GI Wire Fencing
ರಾಜ್ಯದ ರೈತ(farmer)ರಿಗೆ ಸರ್ಕಾರವು ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ನಿಮ್ಮ ಜಮೀನಿನಲ್ಲಿರುವ ಕೃಷಿ ಹೊಂಡ(Krishi Honda)ಗಳಿಗೆ ತಂತಿ ಬೇಲಿ (wire fence) ಅಳವಡಿಸಲು ಸೂಚಿಸಲಾಗಿದ್ದು, ಅದಕ್ಕೆ ಶೇ. 50ರವರೆಗೆ ಸಬ್ಸಿಡಿ(Subsidy) ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿ:-Post Office Scheme: ಕೇವಲ 500 ರೂ. ಹೂಡಿಕೆ ಮಾಡಿ ಸಾಕು 4 ಲಕ್ಷ ಸಿಗುತ್ತೆ.!
ಹೌದು, ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಅವರು ವಿಧಾನ ಪರಿಷತ್ ಆಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಎಸ್. ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ್ದು, ತಂತಿ ಬೇಲಿ ಅಳವಡಿಸಲು ಸರ್ಕಾರದಿಂದ ಶೇ.40 ರಿಂದ ಶೇ. 50ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ 6,601 ಕೃಷಿ ಹೊಂಡಗಳನ್ನು ನಿರ್ಮಿಸಲು ರೂ.2,332.75 ಲಕ್ಷ ವೆಚ್ಚ ಭರಿಸಲಾಗಿದೆ. ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ ಹಾಗೂ ಇತರೆ ಉಪಚಾರಗಳು ಯೋಜನೆಯಡಿ ರೂ. 1297.82 ಲಕ್ಷಗಳ ವೆಚ್ಚದಲ್ಲಿ 3,768 ಕೃಷಿ ಹೊಂಡಗಳು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರೂ. 18874.96 ಲಕ್ಷಗಳ ವೆಚ್ಚದಲ್ಲಿ 23,317 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದೆ ಎಂದರು.
ಈ ಸುದ್ದಿ ಓದಿ:- Gruha Jyothi Scheme: ಗೃಹಜ್ಯೋತಿ ಫಲಾನುಭವಿಗಳಿಗೆ ಬೆಳ್ಳಂ ಬೆಳಗ್ಗೆ ಬಿಗ್ ಶಾಕದ ನೀಡಿದ ರಾಜ್ಯ ಸರ್ಕಾರ.!
ಕೃಷಿ ಇಲಾಖೆಯ 2023-24ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಅನುμÁ್ಠನ ಮಾರ್ಗ ಸೂಚಿಯನ್ವಯ ರೈತರು ಸ್ವತಃ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬಹುದಾಗಿದ್ದು, ಯಾವುದೇ ಬಾಹ್ಯ ಸಂಸ್ಥೆಗಳಿಂದ ಕೃಷಿ ಹೊಂಡ ನಿರ್ಮಿಸಲು ಅವಕಾಶವಿರುವುದಿಲ್ಲ. ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಸಹಾಯ ಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದರು.
ಏನಿದು ಕೃಷಿ ಹೊಂಡ ಯೋಜನೆ?
ಮಳೆಯ ನೀರು ಪೋಲಾಗುವುದನ್ನ ತಡೆದು ಅವಶ್ಯ ಬಿದ್ದಾಗ ಬಿತ್ತನೆ ಮಾಡಿದ ಬೆಳೆಗಳಿಗೆ ಹರಿಸಲು ಸಂಗ್ರಹಿಸಿಡುವುದಕ್ಕೆ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೌದು, 2023-24ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ಪಡೆಬಹುದು.
ಯಾವ ಯಾವ ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ನೀಡಲಾಗುವುದು?
ರೈತರ ಜಮೀನುಗಳಲ್ಲಿ ಮಳೆ ನೀರು ಪೋಲಾಗುವುದನ್ನು ತಡೆಯುವುದಕ್ಕಾಗಿ ವಿವಿಧ ಅಳತೆಗೆ ಸಬ್ಸಿಡಿ ನೀಡಲಾಗುವುದು. ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ ವಿವಿಧ ಅಳತೆಯ 10x10x3 ಮೀಟರ್, 12x12x3 ಮೀಟರ್, 15x15x3 ಮೀಟರ್, 21x21x3 ಮೀಟರ್ ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ನೀಡಲಾಗುವುದು.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡದಿಂದ ಎತ್ತಲು ಪಂಪ್ ಸೆಟ್, ಕೃಷಿ ಹೊಂಡ ಸುತ್ತಲೂ ತಂತಿ ಬೇಲಿ (GI Wire Fencing ) ಮಾಡಲು ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ. ಹೌದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದು ಸರಿಯಾಗಿ ಭರ್ತಿ ಮಾಡಬೇಕು.
ರೈತರ ಭಾವಚಿತ್ರ ಸಲ್ಲಿಸಬೇಕು ಎಫ್ಐಡಿ ಸಲ್ಲಿಸಬೇಕು ಒಂದು ವೇಳೆ ರೈತರ ಬಳಿ ಎಫ್ಐಡಿ ಇಲ್ಲವಾದಲ್ಲಿ ಆಧಾರ್ ಪ್ರತಿ ಸಲ್ಲಿಸಬೇಕು ರೈತರು ಪಹಣಿ ಪ್ರತಿ ಸಲ್ಲಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ರೈತರ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ ಸಲ್ಲಿಸಬೇಕು.