Sewing machine:
ಎಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರದ್ದೇ ಮೇಲುಗೈ ಆಗಿದೆ. ಕಳೆದ ಒಂದು ವರ್ಷದಿಂದ ಗ್ಯಾರೆಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಮಹಿಳೆಯರಿಗೆ ಇದೀಗ ಗ್ಯಾರಂಟಿಯೇರವಾದ ಮತ್ತೊಂದು ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ.
ಸ್ವಾವಲಂಬಿಯಾಗಿ ಬದುಕಲು ಇಚ್ಚಿಸುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದ್ದು ಯಾವ ಮಹಿಳೆಯರು ಈ ಯೋಜನೆಗೆ ಅರ್ಹರು? ಏನಿದು ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎನ್ನುವ ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಉದ್ಯಮ ಕೇಂದ್ರ ಯೋಜನೆ, ವೃತ್ತಿ ನಿರತ ಕುಶಲಕರ್ಮಿಗಳಿಗೆ ಉಪಕರಣಗಳನ್ನು ವಿತರಣೆ ಮಾಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸೇರಿದಂತೆ ಇದೇ ಮಾದರಿ ಇನ್ನಿತರ ಕೆಲವು ಯೋಜನೆಗಳ ಮೂಲಕ ಕೂಡ ಅರ್ಹ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ.
ಈ ಸುದ್ದಿ ಓದಿ:- Gruhalakshmi: ಈ ಜಿಲ್ಲೆ ಮಹಿಳೆಯರಿಗೆ ಜುಲೈ ತಿಂಗಳ ಗೃಹಲಕ್ಷ್ಮಿ ಹಣ 2000 ಜಮೆ ಆಗಿದೆ.!
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಡೆಯಿಂದ ಈ ಬಾರಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡೆಯಿಂದ ವಿವಿಧ ಯೋಜನೆಗಳ ಅರ್ಜಿ ಅಹ್ವಾನ ಮಾಡಲಾಗಿದ್ದು ಇವುಗಳಲ್ಲಿ ಒಂದಾಗಿ ಉಚಿತವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲು ಕೂಡ ಸರ್ಕಾರ ನಿರ್ಧರಿಸಿದೆ. ಹಿಂದುಳಿದ ವರ್ಗಗಳಿಗೆ ಸೇರುವ ಇದಕ್ಕೆ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವಂತಹ ಮಹಿಳೆಯರು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* 18 ವರ್ಷ ಮೇಲ್ಪಟ್ಟ 55 ವರ್ಷದ ವಯಸ್ಸಿನ ಒಳಗಿರುವ ಮಹಿಳೆಯಾಗಿರಬೇಕು
* ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ರಾಜ್ಯದ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುವುದು
* ಕುಟುಂಬದಲ್ಲಿ ಯಾರೊಬ್ಬರು ಈಗಾಗಲೇ ನಿಗಮದಿಂದ ಈ ಯೋಜನೆಯ ಪ್ರಯೋಜನ ಪಡೆದಿರಬಾರದು
* ಕುಟುಂಬದ ವಾರ್ಷಿಕ ಮಿತಿಯು ಗ್ರಾಮೀಣ ಭಾಗದಲ್ಲಿ 99,000 ಹಾಗೂ ಪಟ್ಟಣ ಪ್ರದೇಶದಲ್ಲಿ 1,20,000 ಮಿತಿಕ್ಕಿಂತ ಹೆಚ್ಚಿಗೆ ಇರಬಾರದು.
* ಯೋಜನೆಗೆ ಸೂಚಿಸಿರುವ ಎಲ್ಲಾ ಪೂರಕ ದಾಖಲೆಗಳ ಒದಗಿಸಬೇಕು
* ಮುಖ್ಯವಾಗಿ ಹಿಂದುಳಿದ ವರ್ಗಗಳ ನಿಗಮದ ವ್ಯಾಪ್ತಿಗೆ ಬರುವ ಈ
ಕೆಳಗೆ ತಿಳಿಸಿದ ಸಮುದಾಯದವರಾಗಿರಬೇಕು
ವಿಶ್ವಕರ್ಮ ಮತ್ತು ಇದರ ಉಪ ಸಮುದಾಯ
1. ಉಪ್ಪಾರ ಮತ್ತು ಇದರ ಉಪ ಸಮುದಾಯ
2. ಅಂಬಿಗ ಮತ್ತು ಇದರ ಉಪ ಸಮುದಾಯ
3. ಸವಿತಾ ಮತ್ತು ಇದರ ಉಪ ಸಮುದಾಯ
4. ಮಡಿವಾಳ ಮತ್ತು ಇದರ ಉಪ ಸಮುದಾಯ
5. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು
6. ಒಕ್ಕಲಿಗ ಮತ್ತು ಅದರ ಉಪ ಸಮುದಾಯ
7. ಲಿಂಗಾಯತ ಮತ್ತು ಅದರ ಉಪ ಸಮುದಾಯ
8. ಮತಿಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಮರಾಠ ಮತ್ತು ಅದರ ಉಪ ಸಮುದಾಯ
ಅಪ್ಲೈ ಮಾಡುವುದು ಹೇಗೆ?
* ಆನ್ಲೈನ್ ಮೂಲಕ ಈ ಯೋಜನೆಗಳಿಗೆ ಅಪ್ಲೈ ಮಾಡಬಹುದು
* ಈ ಮೇಲೆ ತಿಳಿಸಿದ ಪೂರಕ ದಾಖಲೆಗಳ ಜೊತೆಗೆ ಅರ್ಜಿದಾರರು ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
* ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿಗೆ ಭೇಟಿಕೊಟ್ಟು ಮಾಹಿತಿ ಪಡೆಯಬಹುದು ಅಥವಾ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಕೂಡ ಈ ಕುರಿತಾದ ವಿವರಣೆ ಇದೆ ಇಲ್ಲಿ ಮಾಹಿತಿ ಪಡೆಯಬಹುದು
ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಇತರೆ ಯಾವುದೇ ಗುರುತಿನ ಚೀಟಿ
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಹೊಲಿಗೆ ತರಬೇತಿ ಪಡೆದಿರುವುದರ ಬಗ್ಗೆ ಪುರಾವೆಗಾಗಿ ಪ್ರಮಾಣಪತ್ರ
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಆಗಸ್ಟ್, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* https://dbcdc.karnataka.gov.in