Free Home: ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಮನೆ ಹಂಚಿಕೆ, ಆಸಕ್ತರು ಅರ್ಜಿ ಹಾಕಿ.!

Pradhan Mantri Avas Yojan ( Free Home )

ಪ್ರತಿಯೊಬ್ಬರಿಗೂ ಕೂಡ ಮನೆ ಎನ್ನುವುದು ಮೂಲಭೂತ ಅವಶ್ಯಕತೆ ಹಾಗಾಗಿ ಜೀವನಪೂರ್ತಿ ದುಡಿದು ಹಣ ಕೂಡಿಟ್ಟು ತಮ್ಮ ಮಕ್ಕಳಿಗಾಗಿ ಒಂದು ಮನೆ ಮಾಡಲು ಬಯಸುತ್ತಾರೆ ಇನ್ನು ಕೆಲವರು ತಂದೆ ತಾಯಿ ಗಟ್ಟಿ ಇರುವಾಗಲೇ ಅವರ ಕಣ್ಣೆದುರಿಗೆ ಸಾಲ ಸೋಲವಾದರೂ ಮಾಡಿ ಒಂದು ಸ್ವಂತ ಮನೆ ಕಟ್ಟಿ ಇರುವಷ್ಟು ದಿನ ತಂದೆ ತಾಯಿಯನ್ನು ಅಲ್ಲಿ ನೆಮ್ಮದಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಸೆ ಪಟ್ಟಿರುತ್ತಾರೆ.

ಈ ರೀತಿ ಮನೆ ಇಲ್ಲದವರು ಮನೆಗಳ ಪ್ಲಾನ್ ಮಾಡುತ್ತಿದ್ದರೆ ನೀವು ಹೊಸ ಮನೆ ಕಟ್ಟಿಸುವುದಕ್ಕೆ ಅಥವಾ ಮನೆ ಖರೀದಿಸುವುದಕ್ಕೆ ಸರ್ಕಾರವು ಕೂಡ ಸಹಾಯ ಮಾಡುತ್ತಿದೆ. ಈಗಾಗಲೇ ದೇಶದಾದ್ಯಂತ ಈ ಯೋಜನೆಯು ಬಹಳ ಪ್ರಚಲಿತದಲ್ಲಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ಈ ಯೋಜನೆಯ ನೆರವಿನ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಮೊದಲನೇ ಬಾರಿಗೆ ಪ್ರಧಾನ ಮಂತ್ರಿಗಳಿಂದ ಮೋದಿ ಅವರು ಪ್ರಧಾನಿಯಕ್ಕೆ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ವಸತಿ ಯೋಜನೆಗಳಲ್ಲೊಂದು ಪ್ರಧಾನಮಂತ್ರಿ ಆವಾಸ್ ಯೋಜನೆ (PMAS). ಈ ಯೋಜನೆಯು (Housing Scheme) ಪ್ರತಿಯೊಬ್ಬರಿಗೂ ಕೂಡ 2022ರ ಒಳಗೆ ಸ್ವಂತ ಸೂರಿನ ಸೌಲಭ್ಯ ಕಲ್ಪಿಸಬೇಕು ಎನ್ನುವ ದೂರ ದೃಷ್ಟಿಯನ್ನು ಹೊಂದಿತ್ತು ಕೂಡ.

ಆದರೆ ಕಾರಣಾಂತರಗಳಿಂದ ಇದು ವಿಳಂಬವಾಗಿದೆ ಆದರೂ ನಿರಂತರವಾಗಿ ಸರ್ಕಾರ ಈ ಯೋಜನೆ ಮೂಲಕ ಮನೆ ಕಟ್ಟುವವರಿಗೆ ಮತ್ತು ಕೊಂಡುಕೊಳ್ಳುವವರಿಗೆ ನೆರವಾಗುತ್ತಿದೆ. ಈಗಾಗಲೇ ದೇಶದ 4 ಕೋಟಿಗೂ ಹೆಚ್ಚು ಫಲಾನುಭವಿಗಳು ಯೋಜನೆ ಪ್ರಯೋಜನ ಪಡೆದಿದ್ದಾರೆ. ನೀವು ಕೂಡ ಈ ಬಗ್ಗೆ ಪ್ಲಾನ್ ಮಾಡುತ್ತಿದ್ದರೆ ಪ್ರಧಾನಮಂತ್ರಿ ಆವಾಸ್ ಯೋಜನೆ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಯೋಜನೆ ಹೆಸರು:- ಪ್ರಧಾನ ಮಂತ್ರಿ ಆವಾಸ್ ಯೋಜನೆ

ಉದ್ದೇಶ:-

* ಭಾರತದ ಪ್ರತಿ ಕುಟುಂಬಕ್ಕೂ 2024ರ ಒಳಗೆ ಸ್ವಂತ ಸೂರಿನ ಭರವಸೆ
* ಮನೆ ಕೊಂಡುಕೊಳ್ಳುವವರಿಗೆ ಅಥವಾ ನಿರ್ಮಾಣ ಮಾಡುವವರಿಗೆ ಸಹಾಯಧನದೊಂದಿಗೆ ಕಡಿಮೆ ಬಡ್ಡಿದದಲ್ಲಿ ಸಾಲ ಸೌಲಭ್ಯ

ಯೋಜನೆಯ ವಿವರ:-
1. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)
2. ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ (PMAY-U)

ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ವಾರ್ಷಿಕವಾಗಿ ರೂ. 18 ಲಕ್ಷದ ಮಿತಿಯೊಳಗೆ ಇರುವ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದು
* ಆದಾಯವನ್ನು 3 ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು EWS – ಆರ್ಥಿಕವಾಗಿ ದುರ್ಬಲ, LIG ​​ – ಕಡಿಮೆ ಆದಾಯದ ಗುಂಪು ಮತ್ತು ಮೂರನೆಯದು MIG – ಮಧ್ಯಮ ಆದಾಯದ ಗುಂಪು. EWS ಗೆ ವಾರ್ಷಿಕ ಆದಾಯ ಮಿತಿಯು 3 ಲಕ್ಷ ರೂ. ಎಲ್ ಐಜಿ ಗೆ 3ರಿಂದ 6 ಲಕ್ಷ ರೂ., ಎಂಐಜಿ ಗೆ 6ರಿಂದ 18 ಲಕ್ಷ ರೂ. ಸಿಗಲಿದೆ

* ಅರ್ಜಿ ಸಲ್ಲಿಸುವ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು ಮತ್ತು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
•ಅರ್ಜಿದಾರರು ಭಾರತದಲ್ಲಿ ಎಲ್ಲಿಯೂ ಸ್ವಂತ ಶಾಶ್ವತ ಮನೆಯನ್ನು ಹೊಂದಿರಬಾರದು.
* ಕುಟುಂಬದ ಯಾವುದೇ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಇರಬಾರದು.
•ಒಬ್ಬ ವ್ಯಕ್ತಿಯು ಸ್ವಂತ ಭೂಮಿಯನ್ನು ಹೊಂದಿದ್ದರೂ ಮನೆಯನ್ನು ನಿರ್ಮಿಸದಿದ್ದರೆ, ಅವನು ಈ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಾಲವನ್ನು ತೆಗೆದುಕೊಳ್ಳಬಹುದು.

•ಕಚ್ಚಾ ಅಥವಾ ತಾತ್ಕಾಲಿಕ ಮನೆಗಳಲ್ಲಿ ವಾಸಿಸುವವರು ಈ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.
. ಈ ಯೋಜನೆಯಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ ಬ್ಯಾಂಕ್‌ ನಿಂದ ಕೈಗೆಟುಕುವ ದರದಲ್ಲಿ ಗೃಹ ಸಾಲ ಲಭ್ಯವಿದೆ. ಸಾಲ ಮರುಪಾವತಿಗೆ ಗರಿಷ್ಠ ಮಿತಿ 20 ವರ್ಷಗಳಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದ ಯಾವುದೇ CSC ಕೇಂದ್ರಗಳಲ್ಲಿ ಅಥವಾ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment