Fence for farm
ರೈತರನ್ನು(Farmers) ನಮ್ಮ ದೇಶದ ಬೆನ್ನೆಲುಬು, ಅನ್ನದಾತರು ಎಂದು ಕರೆಯಲಾಗುತ್ತದೆ. ರೈತನು ಜಮೀನಿನಲ್ಲಿ(land) ಬೆಳೆ(crop) ಬೆಳೆಯದಿದ್ದರೆ ಮನುಷ್ಯ ಕುಲಕ್ಕೆ ಆಹಾರವೇ(food) ಸಿಗುವುದಿಲ್ಲ. ರೈತರು ಜಮೀನುಗಳಲ್ಲಿ ಬಿತ್ತನೆ(sowing) ಮಾಡಿ ಬೆಳೆ ಬೆಳೆದು ಅದನ್ನು ಮಾರುವಾಗ ಆ ಬೆಳೆಗೆ ಸರಿಯಾದ ಬೆಲೆ (price)ಸಿಕ್ಕರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಆಗುತ್ತದೆ.
ಆದರೆ, ಕೆಲವು ವೇಳೆ ರೈತ ತಾನು ಬೆಳೆದು ಲಾಭ ಪಡೆಯುವುದಕ್ಕಿಂತ ಅಧಿಕ ನಷ್ಟ(loss)ವನ್ನೆ ಅನುಭವಿಸಿರುತ್ತಾನೆ. ಇಂತಹ ಸಂದರ್ಭದಲ್ಲಿ ರೈತರು ಬೇಸರಗೊಂಡು ವ್ಯವಸಾಯ(farming) ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಈಗಾಗಲೇ ಇಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಅಲ್ಲದೆ ರೈತ ತಾನು ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿಯೇ ಇದೆ.
ಇತ್ತೀಚಿನ ದಿನಗಳಲ್ಲಿ ಬೆಳೆಗಳನ್ನು ರಕ್ಷಿಸುವುದು ರೈತರಿಗೆ ಗಂಭೀರ ಸಮಸ್ಯೆ ಆಗಿದೆ. ಏಕೆಂದರೆ, ಕಾಡು ಪ್ರಾಣಿಗಳಿಂದ ಬೆಳೆದು ನಿಂತಿರುವ ಬೆಳೆಗಳಿಗೆ ಹಾನಿಯಾಗುವ ಸಂಭವವೇ ಹೆಚ್ಚಾಗಿದೆ. ಕಾಡು ಪ್ರಾಣಿಗಳು ರೈತರ ಶ್ರಮದಿಂದ ಬೆಳೆದು ನಿಂತಿರುವ ಬೆಳೆಗಳನ್ನು ನಾಶ ಮಾಡುತ್ತಾ ಇರುವುದನ್ನು ದಿನೇ ದಿನೇ ಸಾಮಾನ್ಯವಾಗಿ ನೋಡುತ್ತಿದ್ದೇವೆ.
ಈ ಸುದ್ದಿ ಓದಿ:- Gruhalakshmi Yojana: ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟರು ಸಿಎಂ ಸಿದ್ದರಾಮಯ್ಯ.!
ಇದರಿಂದಾಗಿ ರೈತರ ಇಳುವರಿಗೂ ಸಹ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ, ರೈತನು ತನ್ನ ಜಮೀನಿಗೆ ಸುತ್ತಲೂ ತಂತಿ ಬೇಲಿಗಳನ್ನು ಹಾಕಿಸಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ಕಾಪಾಡಿಕೊಳ್ಳ ಬಹುದಾಗಿದೆ. ಆದರೆ, ರೈತನು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಸಮಸ್ಯೆಯನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಕಾಣಬಹುದಾಗಿದೆ.
ಆದ್ದರಿಂದ, ಸಮಸ್ಯೆಯನ್ನು ಪರಿಹರಿಸಲು ರೈತರ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯುವಂತೆ ಮಾಡಲು ಅನೇಕ ರಾಜ್ಯ ಸರ್ಕಾರಗಳು ತಮ್ಮ ಮಟ್ಟದಲ್ಲಿ ಬೆಳೆ ರಕ್ಷಣೆಗಾಗಿ ವಿವಿಧ ರೀತಿಯ ಆರ್ಥಿಕ ನೆರವು ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ.
ರೈತರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ರೈತರಿಗೆ ಸಹಾಯವಾಗುವಂತೆ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಜಾರಿಗೆ ತಂದಿವೆ. ಅದರಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಪರಿಹಾರ ನೀಡುವುದಕ್ಕಾಗಿ ನಮ್ಮ ರಾಜ್ಯ ಸರ್ಕಾರವು ರೈತರು ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಲು ಯೋಜನೆಯನ್ನು ಇದೀಗ ಜಾರಿಗೆ ತಂದಿದೆ.
ಈ ಸುದ್ದಿ ಓದಿ:- BSNL Offer : BSNL ಗ್ರಾಹಕರಿಗೆ ಗುಡ್ ನ್ಯೂಸ್: 160 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾ ಫುಲ್ ಫ್ರೀ.!
ಹೌದು, ರೈತರು ಬಿತ್ತನೆ ಮಾಡಿದ ಸಮಯದಿಂದ ಸಸ್ಯವು ಬೆಳೆದು ಬೆಳೆ ಬರುವವರೆಗೂ ಬೆಳೆಯನ್ನು ನೋಡಿಕೊಳ್ಳುತ್ತಾರೆ. ಇಲ್ಲದಿದ್ದರೆ, ಕೋತಿಗಳು, ಎಮ್ಮೆಗಳು ಮತ್ತು ಪಕ್ಷಿಗಳಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಬೆಳೆಯನ್ನು ರಕ್ಷಿಸಲು ರೈತರು ಬೇಲಿ ಹಾಕುತ್ತಾರೆ. ಸರ್ಕಾರವು ರೈತರಿಗಾಗಿ ಹೊಸ ಯೋಜನೆಯನ್ನು ತಂದಿದೆ.
ತಾರಾಬಂದಿ ಯೋಜನೆ(Tarabandi Project)ಯ ಮೂಲಕ ರೈತರು ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಲು ಅನುದಾನವನ್ನು ಪಡೆಯಬಹುದು. ಈ ಯೋಜನೆಯು ಸ್ವಂತವಾಗಿ ಬೇಲಿ ಹಾಕಲು ತಗಲುವ ಹಣದ ಶೇಕಡಾ 90 ರಷ್ಟು ಸಬ್ಸಿಡಿಯನ್ನು ಒದಗಿಸುತ್ತದೆ. ರೈತರಿಗೆ ಬೇಲಿ ಹಾಕಲು 20,000 ರೂ. ವೆಚ್ಚವಾಗಿದ್ದರೆ, ಸರ್ಕಾರವು 18,000 ರೂ.ಗಳನ್ನು ನೀಡುವುದು. ನಂತರ ರೈತರು ಕೇವಲ 2,000 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಇದಕ್ಕೆ ಬೇಕಾದ ದಾಖಲೆಗಳು
ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್, ಫೆನ್ಸಿಂಗ್ ವೈರ್ ಗಾಗಿ ಪಾವತಿಸಿದ ಹಣದೊಂದಿಗೆ ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಕೃಷಿ ಮಾಡುವ ಯಾವುದೇ ರೈತ ಈ ಯೋಜನೆಗೆ ಅರ್ಹನಾಗಿದ್ದಾನೆ. ಪ್ರಸ್ತುತ, ಈ ಯೋಜನೆ ರಾಜಸ್ಥಾನದಲ್ಲಿ ಜಾರಿಯಲ್ಲಿದೆ.