* Google ಸರ್ಚ್ ಬಾರ್ ನಲ್ಲಿ SIAM ಎಂದು ಟೈಪ್ ಮಾಡಿದರೆ Society of Indian Auto Mobile Manufacture ಎನ್ನುವ ಲಿಂಕ್ ಕಾಣುತ್ತದೆ, ಕ್ಲಿಕ್ ಮಾಡಿ.
* SIAM ಅಧಿಕೃತ ವೆಬ್ಸೈಟ್ ಕಾಣುತ್ತದೆ, ಸ್ಕ್ರೀನ್ ಎಡ ಭಾಗದಲ್ಲಿ Book HSRP ಎಂಬ ಆಕ್ಷನ್ ಕಾಣುತ್ತದೆ ಕ್ಲಿಕ್ ಮಾಡಿ.
* HSRP Registration ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಕೇಳಿರುವ ಡೀಟೆಲ್ಸ್ ಫಿಲ್ ಮಾಡಬೇಕು. ನಿಮ್ಮ RC Card ನಲ್ಲಿರುವಂತೆ ಹೆಸರು (Name), ಇ-ಮೇಲ್ (e-mail ID), ರಾಜ್ಯ (State), ವಾಹನ ಸಂಖ್ಯೆ (Vehicle Reg. No.), ಮೊಬೈಲ್ (Mobile No). ಜಿಲ್ಲೆ (District) ಈ ಮಾಹಿತಿಗಳನ್ನು ಭರ್ತಿ ಮಾಡಿ I Agree ಕ್ಲಿಕ್ ಮಾಡಿ Submit ಮಾಡಿ.
* Please Select Your Vehicle Brand for Booking HSRP ಎಂಬ ಇಂಟರ್ಫೇಸ್ ಓಪನ್ ಆಗುತ್ತದೆ, ಇದರಲ್ಲಿ ರಾಜ್ಯ ಮತ್ತು ಜಿಲ್ಲೆ ಆಟೋಮೆಟಿಕ್ ಫಿಲ್ ಆಗಿರುತ್ತದೆ. Select your Vehicle type ನಿಮ್ಮ ವಾಹನ ದ್ವಿಚಕ್ರವಾಹನವೇ / ತ್ರಿಚಕ್ರ ವಾಹನವೇ / ನಾಲ್ಕು ಚಕ್ರದ ವಾಹನವೇ ಅಥವಾ ಬಸ್ಸು ಟ್ರಕ್ ಯಾವುದು ಎನ್ನುವ ಆಯ್ಕೆಗಳು ಇರುತ್ತವೆ ನಿಮ್ಮ ವಾಹನ ಯಾವುದು ಅದನ್ನು ಸೆಲೆಕ್ಟ್ ಮಾಡಿ, ಎಷ್ಟು ಚಾರ್ಜಸ್ ಆಗುತ್ತದೆ ಎನ್ನುವ ಡೀಟೇಲ್ಸ್ ಇರುತ್ತದೆ ಮತ್ತು ನಿಮ್ಮ ವಾಹನ ಯಾವ ಬ್ರಾಂಡ್ ದು ಅದನ್ನು ಸೆಲೆಕ್ಟ್ ಮಾಡಿ.
* ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ High Security Registration Plate with Color Sticker ಎಂದು ಇರುತ್ತದೆ, Book ಎನ್ನುವುದನ್ನು ಕ್ಲಿಕ್ ಮಾಡಿ
* Book My HSRP ಎನ್ನುವ ಇಂಟರ್ಫೇಸ್ ಓಪನ್ ಆಗುತ್ತದೆ ಇದರಲ್ಲಿ Step 1 – Step 6 ವರೆಗೆ ಹಲವಾರು ಹಂತಗಳಿರುತ್ತವೆ ಪ್ರತಿಯೊಂದು ಹಂತದಲ್ಲಿ ಕೇಳಿರುವ ಡೀಟೇಲ್ಸ್ ಗಳನ್ನು ಫಿಲ್ ಮಾಡಬೇಕು.
Step 1 – ಯಾವ ರಾಜ್ಯ, ರಿಜಿಸ್ಟ್ರೇಷನ್ ನಂಬರ್, ಚೆಸ್ಸಿ ನಂಬರ್, ಇಂಜಿನ್ ನಂಬರ್ ಕ್ಯಾಪ್ಚ ಹಾಕಿ ಸಬ್ಮಿಟ್ ಕೊಡಿ
Step 2 – ವೆಹಿಕಲ್ ಕೆಟಗರಿ, ಕಾಂಟ್ಯಾಕ್ಟ್ ಡೀಟೇಲ್ಸ್, ಇಮೇಲ್ ಐಡಿ, ಮೊಬೈಲ್ ನಂಬರ್, ಬಿಲ್ಲಿಂಗ್ ಅಡ್ರೆಸ್ ಹಾಕಿ next ಕ್ಲಿಕ್ ಮಾಡುವ ಮೂಲಕ ಮುಂದಿನ ಹಂತಕ್ಕೆ ಹೋಗಿ
Step 3 – ಈ ಹಂತದಲ್ಲಿ ನೀವು ಹಿಂದೆ ನೀಡಿದ್ದ ಮೊಬೈಲ್ ಸಂಖ್ಯೆಗೆ OTP ಬಂದಿರುತ್ತದೆ ಅದನ್ನು ಎಂಟ್ರಿ ಮಾಡಬೇಕು.
Step 4 – ಈ ಹಂತದಲ್ಲಿ ಹೋಂ ಡೆಲಿವರಿ ಅಥವಾ ಡೀಲರ್ ಅಪಾಯಿಂಟ್ಮೆಂಟ್ ಎನ್ನುವ ಆಪ್ಷನ್ ನೀಡುತ್ತದೆ. ನೀವು ಮನೆಗೆ ಡಿಲಿವರಿ ಪಡೆದು ನೀವೇ ಅಳವಡಿಸಿಕೊಳ್ಳಲು ಇಚ್ಛಿಸುತ್ತಿರೋ ಅಥವಾ ನಿಮ್ಮ ಹತ್ತಿರದ ಡೀಲರ್ ಬಳಿ ಅಳವಡಿಸಿಕೊಳ್ಳಲು ಇಚ್ಚಿಸುತ್ತೀರೋ ಎಂಬ ನಿರ್ಧಾರದ ಮೇಲೆ ಕ್ಲಿಕ್ ಮಾಡಬೇಕು ಡೀಲರ್ ಅಪಾಯಿಂಟ್ಮೆಂಟ್ ಆಪ್ಶನ್ ಸೆಲೆಕ್ಟ್ ಮಾಡುವುದು ಉತ್ತಮ.
* ಈ ಆಪ್ಷನ್ ಸೆಲೆಕ್ಟ್ ಮಾಡಿದ ನಂತರ ನಿಮ್ಮ ರಾಜ್ಯ ಆಟೋಮೆಟಿಕ್ ಸೆಲೆಕ್ಟ್ ಆಗಿರುತ್ತೆ ನಂತರ ನಿಮ್ಮ ಜಿಲ್ಲೆ ಹಾಗೂ ಪಿನ್ ಕೋಡ್ ಹಾಕಬೇಕು ಮತ್ತು ಹತ್ತಿರ ಡೀಲರ್ ಲಿಸ್ಟ್ ಬಂದಿರುತ್ತದೆ ಇದರಲ್ಲಿ ನಿಮ್ಮ ಅನುಕೂಲತೆ ಆದುದ್ದನ್ನು ಸೆಲೆಕ್ಟ್ ಮಾಡಿ, ಪಕ್ಕದಲ್ಲಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿದರೆ ಯಾವ ದಿನಾಂಕದಂದು ಡಿಲಿವರಿ ಸಿಗುತ್ತದೆ ಎಷ್ಟು ಚಾರ್ಜಸ್ ಎಂದು ಡೀಟೇಲ್ ಪೂರ್ತಿ ಕಾಣುತ್ತದೆ Confirm Dealer ಕ್ಲಿಕ್ ಮಾಡಿ.
* Select date and time slot ಎನ್ನುವ ಆಪ್ಷನ್ ಬರುತ್ತದೆ ನೀಡಿರುವ ಡೇಟ್ ಒಪ್ಪಿಗೆ ಇದ್ದರೆ ನಿಮಗೆ ಅನುಕೂಲಕರವಾದ ಸಮಯವನ್ನು ಸೆಲೆಕ್ಟ್ ಮಾಡಿ ಮುಂದುವರೆಯಿರಿ ಅಥವಾ ದಿನಾಂಕ ಹಾಗೂ ಸಮಯವನ್ನು ಬದಲಾಯಿಸುವುದಾದರೆ ಇರುವ ಆಯ್ಕೆ ನೋಡಿ ಬದಲಾಯಿಸಿಕೊಂಡು Confirm and Proceed ಕ್ಲಿಕ್ ಮಾಡಿ Booking Summary ಕಾಣಬಹುದು.
* ಇದಾದ ನಂತರ Verify Details and Pay ಎಂಬ ಆಪ್ಷನ್ ಇರುತ್ತದೆ, ಎಲ್ಲವನ್ನು ನೋಡಿ I agree the terms and Conditions ಮೇಲೆ ಕ್ಲಿಕ್ ಮಾಡಿ Pay Online ಆಪ್ಷನ್ ಕ್ಲಿಕ್ ಮಾಡಿ. ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ನಿಮಗೆ ಸೂಚಿಸಿರುವ ಶುಲ್ಕವನ್ನು ಪಾವತಿ ಮಾಡಿ ತಪ್ಪದೆ ರಶೀದಿ ಪ್ರಿಂಟ್ ಪಡೆಯಿರಿ ಮತ್ತು ಅರ್ಜಿ ಸಲ್ಲಿಸಿರುವ ಪ್ರತಿಯನ್ನು ಕೂಡ ಪ್ರಿಂಟ್ ಪಡೆಯಿರಿ. ನೀವು ಸೆಲೆಕ್ಟ್ ಮಾಡಿದ ದಿನದಂದು ಆ ಡೀಲರ್ ಬಳಿ ಹೋಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ