Fixed Deposit : ಬ್ಯಾಂಕ್‌ನಲ್ಲಿ 1 ಲಕ್ಷ ಇಟ್ರೆ 3 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Fixed Deposit

ನಮ್ಮ ದೇಶದ ಸರ್ಕಾರಿ ಬ್ಯಾಂಕ್(Government Bank) ಗಳಲ್ಲಿ ಮತ್ತು ಪ್ರೈವೇಟ್ ಬ್ಯಾಂಕ್ (Private Bank)ಗಳಲ್ಲಿ ಎರಡು ಕಡೆ ಹಿರಿಯ ನಾಗರಿಕ(senior citizens)ರಿಗೆ ಒಳ್ಳೆಯ ಸೇವೆಗಳನ್ನು ಒದಗಿಸಿಕೊಡಲಾಗುತ್ತದೆ. ಇಲ್ಲಿ ನೀವು ಹೂಡಿಕೆ(Investment) ಮಾಡುವ FD(Fixed Deposit) ಯೋಜನೆಗಳ ಮೇಲೆ ಕೆಲವು ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ(interest) ಕೊಡಲಾಗುತ್ತದೆ.

60 ವರ್ಷ ಮೇಲ್ಪಟ್ಟವರಿಗೆ 7.75% ವರೆಗು FD ಮೇಲೆ ಬಡ್ಡಿದರ ಸಿಗುತ್ತದೆ. ಇನ್ನು ಕೆಲವು ಬ್ಯಾಂಕ್ ಗಳಲ್ಲಿ 80 ವರ್ಷ ಮೇಲ್ಪಟ್ಟವರು ಕೂಡ ಹೂಡಿಕೆ ಮಾಡಿ, ಉತ್ತಮವಾದ ಬಡ್ಡಿದರ ಪಡೆಯುವ ಅವಕಾಶವಿದೆ, ಹಿರಿಯರು ವಯಸ್ಸಾದ ಕಾಲದಲ್ಲಿ ಕಷ್ಟಪಡಬಾರದು ಎನ್ನುವ ಉದ್ದೇಶ ಇದರದ್ದಾಗಿದೆ.

WhatsApp Group Join Now
Telegram Group Join Now
ಈ ಸುದ್ದಿ ಓದಿ:- Sukanya Samriddhi Yojana: ನಿಮ್ಮ ಮಗಳ ಹೆಸರಿನಲ್ಲಿ 3,000 ಠೇವಣಿ ಮಾಡಿದ್ರೆ 16 ಲಕ್ಷ ಸಿಗಲಿದೆ.!

SBI, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, ಹೀಗೆ ಅನೇಕ ಬ್ಯಾಂಕ್ ಗಳಲ್ಲಿ ಹಿರಿಯ ನಾಗರಿಕರಿಗೆ ಉತ್ತಮವಾದ ಬಡ್ಡಿ ದರ ಕೊಡಲಾಗುತ್ತದೆ. ಇಲ್ಲಿ 1 ವರ್ಷದಿಂದ 3 ವರ್ಷದವರೆಗು ಅಥವಾ 5 ವರ್ಷದವರೆಗು ಕೂಡ ಹಿರಿಯ ನಾಗರೀಕರು FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಭವಿಷ್ಯ(future)ದ ದೃಷ್ಟಿಯಿಂದ ನೋಡುವುದಾದರೆ, ಇದೊಂದು ಉತ್ತಮವಾದ ಆಯ್ಕೆ ಆಗಿದೆ. ಹಾಗಿದ್ದಲ್ಲಿ, ಅತಿ ಹೆಚ್ಚು ಬಡ್ಡಿ ಕೊಡುವ ಬ್ಯಾಂಕ್‌ಗಳು ಯಾವುವು ಎನ್ನುವುದರ ಬಗ್ಗೆ ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ.

ಈ ಸುದ್ದಿ ಓದಿ:- LIC Kanyadan Policy: ಮಕ್ಕಳ ಶಿಕ್ಷಣ, ಮದುವೆ ಬಗ್ಗೆ ಚಿಂತಿಸಬೇಡಿ LIC ನಲ್ಲಿ ಕೇವಲ 3,447 ಕಟ್ಟಿ ಸಾಕು 22 ಲಕ್ಷ ಸಿಗುತ್ತೆ.!

1. ಆಕ್ಸಿಸ್ ಬ್ಯಾಂಕ್(Axis Bank) : ಈ ಬ್ಯಾಂಕ್ ನಲ್ಲಿ ಹಿರಿಯ ನಾಗರೀಕರು 1 ಲಕ್ಷ FD ಮಾಡಿದರೆ, ಮೂರು ವರ್ಷಗಳಲ್ಲಿ 1.25 ಲಕ್ಷ ರಿಟರ್ನ್ಸ್ ಪಡೆಯುತ್ತಾರೆ. ಹಾಗೆಯೇ ಹಿರಿಯ ನಾಗರೀಕರಿಗೆ FD ಮೇಲೆ 7.60% ವರೆಗು ಬಡ್ಡಿ ಸಿಗುತ್ತದೆ.

2. ಬ್ಯಾಂಕ್ ಆಫ್ ಬರೋಡಾ (Bank of Baroda) : ಈ ಬ್ಯಾಂಕ್ ನಲ್ಲಿ ಕೂಡ ಹಿರಿಯ ನಾಗರೀಕರಿಗೆ ಉತ್ತಮವಾದ ಬಡ್ಡಿದರ ಸಿಗುತ್ತದೆ. ಇಲ್ಲಿ ಹಿರಿಯರ FD ಯೋಜನೆ ಮೇಲೆ 7.75% ಬಡ್ಡಿ ಕೊಡಲಾಗುತ್ತದೆ. 3 ವರ್ಷಕ್ಕೆ 1 ಲಕ್ಷ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ವೇಳೆ ಹಿರಿಯರಿಗೆ 1.26 ಲಕ್ಷ ರೂಪಾಯಿ ರಿಟರ್ನ್ಸ್ ಬರುತ್ತದೆ.

3. HDFC ಬ್ಯಾಂಕ್: ಇದು ಪ್ರೈವೇಟ್ ಸೆಕ್ಟರ್ ಬ್ಯಾಂಕ್ ಆಗಿದ್ದು, ಇಲ್ಲಿ ಹಿರಿಯ ನಾಗರೀಕರು 3 ವರ್ಷಕ್ಕೆ FD ಮಾಡಿದರೆ, 7.50% ಬಡ್ಡಿ ಬರುತ್ತದೆ. ಇಲ್ಲಿ ಹಿರಿಯರು 1 ಲಕ್ಷ ಹೂಡಿಕೆ ಮಾಡಿದರೆ, 3 ವರ್ಷಗಳ ನಂತರ 1.25 ಲಕ್ಷ ರಿಟರ್ನ್ಸ್ ಬರುತ್ತದೆ.

4. SBI : ಇದು ನಮ್ಮ ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿದ್ದು, ಇಲ್ಲಿ ಹಿರಿಯ ನಾಗರೀಕರಿಗೆ FD ಯೋಜನೆಯ ಮೇಲೆ 7.25% ಬಡ್ಡಿ ಸಿಗುತ್ತದೆ. ಇಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ 3 ವರ್ಷಗಳ ನಂತರ 1.24 ಲಕ್ಷ ರಿಟರ್ನ್ಸ್ ಬರುತ್ತದೆ.

5. ಬ್ಯಾಂಕ್ ಆಫ್ ಇಂಡಿಯಾ (Bank of India) : ಇದರ ಜೊತೆಗೆ ಯೂನಿಯನ್ ಬ್ಯಾಂಕ್ ಇದ್ದು, ಈ ಎರಡು ಕಡೆ ಹಿರಿಯ ನಾಗರೀಕರು FD ಮಾಡಿದರೆ ಅವರಿಗೆ 7% ಬಡ್ಡಿ ಸಿಗುತ್ತದೆ. ಇಲ್ಲಿ ಹಿರಿಯರು 1 ಲಕ್ಷ ಹೂಡಿಕೆ ಮಾಡಿದರೆ, 3 ವರ್ಷಗಳ ನಂತರ 1.23 ಲಕ್ಷ ರಿಟರ್ನ್ಸ್ ಬರುತ್ತದೆ.

6. ಕೆನರಾ ಬ್ಯಾಂಕ್ (Canara Bank): ಈ ಬ್ಯಾಂಕ್ ನಲ್ಲಿ ಹಿರಿಯ ನಾಗರೀಕರಿಗೆ FD ಮೇಲೆ 7.30% ಬಡ್ಡಿ ಕೊಡಲಾಗುತ್ತದೆ. ಇಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, 3 ವರ್ಷಗಳ ನಂತರ 1.24 ಲಕ್ಷ ರಿಟರ್ನ್ಸ್ ಬರುತ್ತದೆ.

ಈ ರೀತಿಯ ಬಡ್ಡಿದರಗಳು ಹಿರಿಯ ನಾಗರೀಕರಿಗೆ ಸಿಗಲಿದ್ದು, ತಪ್ಪದೇ ಎಲ್ಲರೂ ಹೂಡಿಕೆ ಮಾಡಿ, ಲಾಭ ಪಡೆಯಿರಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment