Home ವಸತಿ ಭಾಗ್ಯ ಯೋಜನೆ ಮೂಲಕ ಮನೆ ಇಲ್ಲದವರಿಗೆ ಮನೆ ಭಾಗ್ಯ.!

Home

ಮನೆ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಕುಟುಂಬಕ್ಕಾಗಿ, ನಮ್ಮ ರಕ್ಷಣೆಗಾಗಿ, ನೆಮ್ಮದಿಗಾಗಿ ಸೂರಿನ ಅಗತ್ಯತೆ ಬಹಳ ಇದೆ. ಮನೆ ಎನ್ನುವ ವಿಚಾರದಲ್ಲಿ ಒಬ್ಬೊಬ್ಬರ ಅದೃಷ್ಟ ಒಂದೊಂದು ರೀತಿ ಇರುತ್ತದೆ. ಕೆಲವರು ಹುಟ್ಟಿದಾಗಲೇ ಬಂಗಲೆಯಲ್ಲಿ ಹುಟ್ಟಿ, ಅರಮನೆಯಂತಹ ಮನೆಯಲ್ಲಿ ಬದುಕಿ ಹತ್ತಾರು ಮನೆಗಳನ್ನು ಕಟ್ಟಿಕೊಂಡು ಬರುವ ಬಾಡಿಗೆಯಿಂದಲೇ ಐಷಾರಾಮಿ ಜೀವನ ಜೀವಿಸುತ್ತಿದ್ದರೆ.

ಇನ್ನೂ ಕೆಲವರು ಸ್ವಂತ ಮನೆ ಇಲ್ಲದೆ ರಸ್ತೆ ಬದಿಗಳಲ್ಲಿ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿರುವಂತಹ, ದಿನ ಕಳೆಯುತ್ತಿರುವ ಸನ್ನಿವೇಶಗಳನ್ನು ಕಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ವಸತಿ ಯೋಜನೆಗಳನ್ನು (Housing Scheme) ನಿರ್ಮಿಸಿ ಈ ರೀತಿ ಮನೆ ಇಲ್ಲದವರ ಕೊರತೆ ಬಗೆಹರಿಸಲು ಪ್ರಯತ್ನಿಸುತ್ತಲೇ ಇದೆ.

WhatsApp Group Join Now
Telegram Group Join Now

ಇದೇ ನಿಟ್ಟಿನಲ್ಲಿ ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಖ್ಫ್ ಸಚಿವರಾದ ಜಮೀರ್ ಅಹಮದ್ ಖಾನ್ ರವರು (Minister Jameer Ahmed) ನೂತನ ವಸತಿ ಭಾಗ್ಯ ಯೋಜನೆಯನ್ನು (Vasathi Bhagya) ಘೋಷಿಸಿದ್ದಾರೆ. ಈ ಯೋಜನೆಗೆ ಯಾರು ಅರ್ಹರು? ಇದರ ವೈಶಿಷ್ಟತೆಗಳನ್ನು ಇಲ್ಲಿದೆ ನೋಡಿ ಮಾಹಿತಿ.!

ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನೇಮಕಾತಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರು ನಿರ್ದೇಶನದ ಮೇರೆಗೆ ಸಚಿವ ಜಮೀರ್ ಅಹಮದ್ ರವರು ಪ್ರತಿ ಜಿಲ್ಲೆಯಲ್ಲಿ ವಖ್ಫ್ ಅದಾಲತ್ (Waqf adalath) ನಡೆಸುವ ಮೂಲಕ ಸಮುದಾಯಕ್ಕೆ ಇರುವ ಸಮಸ್ಯೆಗಳನ್ನು ಬಗೆಹರಿಸುವ ಯೋಜನೆ ಹಾಕಿಕೊಂಡಿದ್ದಾರೆ ಇದರ ಪ್ರಯುಕ್ತವಾಗಿ ಉತ್ತರ ಕರ್ನಾಟಕ ಜಿಲ್ಲೆಯ ಭಾಗದ ಹಲವು ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆದಿದೆ.

ಈ ರೀತಿಯಾಗಿ ಸೆಪ್ಟೆಂಬರ್ 18ರಂದು ನಡೆದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಖ್ಫ್ ಅದಾಲತ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ಜಮೀರ್ ಅಹ್ಮದ್ ರವರು ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ಇರುವ ಸಮುದಾಯ ಬಾಂಧವರಿಗೆ ವಕ್ಫ್ ಮಂಡಳಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಯೋಜನೆಯ ಬಗ್ಗೆ ಘೋಷಣೆ ಮಾಡಿದ್ದಾರೆ.

ನಮ್ಮ ಸಮುದಾಯದಲ್ಲಿ ಅತ್ಯಂತ ಬಡ ಜನರಿದ್ದಾರೆ. ಈ ರೀತಿ ವಾಸಿಸಲು ಸ್ವಂತ ಮನೆ ಇಲ್ಲದವರ ಸಮೀಕ್ಷೆ ನಡೆಸಿ ಅವರಿಗೆ ಕಡಿಮೆ ಬಾಡಿಗೆ ದರದಲ್ಲಿ ಈ ಯೋಜನೆಯಡಿ ವಖ್ಫ್ ಮಂಡಳಿಯ ಬಾಡಿಗೆ ಮನೆಗಳನ್ನು ನೀಡಲಾಗುವುದು. ಇದರಿಂದ ಮಂಡಳಿಗೂ ಆದಾಯ ಬರುತ್ತದೆ ಹಾಗೂ ಸಮುದಾಯದ ಬಡವರಿಗೂ ಅನುಕೂಲವಾಗುತ್ತದೆ ಎಂದಿದ್ದಾರೆ.

ಈ ಸುದ್ದಿ ಓದಿ:- Subadra Yojana: ಸುಭದ್ರ ಯೋಜನೆ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ 10,000 ಸಿಗಲಿದೆ.!

ಇದರ ಜೊತೆಗೆ ಮೌಜನ್ ಹಾಗೂ ಇಮಾಮ್‌ಗಳಿಗೆ ಕೂಡ ಯೋಜನೆಯಡಿ ಬಾಡಿಗೆ ಆಧಾರದ ಮೇಲೆ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ರಾಜ್ಯ ವಕ್ಫ್ ಮಂಡಳಿ ಸಮುದಾಯದ ಒಳಿತಿಗೆ ಬಹಳ ಶ್ರಮಿಸುತ್ತಿದೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ.

ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಪ್ರತಿ ಜಿಲ್ಲೆಗೆ ಒಂದರಂತೆ ತಲಾ ರೂ.40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಮತ್ತು ಪ್ರತಿ ತಾಲ್ಲೂಕಿಗೆ ಒಂದರಂತೆ ಫ್ರೀಜರ್ ಸಹ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದಿದ್ದಾರೆ.

ಯಾವಾಗಲೂ ಅಧಿಕಾರಿಗಳೊಂದಿಗೆ ಸಾಮಾನ್ಯವಾಗಿ ಕೂಲ್ ಆಗಿರುವ ಜಮೀರ್ ರವರು ಈ ಬಾರಿ ರೆಬೆಲ್ ಆಗಿ ತರಾಟೆಗೂ ತೆಗೆದುಕೊಂಡಿದ್ದಾರೆ. ಸುಮ್ನೆ ಟೈಮ್‌ ಪಾಸ್‌ಗೆ ವಖ್ಫ್ ಅದಾಲತ್ ಮಾಡ್ತಿದ್ದೀವಾ ಸರಿಯಾಗಿ ಕೆಲಸ ಮಾಡಿದರೆ ಸರಿ, ಉಡಾಫೆ ಕೆಲಸ ಮಾಡಿದರೆ ಹುಷಾರ್‌ ಎಂದು ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

ಈ ಸುದ್ದಿ ಓದಿ:- UPI Payment: ಫೋನ್ ಪೇ, ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್.!

ಇಲ್ಲಿಯವರೆಗೆ ಕರ್ನಾಟಕದ 5 ಜಿಲ್ಲೆಗಳಲ್ಲಿ ವಖ್ಫ ಅದಾಲತ್ ನಡೆಸಲಾಗಿದೆ. ಈ 5 ಜಿಲ್ಲೆಗಳ ವಖ್ಫ್ ಅದಾಲತ್‌ನಿಂದಾಗಿ ಆಸ್ತಿ ಒತ್ತುವರಿ ಕುರಿತು ಹೆಚ್ಚು ದೂರು ಬಂದಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಭಾಷಾರವರು ರಾಜ್ಯದಲ್ಲಿ ಆಸ್ತಿಗಳ ಸಂರಕ್ಷಣೆ ನಿಟ್ಟಿನಲ್ಲಿ ಅದರ ಖಾತಾ ಮಾತನಾಡಿ ಅಪಡೇಟ್, ಸರ್ವೇ, ಮುಟೇಷನ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment