂಶಗಳ ಬಗ್ಗೆ ವಿಶ್ಲೇಷಣೆಯ ವಿವರವನ್ನು ಸರ್ಕಾರಕ್ಕೆ ನೀಡಲು ಕೋರಲಾಗಿದೆ :

ಸೆಪ್ಟೆಂಬರ್-2024ರಂತೆ 10 ಹೆಚ್‌ಪಿ (HP) ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಹಾಯಧನ ಬಿಡುಗಡೆಯನ್ನು ವ್ಯವಸ್ಥಿತ ರೂಪದಲ್ಲಿ ಪಡೆಯಲು ಕೋರಿರುವಂತೆ, ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣವಾಗಿ ದಿನಾಂಕ 25.08.2024 ರೊಳಗಾಗಿ ಸಾಧಿಸುವುದು. ಈಗಾಗಲೇ ಆಧಾರ್ ಜೋಡಣೆಯಾಗಿರುವ ಸ್ಥಾವರಗಳ ಬಗ್ಗೆ ಮಾಲೀಕತ್ವ, ಭೂ ವಿಸ್ತೀರ್ಣ ಮತ್ತು ಇತರೆ ಅಂಶಗಳ ಬಗ್ಗೆ ವಿಶ್ಲೇಷಣೆಯ ವಿವರವನ್ನು ದಿನಾಂಕ 26.08.2024/ 06.09.2024 ರೊಳಗಾಗಿ ಸರ್ಕಾರಕ್ಕೆ ನೀಡಲು ಕೋರಲಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳು (Electricity supply companies) ಅನುಭವಿಸುತ್ತಿರುವ ಆರ್ಥಿಕ ನಷ್ಟದ ಕುರಿತು ಸಹಾಯಧನವನ್ನು ಬಿಡುಗಡೆಗೊಳಿಸಲು ಸರ್ಕಾರಕ್ಕೆ ಕೋರಿಕೆ :

ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದರಿಂದ ವಿದ್ಯುತ್ ಖರೀದಿ, ಅಲ್ಪಾವಧಿ ಮತ್ತು ದೀರ್ಘಾವರಿ ಸಾಲಗಳ ಮರುಪಾವತಿ ಮತ್ತು ಇತರೆ ವೆಚ್ಚಗಳನ್ನು ವ್ಯಯಿಸಲು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿರುವ ಸಹಾಯಧನವನ್ನು ಅವಲಂಬಿಸಿರುವುದಾಗಿ ತಿಳಿಸಿ ಸೆಪ್ಟೆಂಬರ್-24ರ ಮಾಹೆಯ ಸಹಾಯಧನವನ್ನು ಬಿಡುಗಡೆಗೊಳಿಸಲು.

ಮತ್ತೊಮ್ಮೆ ಆರ್ಥಿಕ ಇಲಾಖೆಯನ್ನು (Economic Department) ಕೋರಲಾಗಿರುತ್ತದೆ. ಇಲಾಖೆಯು ಸೆಪ್ಟೆಂಬರ್-24ರ ಮಾಹೆಯ ಸಹಾಯಧನವನ್ನು ಬಿಡುಗಡೆಗೊಳಿಸಲು ಸಹಮತಿಸಿ, ಅಕ್ಟೋಬರ್-24ರ ಮಾಹೆಯ ಸಹಾಯಧನ ಬೇಡಿಕೆಯನ್ನು ಆಧಾರ್ ಜೋಡಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೋರಲಾಗಿದೆ.

ಎಷ್ಟು ಶೇಕಡ ಜೋಡಣೆಯಾಗಿದೆ ಎಂಬುದರ ಬಗ್ಗೆ ಈ ಕೆಳಗೆ ನೀಡಲಾಗಿದೆ :

ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹಾಗೂ ಸರ್ಕಾರದಿಂದ ನಿರ್ದಿಷ್ಟಪಡಿಸಿರುವ ಸಮಯದಲ್ಲಿ ಸಾಧಿಸದಿರುವುದು ವಾಸ್ತವದ ಸಂಗತಿಯಾಗಿರುತ್ತದೆ. ದಿನಾಂಕ 17.09.2024ರ ಪ್ರಗತಿಯ ಅನುಸಾರ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳ ಆಧಾರ್ ಜೋಡಣೆಯ ಪ್ರಗತಿಯು ಶೇ. 94.30 ರಷ್ಟು ಮಾತ್ರ ಸಾಧಿಸಲಾಗಿದೆ.

ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ಆಧಾರ್ ಜೋಡಣೆ ಪ್ರಕ್ರಿಯೆ ಸಂಪೂರ್ಣವಾಗಿ ಸಾಧಿಸದಿರುವುದರಿಂದ ಹಾಗೂ ಈಗಾಗಲೇ ಆಧಾರ್ ಜೋಡಣೆಯಾಗಿರುವ ನೀರಾವರಿ ಪಂಪ್‌ಸೆಟ್ ಸ್ಥಾವರಗಳ ಸಹಾಯಧನವನ್ನು ಪರಿಣಾಮಕಾರಿ ಮತ್ತು ಫಲಪ್ರದ ವಿತರಣೆಗಾಗಿ ಮಾಲೀಕತ್ವ, ಭೂಮಿಯ ವಿಸ್ತೀರ್ಣ ಮತ್ತು ಇತರೆ ಅಂಶಗಳ ಬಗ್ಗೆ ವರದಿಯನ್ನು ನೀಡದಿರುವುದರಿಂದ ಸೆಪ್ಟೆಂಬರ್-24ರ ಮಾಹೆಯ ಅನುದಾನವನ್ನು ಬಿಡುಗಡೆಗೊಳಿಸಲಾಗದಿರುವ ಬಗ್ಗೆ ಹಿಂಬರಹ ನೀಡಲಾಗಿರುತ್ತದೆ.

ಆಧಾರ್ ಜೋಡಣೆ ಪ್ರಕ್ರಿಯೆ

ಅಕ್ಟೋಬರ್-2024ರ ಮಾಹೆಯ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಹಾಯಧನ (subsidy) ಬಿಡುಗಡೆಯನ್ನು ವ್ಯವಸ್ಥಿತ ರೂಪದಲ್ಲಿ ಪಡೆಯಲು ಆಧಾರ್ ಜೋಡಣೆ ಪ್ರಕ್ರಿಯೆಯನ್ನು ದಿನಾಂಕ 23.09.2024 ರೊಳಗಾಗಿ ಪೂರ್ಣಗೊಳಿಸಿ, ವರದಿಯನ್ನು ದಿನಾಂಕ 24.09.2024 ರೊಳಗಾಗಿ ಸರ್ಕಾರಕ್ಕೆ ನೀಡಲು ಹಾಗೂ ಆಧಾರ್ ಪ್ರಕ್ರಿಯೆ (Adhar link process) ಪೂರ್ಣಗೊಳ್ಳದ ಸನ್ನಿವೇಶದಲ್ಲಿ ಉಂಟಾಗುವ ಸಹಾಯಧನದ ಬಿಡುಗಡೆಯ ವ್ಯತಿರಿಕ್ತ ಪರಿಣಾಮಗಳಿಗೆ ಸಂಬಂಧಿಸಿದ ವಿದ್ಯುತ್‌ ಸರಬರಾಜು ಕಂಪನಿಗಳು ನೇರ ಹೊಣೆಯಾಗುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment