Ganga kalyana Scheme:
ರಾಜ್ಯ ಸರ್ಕಾರ(State Govt)ವು ರೈತರ ಕೃಷಿ ನೆಲದಲ್ಲಿ(Agricultural land of farmers) ನೀರಾವರಿ ಸೌಲಭ್ಯ(Irrigation facility) ಒದಗಿಸಿಕೊಡುವುದಕ್ಕಾಗಿ ಗಂಗಾ ಕಲ್ಯಾಣ ಯೋಜನೆ(Ganga kalyana Scheme)ಯನ್ನು ಜಾರಿಗೆ ತಂದಿದೆ.
ಈ ಒಂದು ಯೋಜನೆಯ ಮೂಲಕ ರೈತರ ಜಮೀನಿಗೆ ಬೋರ್ವೆಲ್ (borewell) ಕೊರೆಸುವುದಕ್ಕೆ, ಕೊಳವೆ ಬಾವಿ ಕೊರೆಸುವುದಕ್ಕೆ ಸರ್ಕಾರದಿಂದ ಸಾಲ ಸೌಲಭ್ಯ (Loan Facility) ಸಿಗಲಿದ್ದು, ಇದರ ಅನುಕೂಲ ಪಡೆಯುವುದು ಹೇಗೆ? ಈ ಯೋಜನೆಗೆ ಅಪ್ಲೈ ಮಾಡುವುದು ಹೇಗೆ? ಅರ್ಹತೆಯ ಮಾನದಂಡಗಳು ಏನೇನು? ಇದೆಲ್ಲದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ ಬನ್ನಿ…
ಗಂಗಾ ಕಲ್ಯಾಣ ಯೋಜನೆಯಲ್ಲಿ ಸಿಗುವ ಹಣವೆಷ್ಟು?
ಈ ಯೋಜನೆಯ ಮೂಲಕ ನೀವು ಎಷ್ಟು ಹಣ ಪಡೆಯಬಹುದು ಎಂದು ನೋಡುವುದಾದರೆ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 4 ಲಕ್ಷ ಸಬ್ಸಿಡಿಯನ್ನು ನೀಡುವ ಮೂಲಕ ರಾಜ್ಯದ ರೈತರಿಗೆ ಬೋರ್ವೆಲ್ ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ. ಈ ಯೋಜನೆ ಅಡಿಯಲ್ಲಿ ರೈತನ ಬರಗಾಲದ ಸಂಕಷ್ಟವನ್ನು ತಪ್ಪಿಸಲು ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ.
ಇನ್ನು 50 ಸಾವಿರಕ್ಕೆ 4% ಬಡ್ಡಿ ದರದಲ್ಲಿ ನೀವು ಸಾಲ ಮರುಪಾವತಿ (Loan Re Payment) ಮಾಡಬೇಕಾಗುತ್ತದೆ. ಇನ್ನುಳಿದ ಬೇರೆ ಜಿಲ್ಲೆಗಳಲ್ಲಿ ₹3.75 ಲಕ್ಷ ಸಾಲ ಸಿಗಲಿದ್ದು, ₹3.25 ಲಕ್ಷ ಸಹಾಯಧನ ಆಗಿರಲಿದೆ, ಇನ್ನು ₹50 ಸಾವಿರ ರೂಪಾಯಿಗಳನ್ನು 4% ಬಡ್ಡಿದರಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು.?
– ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನ ವಯೋಮಿತಿಯು 18 ವರ್ಷ ಮೇಲ್ಪಟ್ಟಿರಬೇಕು.
– ಅಷ್ಟೇ ಅಲ್ಲದೆ ಅರ್ಜಿದಾರನು ಒಂದೇ ಸ್ಥಳದಲ್ಲಿ ಎರಡು ಎಕ್ಕರೆ ಅಥವಾ 5 ಎಕರೆ ಜಮೀನನ್ನು ಹೊಂದಿರಬೇಕು.
– ಜಮೀನನ್ನು ಹೊಂದಿರುವ ಸ್ಥಳದಲ್ಲಿ ಯಾವುದೇ ರೀತಿಯ ನೀರಾವರಿ ವ್ಯವಸ್ಥೆಯು ಆ ಜಮೀನಿಗೆ ಇರಬಾರದು.
ಅಲ್ಲಿನ ನಿಗಮಕ್ಕೆ ಸಂಬಂಧಪಟ್ಟವರ ವರ್ಗಕ್ಕೆ ಮಾತ್ರ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ .
– ಅಷ್ಟೇ ಅಲ್ಲದೆ ಕೊಡಗು, ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಎಕರೆ ಜಮೀನನ್ನು ಹೊಂದಿರಬೇಕು.
– ಅಷ್ಟೇ ಅಲ್ಲದೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇರಬೇಕು.
ಗಂಗಾ ಕಲ್ಯಾಣ ಯೋಜನೆಗೆ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?
– ಅರ್ಜಿದಾರನ ಆಧಾರ್ ಕಾರ್ಡ್
– ಜಾತಿ ಮತ್ತು ಆದಾಯ ಪ್ರಮಾಣ ಪತ್ರ
– ಬ್ಯಾಂಕ್ ಪಾಸ್ ಬುಕ್
– ಸ್ವಂತ ಜಮೀನಿನ ಪಹಣಿ
– ಅರ್ಜಿದಾರನ ಭಾವಚಿತ್ರ
– BPL ರೇಷನ್ ಕಾರ್ಡ್
– ಮೊಬೈಲ್ ಸಂಖ್ಯೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ ದಿನಾಂಕವಾಗಿದೆ. ಆದ್ದರಿಂದ ಯಾರೆಲ್ಲ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ. ಅವರು ಬೇಗನೆ ಅರ್ಜಿ ಸಲ್ಲಿಸಿ.
ಯಾವೆಲ್ಲಾ ವರ್ಗದವರು ಅರ್ಜಿ ಸಲ್ಲಿಸಬಹುದು?
* ಉಪ್ಪಾರ ಅಭಿವೃದ್ಧಿ ನಿಗಮ
* ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
* ಮರಾಠ ಅಭಿವೃದ್ಧಿ ನಿಗಮ
* ವಿಶ್ವಕರ್ಮ ಅಭಿವೃದ್ಧಿ ನಿಗಮ
* ಮಡಿವಾಳ ಮಾಚದೇವ ಅಭಿವೃದ್ಧಿ ನಿಗಮ
* ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
* ಸವಿತಾ ಸಮಾಜ ಅಭಿವೃದ್ಧಿ ನಿಗಮ
* ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ
* ಒಕ್ಕಲಿಗ ಅಭಿವೃದ್ಧಿ ನಿಗಮ
ಯೋಜನೆಗೆ ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು.?
ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಮತ್ತು ಸೈಬರ್ ಸೆಂಟರ್ ಗಳಲ್ಲಿ ಭೇಟಿಯನ್ನು ನೀಡಿ. ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ಮಾತ್ರ ಮಾಡಬಹುದು.