Free sewing machine: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆಸಕ್ತರು ಅರ್ಜಿ ಸಲ್ಲಿಸಿ.!

Free sewing machine:

ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಒಂದು ಭರ್ಜರಿ ಯೋಜನೆಯನ್ನು ಜಾರಿಗೆ ತಂದಿದೆ ಅದೇ ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ ಈ ಮೂಲಕ ಅರ್ಜಿ ಸಲ್ಲಿಸುವುದರಿಂದ ನೀವು ಉಚಿತವಾಗಿ ಒಂದು ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು. ಉಚಿತ ಹೊಲಿಗೆ ಯಂತ್ರವನ್ನು ಪಡೆಯುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಮತ್ತು ಅರ್ಜಿಯನ್ನು ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಈ ರೀತಿಯಾದ ಅನೇಕ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಹಾಗಾಗಿ ಕೊನೆವರೆಗೂ ಈ ಲೇಖನನ್ನು ಪೂರ್ತಿಯಾಗಿ ಓದಿ.

ಹೌದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಮಹಿಳೆಯರು ಸ್ವಂತ ಉದ್ಯೋಗ ಮಾಡಲಿ, ದುಡಿಮೆ ಮಾಡಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದೀಗ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು (Free Sewing Machine) ನೀಡಲು ಮುಂದಾಗಿದೆ ಸರ್ಕಾರ.

WhatsApp Group Join Now
Telegram Group Join Now

ಮಹಿಳೆಯರು ಆರ್ಥಿಕವಾಗಿ ಸಬಲವಾಗಿರಬೇಕು, ಯಾರ ಮೇಲು ಕೂಡ ಡಿಪೆಂಡ್ ಆಗಿರಬಾರದು. ತಮ್ಮ ಮನೆ ಇಂದಲೇ ಕೆಲಸವನ್ನು ಶುರು ಮಾಡಿ, ಉತ್ತಮ ಆದಾಯ ಗಳಿಸಿ, ಮನೆಯನ್ನು ನೋಡಿಕೊಳ್ಳಬಹುದು. ಇದಕ್ಕಾಗಿಯೇ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ.

ಮನೆಯಿಂದ ಮಹಿಳೆಯರು ಬಟ್ಟೆ ಹೊಲಿಯುವ ಸ್ವಂತ ಕೆಲಸ (Own Business) ಶುರು ಮಾಡಬಹುದು. ಇದಕ್ಕಾಗಿ ಅವರಿಗೆ ತರಬೇತಿ ಬೇಕು ಎಂದರೆ ಅದು ಕೂಡ ಸರ್ಕಾರದ ಕಡೆಯಿಂದಲೇ ಸಿಗಲಿದೆ. ಹಾಗಾಗಿ, ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಮಹಿಳೆಯರು ಹೊಲಿಗೆ ಯಂತ್ರ ಖರೀದಿ ಮಾಡುವುದಕ್ಕಾಗಿ ಸರ್ಕಾರದ ಕಡೆಯಿಂದ 15,000 ರೂಪಾಯಿಗಳ ವರೆಗು ಸಹಾಯಧನ (Subsidy Loan) ಸಿಗಲಿದೆ. ಎಲ್ಲಾ ರಾಜ್ಯದಲ್ಲಿ 50,000 ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. ಹಾಗಾಗಿ, ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ನೀವು ಸ್ವಂತ ಉದ್ಯಮ ಶುರು ಮಾಡಲು ಬಯಸಿದರೆ, ಅದಕ್ಕಾಗಿ ನಿಮಗೆ ಸರ್ಕಾರದ ಕಡೆಯಿಂದ ₹50,000 ರೂಪಾಯಿಗಳ ವರೆಗು ಸಾಲ (Loan) ಸೌಲಭ್ಯವನ್ನು ಕೂಡ ನೀಡಲಾಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ.

ಅಗತ್ಯವಿರುವ ದಾಖಲೆಗಳು

*ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಬ್ಯಾಂಕ್ ಪಾಸ್ ಬುಕ್
*ಅಡ್ರೆಸ್ ಪ್ರೂಫ್

ಅರ್ಹತೆ

ಉಚಿತ ಹೊಲಿಗೆ ಯಂತ್ರ (free sewing machine) ವಿತರಣೆ ಮಾಡುವ ಸರ್ಕಾರದ ಈ ಯೋಜನೆಯ ಅನುಸಾರ, ಹಣಕಾಸಿನ ವಿಚಾರದಲ್ಲಿ ಕಷ್ಟದಲ್ಲಿ ಇರುವ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ಕೆಲವು ಅರ್ಹತೆಯ ಮಾನದಂಡಗಳನ್ನು ನೀಡಲಾಗಿದೆ, ಅವುಗಳು ಏನೇನು ಎಂದು ನೋಡುವುದಾದರೆ.

*ಅರ್ಜಿ ಸಲ್ಲಿಸುವವರು ಭಾರತದಲ್ಲಿ ಹುಟ್ಟಿ ಬೆಳೆದ ಮಹಿಳೆಯೇ ಆಗಿರಬೇಕು
*ಮಹಿಳೆಯ ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇರಬೇಕು
*ಈಗಾಗಲೇ ನಿಮಗೆ ಹೊಲಿಗೆ ಕೆಲಸ ಗೊತ್ತಿರಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

https://pmvishwakarma.gov.in/ ಕೇಂದ್ರ ಸರ್ಕಾರದ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment