ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ವಾಹನಗಳನ್ನು ಚಲಾಯಿಸಬೇಕು ಅಂದರೆ, ಡ್ರೈವಿಂಗ್ ಕಲಿಯಬೇಕು ಎಂದು ಆಸೆ ಇದ್ದೇ ಇರುತ್ತದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಕಾರು ಖರೀದಿಸಬೇಕು ಹಾಗೂ ಕಾರನ್ನು ಡ್ರೈವು ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಆದರೆ, ಕೆಲವರಿಗೆ ಡ್ರೈವಿಂಗ್ ಕಲಿಯಲು ವಾಹನ ಸಿಗದೇ ಮತ್ತು ಯಾವುದೇ ತರಬೇತಿ ಇಲ್ಲದೆ ಡ್ರೈವಿಂಗ್ ಕಲಿತಿರುವುದಿಲ್ಲ.
ಹಾಗಾಗಿ, ಸರ್ಕಾರದಿಂದ ಅಂತಹ ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿ ನೀಡಲು ಯೋಜನೆಯನ್ನು ಮಾಡಿದೆ. ಸದ್ಯ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ.
ಖಾಸಗಿ ಡ್ರೈವಿಂಗ್ ಸ್ಕೂಲ್ (Free Driving Class) ಗಳಿಗೆ ಸೆಡ್ಡು ಹೊಡೆಯಲು ಸಾರಿಗೆ ಇಲಾಖೆ ಮುಂದಾಗಿದ್ದು ಬಿಎಂಟಿಸಿಯಿಂದ (BMTC) ಯುವಕ ಯುವತಿಯರಿಗೆ ಉಚಿತ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ಕ್ಲಾಸ್ ನಡೆಸಲು ಮುಂದಾಗಿದೆ. ಮೂವತ್ತು ದಿನ ಉಚಿತವಾಗಿ ಕಾರು, ಬಸ್ ಡ್ರೈವಿಂಗ್ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನ ವಡ್ಡರಹಳ್ಳಿಯ (Vaddarahalli) 22 ಎಕರೆ ಪ್ರದೇಶದಲ್ಲಿ ಈ ಕ್ಲಾಸ್ ನಡೆಯಲಿದೆ. ಬೇರೆ ಊರಿನಿಂದ ಬರುವವರಿಗೆ ಉಚಿತವಾಗಿ ಊಟ-ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ. ಮೂವತ್ತು ದಿನ ತರಬೇತಿ ಮುಗಿದ ನಂತರ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಡಲಾಗುತ್ತೆ.
ಹೌದು, ಬೆಂಗಳೂರಿನಲ್ಲಿ ಡ್ರೈವಿಂಗ್ ತರಬೇತಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಕಾರು ಹಾಗೂ ಬಸ್ ಚಾಲನೆಯ ಮೇಲೆ ಆಸಕ್ತಿ ಇದ್ದರೂ ಡ್ರೈವಿಂಗ್ ಕ್ಲಾಸ್‌ನ ದುಬಾರಿ ಶುಲ್ಕಕ್ಕೆ ಬೇಸತ್ತು ಹಿಂದೇಟು ಹಾಕುತ್ತಿದ್ದಾರೆ. ಇಂತವರಿಗಾಗಿ ಬಿಎಂಟಿಸಿ ಸುವರ್ಣಾವಕಾಶ ನೀಡುತ್ತಿದ್ದು, ಚಾಲಕ ವೃತ್ತಿಯ ಮೇಲೆ ಆಸಕ್ತಿ ಇರುವ ಯುವಕ ಯುವತಿಯರಿಗಾಗಿ ಬಿಎಂಟಿಸಿ ಉಚಿತ ತರಬೇತಿ ನೀಡಲು ಮುಂದಾಗಿದೆ.
ಬಿಎಂಟಿಸಿಯಿಂದ ಆಸಕ್ತಿ ಇರುವ ಯುವಕ ಯುವತಿಯರಿಗಾಗಿ ಮೂವತ್ತು ದಿನ ಉಚಿತ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ತರಬೇತಿ ನಡೆಸಲು ಮುಂದಾಗಿದೆ. ಅಲ್ಲದೇ ಮೂವತ್ತು ದಿನ ತರಬೇತಿ ಮುಗಿದ ನಂತರ ಕಲಿಕೆ ಅನುಗುಣವಾಗಿ ಪರೀಕ್ಷೆ ನಡೆಸಿ ಬಿಎಂಟಿಸಿಯಿಂದಲೇ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಡುವುದುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ವಡ್ಡರಹಳ್ಳಿಯ 22 ಎಕರೆ ಪ್ರದೇಶದಲ್ಲಿ ಉಚಿತ ಬಸ್ಸು ಹಾಗೂ ಕಾರಿನ ತರಬೇತಿ ನಡೆಯಲಿದ್ದು, ಯುವತಿಯರಿಗೆ ಕೂಡ ಚಾಲನಾ ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಬಡ ಹಾಗೂ ಮಧ್ಯಮ ವರ್ಗದ ಯುವ ಜನತೆ ಡ್ರೈವಿಂಗ್ ತರಬೇತಿ ಪಡೆಯುವ ದೃಷ್ಟಿಯಿಂದ ಸಾರಿಗೆ ಇಲಾಖೆ ಈ ನೂತನ ಹೆಜ್ಜೆ ಇಡುತ್ತಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಯುವಕ, ಯುವತಿಯರು ತರಬೇತಿ ಪಡೆಯಬಹುದು. ಬೇರೆ ಊರಿನಿಂದ ಬೆಂಗಳೂರಿಗೆ ಬಂದು ಈ ತರಗತಿ ಪಡೆಯುವವರಿಗೆ ಬಿಎಂಟಿಸಿ ಸಂಸ್ಥೆ ವತಿಯಿಂದಲೇ ಊಟ-ವಸತಿ ವ್ಯವಸ್ಥೆ ಕೂಡ ಇರಲಿದೆ. ಬಿಎಂಟಿಸಿಯಲ್ಲಿ 25 ವರ್ಷಗಳ ಅನುಭವವಿರುವ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಪಡೆದಿರುವ ಮಹಿಳಾ ಮತ್ತು ಪುರುಷ ಚಾಲಕರು ಯುವಕ ಯುವತಿಯರಿಗೆ ಡ್ರೈವಿಂಗ್ ತರಬೇತಿ ತೆಗೆದುಕೊಳ್ಳುತ್ತಾರೆ. ಮೂವತ್ತು ದಿನ ತರಬೇತಿ ಮುಗಿದ ನಂತರ ಡ್ರೈವಿಂಗ್ ಪರೀಕ್ಷೆ ನಂತರ ನೆಲಮಂಗಲ ಆರ್‌ಟಿಓದಲ್ಲಿ ಡಿಎಲ್ ನೀಡಲಾಗುತ್ತದೆ.
ಉಚಿತ ಡ್ರೈವಿಂಗ್ ತರಬೇತಿ ಪಡೆಯಲು ಆಸಕ್ತರು ಏನು ಮಾಡಬೇಕು..?
ಬಿಎಂಟಿಸಿಯ ಈ ಉಚಿತ ತರಬೇತಿಗೆ ಸೇರಲು ಯುವಕ ಯುವತಿಯರು ಶಾಂತಿನಗರದ ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ನಿಮ್ಮ ವಿಳಾಸ ಹಾಗೂ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಎಂಟಿಸಿ ಅಧಿಕಾರಿಗಳು ಸಂಪರ್ಕಿಸಿ ಮುಂದಿನ ಮಾಹಿತಿ ನೀಡುತ್ತಾರೆ.
2023-24 ನೇ ಸಾಲಿನಲ್ಲಿ 970 ಯುವಕ ಯುವತಿಯರಿಗೆ ಡ್ರೈವಿಂಗ್ ತರಬೇತಿ ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಿದ್ದು, ಈಗಾಗಲೇ ಮೊದಲ ಬ್ಯಾಚ್‌ನಲ್ಲಿ ಜನವರಿಯಲ್ಲಿ 104 ಮಂದಿ ಉಚಿತ ತರಬೇತಿ ಪಡೆದು ಡಿಎಲ್ ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಬ್ಯಾಚ್‌ನಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ಬ್ಯಾಚ್‌ಗೆ ಸೇರಬೇಕು ಎಂದುಕೊಂಡವದು ಕೂಡಲೇ ಅರ್ಜಿ ಸಲ್ಲಿಸಬಹುದು.
ಈ ಡ್ರೈವಿಂಗ್ ಕ್ಲಾಸ್ ಸೇರೋದು ಹೇಗೆ?
ಕೇವಲ ಡ್ರೈವಿಂಗ್ ಕ್ಲಾಸ್ ಮಾತ್ರ ಹೇಳಿಕೊಡೋದಿಲ್ಲ ಟ್ರಾಫಿಕ್ ಪೋಲಿಸರು, ಆರ್ಟಿಓ ಅಧಿಕಾರಿಗಳಿಂದ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ತರಬೇತಿ, ಟ್ರಾಫಿಕ್ ಟಿಪ್ಸ್ ನೀಡಲಾಗುತ್ತೆ. ಈ ಡ್ರೈವಿಂಗ್ ಸ್ಕೂಲ್ ಸೇರಲು ಯುವಕ ಯುವತಿಯರು ಶಾಂತಿನಗರದ ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ರೆ ನಿಮಗೆ ತರಬೇತಿ ನೀಡಲಾಗುತ್ತದೆ.
2023 – 24 ನೇ ಸಾಲಿನಲ್ಲಿ 970 ಯುವಕ ಯುವತಿಯರಿಗೆ ಡ್ರೈವಿಂಗ್ ಕ್ಲಾಸ್ ಹೇಳಿಕೊಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮೊದಲ ಬ್ಯಾಚ್ ನಲ್ಲಿ ಜನವರಿಯಲ್ಲಿ 104 ಯುವಕ ಯುವತಿಯರು ಉಚಿತವಾಗಿ ತರಬೇತಿ ಪಡೆದು ಡಿಎಲ್ ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಬ್ಯಾಚ್ ನಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದಾರೆ.
ಒಟ್ನಲ್ಲಿ ಡ್ರೈವಿಂಗ್ ಕಳಿತು ಕೆಎಸ್ಆರ್ಟಿಸಿ ಗೋ ಬಿಎಂಟಿಸಿಗೋ ಅಥವಾ ಸರ್ಕಾರದ ಯಾವುದಾರರು ಇಲಾಖೆಗೆ ಅಪ್ಲಿಕೇಶನ್ ಹಾಕಿ ಡ್ರೈವಿಂಗ್ ಕೆಲಸ ಪಡೆಯೋಣ ಅಂದರೆ ಈ ಡ್ರೈವಿಂಗ್ ಸ್ಕೂಲ್ ನವ್ರು ಒನ್ ಟೂ ಡಬಲ್ ಹಣ ಕೇಳುತ್ತಾರೆ. ಹಾಗಾಗಿ ಬಿಎಂಟಿಸಿಯಿಂದ ನೀಡುತ್ತಿರುವ ಈ ಉಚಿತ ಡ್ರೈವಿಂಗ್ ಕ್ಲಾಸ್ ಎಷ್ಟೋ ಬಡ ಯುವಕ ಯುವತಿಯರಿಗೆ ತುಂಬಾ ಸಹಾಯ ಆಗ್ತಿರೋದಂತೊ ಸುಳ್ಳಲ್ಲ.
ಈ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಈ ಕೆಳಗಿನಂತಿವೆ;
* ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ
* ಎಸ್.ಎಸ್.ಎಲ್.ಸಿ. ಅಂಕಪಟ್ಟಿ / ಶಾಲಾ ವರ್ಗಾವಣಾ ಪ್ರಮಾಣ ಪತ್ರ / * ನೋಟರಿಯಿಂದ ಪ್ರಮಾಣ ಪತ್ರ.
* ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ