Free Gas
ಪ್ರಧಾನ ಮಂತ್ರಿ ನರೇಂದ್ರ ಮೋದಿ (P M Narendra Modi) ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ಎಲ್ಲಾ ವರ್ಗದ ಜನತೆಗೂ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದರು. ರೈತರು, ಮಹಿಳೆಯರು, ಕಾರ್ಮಿಕರು, ಶ್ರಮಿಕ ವರ್ಗ, ವಿದ್ಯಾರ್ಥಿಗಳು ಹೀಗೆ ಪ್ರತಿವರ್ಗಕ್ಕೂ ಕೂಡ ವಿಶೇಷ ಯೋಜನೆಗಳ ಕೊಡುಗೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವಂತಹ ಹೆಣ್ಣು ಮಕ್ಕಳ ಆರೋಗ್ಯದ ಹಿತ ರಕ್ಷಣಾ ಉದ್ದೇಶದಿಂದ ಹೊಗೆ ಮುಕ್ತ ವಾತಾವರಣದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಹೆಣ್ಣು ಮಕ್ಕಳು ಕೂಡ ಅಡುಗೆ ಮಾಡುವಂತಾಗಲಿ ಈ ಮೂಲಕ ಪರಿಸರಕ್ಷಣೆಯು ಹಾಗೂ ಕಾಡುಗಳ ಸಂರಕ್ಷಣೆ ಆಗಲಿ ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು (PMUY) ಪರಿಚಯಿಸಿದರು.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮೂಲಕ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ (Free Gas Connection) ಕಲ್ಪಿಸಿಕೊಡಲಾಗಿದೆ. ಇದರೊಂದಿಗೆ ಆ ಕುಟುಂಬಕ್ಕೆ ಉಚಿತವಾಗಿ ಒಂದು ಗ್ಯಾಸ್ ಸ್ಟವ್, ಒಂದು ಗ್ಯಾಸ್ ಸಿಲಿಂಡರ್, ರೆಗುಲೇಟರ್ ಹಾಗೂ ಗ್ಯಾಸ್ ಲೈಟರ್ ಸಹಾ ನೀಡಲಾಗಿದೆ.
ಮೇ 12, 2016ರಲ್ಲಿ ಆರಂಭಗೊಂಡ ಈ ಯೋಜನೆಯು ಯಶಸ್ವಿಯಾಗಿ ಇಂದು 8 ವರ್ಷಗಳನ್ನು ಪೂರೈಸಿದೆ ಮತ್ತು ಇಂದು ಕೋಟ್ಯಾಂತರ BPL ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಸ್ಥರು ಕೂಡ LPG ಶುದ್ಧ ಅನಿಲದ ಸಹಾಯದಿಂದ ಅಡುಗೆ ಮಾಡುತ್ತಿದ್ದಾರೆ.
ಮುಂದುವರೆದು ಕಾಲ ಕಾಲಕ್ಕೆ ಅನುಗುಣವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಇನ್ನಷ್ಟು ಮಹತ್ವ ನೀಡಲಾಗಿದ್ದು ಹಲವು ಆಫರ್ ಗಳನ್ನು ಕೂಡ ಘೋಷಿಸಲಾಗಿದೆ. ಅಂತೆಯೇ ದೀಪಾವಳಿ ಪ್ರಯುಕ್ತ ಕೂಡ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಸೌಕರ್ಯ ಪಡೆದು LPG ಗ್ಯಾಸ್ ಖರೀದಿಸುತ್ತಿರುವ ಎಲ್ಲಾ ನಾರಿಮಣಿಯರಿಗೆ ಒಂದು ವಿಶೇಷ ಕೊಡುಗೆ ಇದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಹಾಗೂ ಇತರೆ ಸಾಮಗ್ರಿ ಪಡೆಯುವುದರ ಜೊತೆಗೆ ಸಿಗುತ್ತಿರುವ ಮತ್ತೊಂದು ಅನುಕೂಲತೆ ಏನೆಂದರೆ ವರ್ಷಕ್ಕೆ 12 ಗ್ಯಾಸ್ ಬುಕಿಂಗ್ ಮಾಡುವ ಗ್ರಾಹಕರಿಗೆ ಮೂರು ಬುಕಿಂಗ್ ಉಚಿತವಾಗಿ ಸಿಗುತ್ತಿತ್ತು. ಅಂದರೆ ಪ್ರತಿ 12 ಬುಕಿಂಗ್ ಮೇಲೆ ಗ್ರಾಹಕರು ರೂ.400 ರಷ್ಟು ಹೆಚ್ಚು ಸಬ್ಸಿಡಿ ಪಡೆಯುತ್ತಿದ್ದ ಕಾರಣ 3 ಗ್ಯಾಸ್ ಉಚಿತವಾಗಿ ಪಡೆದ ರೀತಿ ಆಗುತ್ತಿತ್ತು.
ಆದರೀಗ ದೀಪಾವಳಿ ಪ್ರಯುಕ್ತ (Diwali offer free Gas booking) ನೇರವಾಗಿ ಒಂದು ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಕಳೆದ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಕ್ಷಾಬಂಧನದ ವಿಶೇಷವಾಗಿ ಪ್ರದಾನ ಮಂತ್ರಿ ಉಜ್ವಲ ಯೋಜನೆ ಸಬ್ಸಿಡಿ ದರವನ್ನು ಪ್ರಧಾನ ಮಂತ್ರಿಗಳು ಹೆಚ್ಚಿಸಿದ್ದರು.
ಈಗ ನೇರವಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲ ಮನೆಗಳಿಗೂ ಒಂದು ಗ್ಲಾಸ್ ಸಿಲಿಂಡರ್ ಬುಕಿಂಗ್ ಉಚಿತವಾಗಿಯೇ ನೀಡಲು ಉತ್ತರ ಪ್ರದೇಶ ಸರ್ಕಾರವು ನಿರ್ಧರಿಸಿದೆ. ಉತ್ತರ ಪ್ರದೇಶ ಸರ್ಕಾರದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ತಮ್ಮ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ದೀಪಾವಳಿ ಉಚಿತ ಸಿಲಿಂಡರ್ ಬಗ್ಗೆ ಮಾಹಿತಿ ನೀಡಿದ್ದಾರೆ.
ದೀಪಾವಳಿ ಪ್ರಯುಕ್ತ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಉಚಿತವಾಗಿ LPG ಸಿಲಿಂಡರ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ , ಈ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯವಿಧಾನಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.