Ganga Kalyana
ರೈತ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಯೋಜನೆಗಳ ಅನುದಾನ ಸಿಗುತ್ತದೆ. ರೈತರಿಗೆ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬರ ಪರಿಹಾರ, ಬೆಳೆ ಹಾನಿ ಪರಿಹಾರ, ಕಡಿಮೆ ಬಡ್ಡಿದರದಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ನೆರವು, ಬಿತ್ತನೆ ಬೀಜ- ರಸಗೊಬ್ಬರ ವಿತರಣೆಯಲ್ಲಿ ರಿಯಾಯಿತಿ ಸೇರಿದಂತೆ ರೈತ ಹಾಗೂ ರೈತನ ಕುಟುಂಬಕ್ಕೆ ಸಾಕಷ್ಟು ಯೋಜನೆಗಳ ಅನುಕೂಲ ಸಿಗುತ್ತಿದೆ.
ಈ ಪಟ್ಟಿಯಲ್ಲಿ ಉಳಿದ ಎಲ್ಲದ್ದಕ್ಕಿಂತ ಒಂದು ವಿಶೇಷ ಯೋಜನೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ. ಅದು ಯಾವುದೆಂದರೆ ಗಂಗಾ ಕಲ್ಯಾಣ ಯೋಜನೆ. ಗಂಗಾ ಕಲ್ಯಾಣ ಯೋಜನೆ ಮೂಲಕ ಅರ್ಹ ರೈತನ ಮಳೆ ಆಶ್ರಿತ ಭೂಮಿಗೆ ಕೊಳವೆ ಬಾವಿ ಸೌಲಭ್ಯ ಮಾಡಿಕೊಡಲಾಗುತ್ತದೆ. ಈ ಒಂದು ಸೌಲಭ್ಯ ದೊರಕಿಸಿಕೊಟ್ಟರೆ ರೈತನು ತನ್ನ ವಾರ್ಷಿಕ ಆದಾಯವನ್ನು 2 ರಿಂದ 3 ಪಟ್ಟು ಹೆಚ್ಚಿಗೆ ಮಾಡಿಕೊಳ್ಳುತ್ತೇನೆ.
ಈ ಸುದ್ದಿ ಓದಿ:- ರೈತರಿಗೆ ಇನ್ಮುಂದೆ ಪ್ರತಿ ತಿಂಗಳು 3000 ಪಿಂಚಣಿ.! ಕೇಂದ್ರ ಸರ್ಕಾರದ ಹೊಸ ಯೋಜನೆ.!
ಹಾಗಾಗಿ ಪ್ರತಿ ವರ್ಷವೂ ಈ ಯೋಜನೆಗೆ ಯಾವಾಗ ಅರ್ಜಿ ವಿತರಣೆ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಅವರಿಗೆ ಒಂದು ಸಿಹಿ ಸುದ್ದಿ ಇದೆ. ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆಯಡಿ ಈ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆ ಮೂಲಕ ಕೊಳವೆಬಾವಿ ಮತ್ತು ತೆರೆದ ಬಾವಿಯನ್ನು ರಚಿಸಲು.
ಪಂಪ್ ಸೆಟ್ಗಳನ್ನು ಮತ್ತು ಎಕ್ಸೆಸರೀಸ್ ಗಳನ್ನು ಸ್ಥಾಪಿಸಲು ಪ್ರತಿ ರೈತನಿಗೆ ಸರ್ಕಾರವು ರೂ.1.50 ಲಕ್ಷ ದಿಂದ ರೂ.3 ಲಕ್ಷದವರೆಗೆ (ಬೆಂಗಳೂರು ಅರ್ಬನ್, ಬೆಂಗಳೂರು ಗ್ರಾಮೀಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ರೂ.3.5 ಲಕ್ಷ) ಉಚಿತ ಸಹಾಯಧನವನ್ನು ನೀಡುತ್ತಿದೆ.
ಈ ಸುದ್ದಿ ಓದಿ:- ಈ ರೀತಿ ವ್ಯವಸಾಯ ಮಾಡಿದರೆ ಬೇಡ ಅಂದ್ರು ತಿಂಗಳಿಗೆ 1 ಲಕ್ಷ ಆದಾಯ ಗ್ಯಾರಂಟಿ.!
ರೈತರು ಈ ಹಣವನ್ನು ಬೋರ್ವೆಲ್ ಕೊರೆಸಲು, ಪಂಪ್ ಸರಬರಾಜು ಮತ್ತು ವಿದ್ಯುತ್ ಉಪಕರಣ ಅಳವಡಿಸಲು ಹಾಗೇ ನೀರಾವರಿ ಸೌಲಭ್ಯ ಪಡೆಯಲು ಬೇಕಾದ ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಳ್ಳಲಿ ಎನ್ನುವ ಉದ್ದೇಶದಿಂದ ನೀಡಲಾಗುತ್ತಿದೆ. ಈ ನೆರವಿನಿಂದ ರೈತನ ಬೆಳೆಗೆ ನೀರಾವರಿ ಸೌಲಭ್ಯ ದೊರೆತು ಇಳುವರಿ ಹೆಚ್ಚಾಗಿ ಆದಾಯವು ಹೆಚ್ಚಾಗಿ ರೈತನ ಬದುಕು ಹಸನಾಗುತ್ತದೆ. ಈ ಯೋಜನೆ ಪ್ರಯೋಜನ ಪಡೆಯಲು ರೈತರು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು ಇಲ್ಲಿದೆ ನೋಡಿ ಮಾಹಿತಿ.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಅರ್ಜಿದಾರ ರೈತನ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದ ರೈತರಿಗಾದರೆ ರೂ 90,000 ಹಾಗೂ ನಗರ ಪ್ರದೇಶದ ರೈತರಿಗಾದರೆ ರೂ.1.03 ಲಕ್ಷದ ಒಳಗಿರಬೇಕು
* ಅರ್ಜಿ ಸಲ್ಲಿಸುವ ರೈತನ ವಯಸ್ಸು 18 ವರ್ಷ ಮೇಲ್ಪಟ್ಟು 55 ವರ್ಷಗಳ ಒಳಗಿರಬೇಕು.
* ಕಡ್ಡಾಯವಾಗಿ ರೈತ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
* ಅರ್ಜಿದಾರನು ಸಣ್ಣ ಅಥವಾ ಅತೀ ಸಣ್ಣ ಕೃಷಿಕರಾಗಿರಬೇಕು
ಕೇಳಲಾಗುವ ದಾಖಲೆಗಳು:-
* ರೇತನ ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್
* ರೈತನ ಭೂಮಿಗೆ ಸಂಬಂಧಿಸಿದ ದಾಖಲೆಗಳು
* ಬ್ಯಾಂಕ್ ಪಾಸ್ ಬುಕ್ ನಖಲು
* ಭೂ ಕಂದಾಯ ಪಾವತಿ ರಸೀದಿ
* ಸ್ವಯಂ ಘೋಷಣಾ ಪತ್ರ
* ಇನ್ನಿತರ ಪ್ರಮಾಣ ಪತ್ರಗಳು
ಅರ್ಜಿ ಸಲ್ಲಿಸುವ ವಿಧಾನ:-
* ರೈತನು ಈ ಕೆಳಗೆ ನೀಡಿರುವ ವೆಬ್ ಸೈಟ್ ಗೆ ಭೇಟಿ ಕೊಡಬೇಕು https://kmdc.karnataka.gov.in/31/ganga-kalyana-schmeme/en
* ನಂತರ ಸ್ಕ್ರೀನ್ ಮೇಲೆ ಯೋಜನೆಯ ಪುಟ ಆಯ್ಕೆ ಮಾಡಬೇಕು
* ಕೇಳಲಾಗುವ ಎಲ್ಲಾ ಅವಶ್ಯಕ ಮಾಹಿತಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ
* ಪೂರಕ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಕೊನೆಯದಾಗಿ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಒಂದು ವೇಳೆ ಯಾವುದೇ ಗೊಂದಲಗಳಾದರೆ ಹತ್ತಿರದ ಗ್ರಾಮ ಒನ್ ಅಥವಾ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ