Free Laptop: flipkart announce free laptop for students
ಈ ಟೆಕ್ನಾಲಜಿ ಯುಗದಲ್ಲಿ ಲ್ಯಾಪ್ಟಾಪ್ ಒಂದು ಅತ್ಯವಶ್ಯಕ ಸಾಧನವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಬೇಕಾದರೆ ಇರುತ್ತಾರೆ ಆದರೆ ಲ್ಯಾಪ್ಟಾಪ್ ಇಲ್ಲದೆ ಇದ್ದರೆ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ. ಹೀಗೆ ಕಾಲಕ್ಕೆ ತಕ್ಕ ಹಾಗೆ ಎಲ್ಲವೂ ಬದಲಾಗುತ್ತದೆ, ಕಾಲದೊಂದಿಗೆ ನಾವು ಕೂಡ ಬದಲಾಗುತ್ತಾ ಹೊಂದಿಕೊಳ್ಳುತ್ತಿರಬೇಕು. ಕಳೆದೊಂದು ದಶಕದಲ್ಲಿ ತಂತ್ರಜ್ಞಾನದ ವಿಚಾರವಾಗಿ ಪ್ರಪಂಚದಲ್ಲಿ ಹೊಸದೊಂದು ಕ್ರಾಂತಿಯೇ ನಡೆದಿದೆ, ಇದಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆಯು ಕೂಡ ಬದಲಾಗಿದೆ.
ಹಾಗಾಗಿ ಬ್ಲಾಕ್ ಬೋರ್ಡ್ ನಿಂದ ಸ್ಕ್ರೀನ್ ವರೆಗೆ ಅನೇಕ ಮಾರ್ಪಾಟುಗಳಾಗಿವೆ. ಆ ಕಾರಣ ನೋಟ್ ಬುಕ್ ತುಂಬಿದ ಬ್ಯಾಗ್ ಕೊಟ್ಟು ಶಾಲಾ ಕಾಲೇಜಿಗೆ ಕಳಿಸುತ್ತಿದ್ದ ಪೋಷಕರು ಲ್ಯಾಪ್ಟಾಪ್ ಕೊಟ್ಟು ಕಳುಹಿಸಬೇಕಾದ ಪರಿಸ್ಥಿತಿಯಾಗಿದೆ. ಆದರೆ ದೇಶದ ಎಲ್ಲಾ ಪೋಷಕರಿಗೂ ಕೂಡ ಈ ಶಕ್ತಿ ಖಂಡಿತವಾಗಿಯೂ ಇರುವುದಿಲ್ಲ ಅದಕ್ಕಾಗಿ ಸಲ್ಯೂಷನ್ ಇಂತಿದೆ.
ಶಿಕ್ಷಣ ಮುಗಿದ ಬಳಿಕ ಒಬ್ಬ ವ್ಯಕ್ತಿಯು ತಾನು ಯಾವುದೇ ಕಡೆ ಕೆಲಸ ಮಾಡಲು ಇಚ್ಚಿಸಿದರು ಆತನಿಗೆ ಟೆಕ್ನಾಲಜಿ ನಾಲೆಡ್ಜ್ ಇರಬೇಕಾಗಿರುತ್ತದೆ. ಚಇನ್ನು ಕೆಲ ಟೆಕ್ನಿಕಲ್ ಕೋರ್ಸ್ ಗಳಿಗೆ ಆ ಸಂಬಂಧೌತ ಪ್ರಾಜೆಕ್ಟ್ ಗಳನ್ನು ಮಾಡಿಕೊಳ್ಳುವುದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಲ್ಯಾಪ್ಟಾಪ್ ಕಡ್ಡಾಯವಾಗಿರುತ್ತದೆ
ಇಂತಹ ಸಂದರ್ಭಗಳಲ್ಲಿ ಎಲ್ಲಾ ಪೋಷಕರು ಸಾವಿರಾರು ಹಣ ಖರ್ಚು ಮಾಡಿ ದುಬಾರಿ ಬೆಳೆಯ ಲ್ಯಾಪ್ಟಾಪ್ ಗಳನ್ನು ತಮ್ಮ ಮಕ್ಕಳಿಗೆ ಕೊಡಲು ಆಗುವುದಿಲ್ಲ.
ಸರ್ಕಾರವು ಕೆಲ ಯೋಜನೆಗಳ ಮೂಲಕ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡುತ್ತಿದೆ ಆದರೆ ಇದಕ್ಕೆ ಮಾನದಂಡವಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳುತ್ತಿದೆ. ಹೀಗಾಗಿ ಇತ್ತ ಸರ್ಕಾರದ ಕಡೆಯಿಂದಲೂ ಇಲ್ಲ, ಆ ಕಡೆ ಪೋಷಕರಿಗೂ ಕೂಡ ಲ್ಯಾಪ್ ಟಾಪ್ ಕೊಡಿಸುವ ಶಕ್ತಿ ಇಲ್ಲ ಎಂದು ಬೇಸರದಲ್ಲಿರುವ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ ಇದೆ.
ಅದೇನೆಂದರೆ ಪ್ರಸ್ತುತವಾಗಿ ಇ-ಕಾಮೆರ್ಸ್ ಕಂಪನಿಗಳಲ್ಲಿ ನಂಬರ್ ಒನ್ ಪ್ಲೇಸ್ ನಲ್ಲಿರುವ ಫ್ಲಿಪ್ ಕಾರ್ಟ್ ಲ್ಯಾಪ್ಟಾಪ್ ವಿತರಣೆಗೆ ಮುಂದಾಗಿದೆ. ಫ್ಲಿಪ್ಕಾರ್ಟ್ ನಲ್ಲಿ ಲ್ಯಾಪ್ಟಾಪ್ ಪಡೆಯುವುದು ಹೇಗೆ ಎನ್ನುವುದರ ವಿವರ ತಿಳಿದುಕೊಳ್ಳುವುದಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ.
ವಿದ್ಯಾರ್ಥಿಗಳು 2024-2025ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ತಯಾರಿ ನಡೆಸುತ್ತಿರುವಂತೆಯೇ, ಇ-ಕಾಮರ್ಸ್ ಮಾರುಕಟ್ಟೆ ಫ್ಲಿಪ್‌ಕಾರ್ಟ್ ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಉನ್ನತ ಬ್ರಾಂಡ್ ನ ಟ್ಯಾಬ್ ಮುಂತಾದ ಗ್ಯಾಜೆಟ್‌ಗಳನ್ನು ಒದಗಿಸಲು ತಯಾರಿ ನಡೆಸುತ್ತಿದೆ. ಕಂಪನಿಯ ವಾರ್ಷಿಕ ಆಯೋಜನೆಯಾದ ಬ್ಯಾಕ್ ಟು ಕ್ಯಾಂಪಸ್ ಕಾರ್ಯಕ್ರಮದ ಹಿನ್ನೆಲೆ ಜೂನ್ 2024 ರ ಆವೃತ್ತಿಯ ಮುಂದುವರೆದ ಭಾಗವಾಗಿ ಈ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.
ಈ ಯೋಜನೆಯ ಭಾಗವಾಗಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಮಾನಿಟರ್‌ಗಳು, ಸ್ಮಾರ್ಟ್‌ವಾಚ್‌ಗಳು, ನಿಜವಾದ ವೈರ್‌ಲೆಸ್ ಇಯರ್‌ಫೋನ್‌ಗಳು, ಪ್ರಿಂಟರ್‌ಗಳು, ಲ್ಯಾಪ್‌ಟಾಪ್ ಪರಿಕರಗಳಂತಹ ವಿವಿಧ ಬ್ರಾಂಡ್‌ಗಳ ಉತ್ಪನ್ನಗಳು ಬಹಳ ಕಡಿಮೆ ಬೆಲೆಗೆ ವಿಶೇಷ ಆಫರ್ ಮೂಲಕ ಲಭ್ಯವಾಗಲಿವೆ. ಈ ಹಿಂದೆಯೇ ಮೇ 2024 ರ ಆವೃತ್ತಿ ನಡೆಸಿ ಕಾರ್ಯಕ್ರಮ ಯಶಸ್ವಿಯಾಗಿತ್ತು ಈಗ ಇದರ ಎರಡನೇ ಭಾಗವಾಗಿ ಅಭಿಯಾನ ಕೈಗೊಳ್ಳಲಾಗಿದೆ, ಇದು ಜೂನ್ 21 ಮತ್ತು ಜೂನ್ 27 ರ ನಡುವೆ ನಡೆಯುತ್ತದೆ.
ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಸೂಪರ್ ಕಾಯಿನ್ಸ್, ನೋ-ಕಾಸ್ಟ್ EMI ಗಳು ಮತ್ತು ಅಪ್‌ಗ್ರೇಡ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹಳೆಯ ಲ್ಯಾಪ್‌ಟಾಪ್‌ಗಳಿಗೆ ಆಕರ್ಷಕ ವಿನಿಮಯ ಡೀಲ್‌ಗಳು ಸೇರಿದಂತೆ ವಿವಿಧ ಆಯ್ಕೆ ಮೂಲಕ ಅನುಕೂಲ ಪಡೆಯಬಹುದು. ವಿದ್ಯಾರ್ಥಿಗಳಿಗಾಗಿಯೇ ರೂಪಿಸಿದ ಹೆಚ್ಚುವರಿ ಕೊಡುಗೆಗಳಿದ್ದು ವಿವಿಧ ಕ್ರೆಡಿಟ್ ಕಾರ್ಡ್‌ಗಳಲ್ಲಿ 12 ತಿಂಗಳವರೆಗೆ ಯಾವುದೇ ಅಧಿಕ ವೆಚ್ಚವಿಲ್ಲದ EMI ಜೊತೆಗೆ ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೇಲೆ ರೂ 6,000 ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಬಹು ವಿಧಾನಗಳ ಮೂಲಕ ಪಾವತಿ ಮಾಡುವ ಅವಕಾಶವನ್ನು ಕಂಪನಿ ನೀಡಿದ್ದು ಫ್ಲಿಪ್‌ಕಾರ್ಟ್ ವಹಿವಾಟುಗಳನ್ನು ಸುಲಭಗೊಳಿಸಲು ಕ್ಯಾಶ್ ಆನ್ ಡೆಲಿವರಿ, UPI ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಂತಹ ವಿವಿಧ ಆಯ್ಕೆಗಳನ್ನು ನೀಡುತ್ತಿದೆ. ಯುವ ಪೀಳಿಗೆಯ ಗ್ರಾಹಕರು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಪ್ರೀಮಿಯಂ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಉತ್ತಮ ಕಾರ್ಯಕ್ಷಮತೆಯನ್ನು ಮುಖ್ಯವಾದರೂ ಖರೀದಿಸುವ ವಸ್ತು ಅವರ ಜೀವನಶೈಲಿ ಮತ್ತು ಬಜೆಟ್‌ಗೆ ಸರಿಹೊಂದಬೇಕೆಂದು ಕೊಳ್ಳುತ್ತಾರೆ. ಈ ರೀತಿ ಯೋಚಿಸುವ ವಿದ್ಯಾರ್ಥಿಗಳಿಗೆ ಫ್ಲಿಪ್ಕಾರ್ಟ್ ನ ಈ ಕೊಡುಗೆಯಿಂದ ಲಾಭವಾಗಲಿದೆ. ಈ ಯೋಜನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಫ್ಲಿಪ್ಕಾರ್ಟ್ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.