Gadgets: ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಹೊಂದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!

Gadgets

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಮೊಬೈಲ್, ಟಿವಿ, ಲ್ಯಾಪ್ಟಾಪ್ ಮುಂತಾದ ಎಲೆಕ್ಟ್ರಿಕಲ್ ಗ್ಯಾಜೆಟ್ ಗಳು ಇದ್ದೇ ಇರುತ್ತದೆ. ಅದರಲ್ಲೂ ಈ ಹಿಂದೆ ಒಂದು ಮನೆಗೆ ಒಂದು ಟಿವಿ ಒಂದು ಮೊಬೈಲ್ ಇರುತ್ತಿದ್ದದ್ದೇ ದೊಡ್ಡಸ್ತಿಕಿಯಾಗಿತ್ತು. ಆದರೆ ಈಗ ಕಾಲ ಎಷ್ಟೆಲ್ಲಾ ಬದಲಾಗಿದೆ ಎಂದರೆ ಬಹುತೇಕ ಎಲ್ಲರ ಬಳಿ ಎರಡೆರಡು ಮೊಬೈಲ್ ಗಳಿವೆ.

ಪ್ರತಿಯೊಬ್ಬರಿಗೂ ಪ್ರತ್ಯೇಕ ಲ್ಯಾಪ್ಟಾಪ್, ಮನೆಯಲ್ಲಿ ಪ್ರತಿ ಕೋಣೆಗೂ ಟಿವಿ, ಸಿಸಿಟಿವಿ ಕ್ಯಾಮೆರಾ ಇತ್ಯಾದಿ ಇತ್ಯಾದಿ ವಿದ್ಯುನ್ಮಾನ ಉಪಕರಣಗಳ ಬಳಕೆ ಹೆಚ್ಚಾಗುತ್ತಿದೆ. ಜನರಲ್ಲಿ ಕೊಳ್ಳುವ ಶಕ್ತಿ ಗಟ್ಟಿಯಾಗಿದೆಯೋ ಅಥವಾ ಇವುಗಳ ಬೆಲೆಯೇ ಅಂಗವಾಗಿದೆಯೋ ಒಟ್ಟಾರೆಯಾಗಿ ನಾವು ಮನೆ ತುಂಬಾ ಇವುಗಳನ್ನು ತುಂಬಿಸಿಕೊಳ್ಳುತ್ತಿದ್ದೇವೆ ಎನ್ನುವುದಂತು ನಿಜ.

WhatsApp Group Join Now
Telegram Group Join Now

ಇವುಗಳ ಬಳಕೆ ಹೆಚ್ಚಾದಂತೆ ಸಹಜವಾಗಿ ರಿಪೇರಿ ಆಗುವುದು ಅಥವಾ ಅಪ್ಡೇಟ್ ವರ್ಷನ್ ಬೇಕು ಎಂದು ಹೊಸದನ್ನು ಖರೀದಿಸುವುದು ಕೂಡ ಅಷ್ಟೇ ಮಾಮೂಲಿ ವಿಷಯ. ಆದರೆ ಹಳೆಯದ್ದನ್ನು ಏನು ಮಾಡುತ್ತಾರೆ ಅಥವಾ ಇವುಗಳ ಪ್ರಯೋಜನ ಇಲ್ಲದೆ ಇದ್ದಾಗ ಇ-ತ್ಯಾಜ್ಯವಾಗುವ ಇವುಗಳನ್ನು ಹೇಗೆ ವಿಲೇವಾರಿ ಮಾಡಲಾಗುತ್ತದೆ ಎನ್ನುವುದೇ ಇಲ್ಲಿ ಗಂಭೀರ ಪ್ರಶ್ನೆಯಾಗಿದೆ.

ಈ ಸುದ್ದಿ ಓದಿ:- BIS Recruitment:- ಬಿ.ಎಸ್.ಎಫ್ ನಲ್ಲಿ ಉದ್ಯೋಗಾವಕಾಶ, SSLC ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ಇದು ಸರ್ಕಾರದ ವರೆಗೂ ಕೂಡ ತಲುಪಿದ್ದು ಸ್ಪಂದಿಸಿದ ಸರ್ಕಾರ ಇದಕ್ಕಾಗಿ ಒಂದು ಕಾನೂನು ತರುವ ಬಗ್ಗೆ ಕೂಡ ಚರ್ಚೆ ನಡೆಸಿದೆ. ‌ಇದಕ್ಕೆ ಸಂಬಂಧಪಟ್ಟ ಹಾಗೆ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರು ಒಂದು ಪತ್ರಿಕಾ ಪ್ರಕಟಣೆಯನ್ನು ಕೂಡ ಹೊರಡಿಸಿದ್ದರು. ಈ ಬಗ್ಗೆ ಅಧಿಕೃತ ನೋಟಿಸ್ ನಲ್ಲಿದ್ದ ಸಂಗತಿ ಏನೆಂದರೆ.

ದಿನದಿಂದ ದಿನಕ್ಕೆ ಪ್ರತಿ ಮನೆಗಳಲ್ಲೂ ಕೂಡ ಅಪಾಯಕಾರಿ ಇ-ತ್ಯಾಜ್ಯದ ಹೆಚ್ಚಳ ಆಗುತ್ತಿದೆ. ಇವುಗಳನ್ನು ಕಸಕ್ಕೆ ಅಥವಾ ಗುಜರಿಗೆ ಹಾಕುತ್ತಾರೆ. ಗುಜರಿ ಅಂಗಡಿಯವರು ವಿದ್ಯುನ್ಮಾನ ಉಪಕರಣಗಳಲ್ಲಿ ತಮಗೆ ಬೇಕಾದ ಬಿಡಿ ಭಾಗಗಳನ್ನು ಮಾತ್ರ ತೆಗೆದುಕೊಂಡು ಉಳಿದ ಪದಾರ್ಥಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸುತ್ತದೆ ಎನ್ನುವುದು ಸರ್ಕಾರದ ಗಮನಕ್ಕೂ ಬಂದಿದೆ.

ಸಾರ್ವಜನಿಕ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಇಂದಿನ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಜನಸಾಮಾನ್ಯರು ತಮ್ಮ ಮನೆಗೆ ಯಾವುದೇ ಹೊಸ ಮೊಬೈಲ್, ಟಿವಿ, ಕಂಪ್ಯೂಟರ್, ಲ್ಯಾಪ್ಟಾಪ್ ಇವುಗಳ ಚಾರ್ಜರ್ ಇತ್ಯಾದಿ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ.

ಈ ಸುದ್ದಿ ಓದಿ:- Sukanya Samruddi Scheme: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ, ಅಕ್ಟೋಬರ್ 1 ರಿಂದಲೇ ಹೊಸ ನಿಯಮ ಜಾರಿ.!

ಈಗಾಗಲೇ ತಮ್ಮ ಮನೆಯಲ್ಲಿರುವ ಹಳೆ ವಸ್ತುಗಳನ್ನು ಮಾರಾಟ ಮಾಡಲು ಬಯಸಿದರೆ‌ ಮಾರಾಟಗಾರರು ಕಡ್ಡಾಯವಾಗಿ ಈ ವಸ್ತುಗಳಿಗೆ ಕನಿಷ್ಠ ಬೆಲೆ ನೀಡಿ ಖರೀದಿಸಬೇಕು ಎಂಬ ನಿಯಮ ಜಾರಿಗೆ ತರಬೇಕು. ಈ ರೀತಿ ನಿಯಮ ಮಾಡಿದರೆ ಮಾತ್ರ ದಿನ ಹೆಚ್ಚಾಗುತ್ತಿರುವ ಈ ತ್ಯಾಜ್ಯದ ಸಮಸ್ಯೆಗೆ ಕಡಿವಾಳ ಹಾಕಬಹುದು ಎಂದು ನಿರೀಕ್ಷಿಸಿದ್ದಾರೆ.

ಮುಂದುವರೆದು ಹೇಳುವುದಾದರೆ ಈ ರೀತಿ ಕ್ರಮ ಕೈಗೊಳ್ಳುವಾಗ ಖರೀದಿದಾರನು ಹಳೆಯ ಮೊಬೈಲ್ ನಳಲ್ಲಿರುವ ದತ್ತಾಂಶಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಮಸ್ಯೆಗಳು ತಲೆ ದೊರೆತಂತೆ, ಇವುಗಳ ಸಾಧಕ ಭಾದಕಗಳ ಬಗ್ಗೆ ಕೂಡ ಗಮನಹರಿಸಿ ಈ ಯೋಜನೆಯ ಅನುಷ್ಠಾನ ಕುರಿತ ಪ್ರಸ್ತಾವನೆಯನ್ನು ಇನ್ನು ಕಡತದಲ್ಲಿ 30 ದಿನದ ಒಳಗಡೆ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ. ಸರ್ಕಾರ ಈ ನಡೆ ಮತ್ತು ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment