Farmers: ರೈತರಿಗೆ ಗೌರಿ ಗಣೇಶ ಹಬ್ಬಕ್ಕೆ ಬಿಗ್ ಗಿಫ್ಟ್ ಕೊಟ್ಟ ಕೇಂದ್ರ ಸಚಿವರು.!

Farmers

ರಾಜ್ಯದ ರೈತ (farmer)ರಿಗೆ ಕೇಂದ್ರದಿಂದ ಗಣೇಶ ಹಬ್ಬ (Ganesha Festival)ಕ್ಕೆ ಬಿಗ್ ಗಿಫ್ಟ್ ಸಿಕ್ಕಿದೆ. ಹೌದು, ರಾಜ್ಯದಲ್ಲಿ ಮತ್ತೆರೆಡು ಬೆಳೆ (crop)ಗಳನ್ನು ಬೆಂಬಲ ಬೆಲೆ (price)ಯಲ್ಲಿ ಖರೀದಿ (purchase)ಸಲು ಕೇಂದ್ರ ಸರ್ಕಾರ (Central Govt) ಅನುಮತಿ (permission) ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಸರು ಕಾಳು, ಸೂರ್ಯಕಾಂತಿ(Sunflower crop) ಜತೆಗೆ ಈಗ ಉದ್ದು (urad dal) ಮತ್ತು ಸೋಯಾಬಿನ್ (Soybean) ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರ (State Govt)ಕ್ಕೆ ಕೇಂದ್ರ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

ನಾಲ್ಕೈದು ದಿನಗಳ ಹಿಂದಷ್ಟೇ ಹೆಸರು ಕಾಳು ಮತ್ತು ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ರೈತರಿಗೆ ಗಣೇಶ ಹಬ್ಬದ ಗಿಫ್ಟ್ ನೀಡಿದೆ ಎಂದಿದ್ದಾರೆ.

ಈ ಸುದ್ದಿ ಓದಿ:- Indian Bank Recruitment:- ಇಂಡಿಯನ್ ಬ್ಯಾಂಕ್ ನೇಮಕಾತಿ ಆಸಕ್ತರು ಅರ್ಜಿ ಹಾಕಿ.!

“ಹೆಸರು ಮತ್ತು ಸೂರ್ಯಕಾಂತಿ”ಗೆ ಬೆಂಬಲ ಬೆಲೆ ಘೋಷಿಸಿ ರಾಜ್ಯದಲ್ಲಿ ಖರೀದಿ ಕೇಂದ್ರ ತೆರೆಯುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವಾಲಯ ಇದೀಗ “ಉದ್ದು ಮತ್ತು ಸೋಯಾಬೀನ್” ಗೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.

ಕರ್ನಾಟಕದಲ್ಲಿ 2024-25 ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 19,760 ಮೆಟ್ರಿಕ್ ಟನ್ ಉದ್ದು ಹಾಗೂ 1,03,315 ಮೆಟ್ರಿಕ್ ಟನ್ ಸೋಯಾಬಿನ್ ಖರೀದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ msp ಅಡಿಯಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಸೋಯಾಬೀನ್ ಖರೀದಿಸುವಂತೆ ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ನಿನ್ನೆಯೇ (ಆ.29)ಆದೇಶ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿ:- EPFO: PF ಅಕೌಂಟ್ ಇರುವ ಉದ್ಯೋಗಿಗಳಿಗೆ ಸಿಗಲಿದೆ 7 ಲಕ್ಷ.!

ಉದ್ದಿನ ಕಾಳು 7400 ರೂ. ಮತ್ತು ಸೋಯಾಬಿನ್ ಗೆ 4892 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಕಳೆದ ವರ್ಷ 6950 ರು. ಇದ್ದ ಉದ್ದಿನ ಬೆಂಬಲ ಬೆಲೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 450 ರೂ. ಹೆಚ್ಚಳ ಕಂಡಿದೆ. 4600 ದರವಿದ್ದ ಸೋಯಾಬಿನ್ ಬೆಂಬಲ ಬೆಲೆ ಈಗ 292 ರೂ. ಹೆಚ್ಚಳವಾಗಿದೆ.

ತಕ್ಷಣ ಖರೀದಿ ಕೇಂದ್ರ ತೆರೆಯಲು ಒತ್ತಾಯ

ರಾಜ್ಯ ಸರ್ಕಾರ ತಕ್ಷಣವೇ ರಾಜ್ಯದ್ಯಂತ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿ ಹೆಸರು, ಸೂರ್ಯಕಾಂತಿ ಜತೆಗೆ ಉದ್ದು ಮತ್ತು ಸೋಯಾಬಿನ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದ ರೈತರ ಸಂಕಷ್ಟಕ್ಕೆ ಪ್ರಧಾನಿ ಸ್ಪಂದನೆ

ರಾಜ್ಯದ ರೈತರ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ನಿರಂತರ ಸ್ಪಂದಿಸುತ್ತಲೇ ಬಂದಿದ್ದಾರೆ. ಇದೀಗ ನಾಲ್ಕು ಬೆಳೆಗಳಿಗೆ ಬೆಂಬಲ ಬೆಳೆ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದ್ದಾರೆಂದು ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಹೇಳಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment