Gomala ಗೋಮಾಳ ಜಮೀನು ಸಕ್ರಮ ಮಾಡಿಕೊಳ್ಳುವ ಸುಲಭ ವಿಧಾನ.!

Gomala

ಸರ್ಕಾರ ಈಗ ರೈತರಿಗೆ ಜಮೀನು ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದೆ ಜಮೀನು ಇಲ್ಲದ ರೈತ ಕಾರ್ಮಿಕರು ಜೀವನೋಪಾಯಕ್ಕಾಗಿ ಗೋಮಾಳಗಳನ್ನು ಅಕ್ರಮವಾಗಿ ಉಳಿಮೆ ಮಾಡುತ್ತಿರುತ್ತಾರೆ. ಆ ಎಲ್ಲರಿಗೂ ಕೂಡ ಸಕ್ರಮವಾಗುತ್ತದೆಯೇ? ಸರ್ಕಾರದ ನಿಯಮದ ಪ್ರಕಾರ ಒಂದು ಗ್ರಾಮಕ್ಕೆ ಗೋಮಾಳ ಎಷ್ಟಿರಬೇಕು ಮತ್ತು ಅಕ್ರಮ ಸಕ್ರಮ ಮಾಡಿಕೊಳ್ಳಲು ಇರುವ ನಿಬಂಧನೆಗಳೇನು ಎನ್ನುವ ಮುಖ್ಯ ವಿಷಯಗಳು ಪ್ರತಿಯೊಬ್ಬ ರೈತನಿಗೂ ತಿಳಿದಿರಬೇಕು.

ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತಂತೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ದನಕರುಗಳಿಗೆ ಮೇಯಲು ಮೀಸಲಿಟ್ಟಿರುವ ಸರಕಾರದ ಭೂಮಿಯನ್ನು ಗೋಮಾಳ ಎಂದು ಕರೆಯಬಹುದು, ಹಾಗೂ ಗ್ರಾಮದಲ್ಲಿರುವ ಅನುಪಯುಕ್ತ ಭೂಮಿಯು ಕೂಡ ಇದೇ ರೀತಿ ಸರ್ಕಾರದ ಭೂಮಿ ಎನಿಸಿಕೊಳ್ಳುತ್ತದೆ. ಭೂ ಕಂದಾಯ 1966 ನಿಯಮ 97(1) ಹೇಳುವ ಪ್ರಕಾರ ಗ್ರಾಮಗಳಲ್ಲಿ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗೋಮಾಳ, ಗೈರಾಣಿ, ಹುಲ್ಲು ಬನ್ನಿ ಪ್ರದೇಶವನ್ನು ಮೀಸಲಿಡಬೇಕು.

WhatsApp Group Join Now
Telegram Group Join Now

ಇದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಜಮೀನು ಆ ಗ್ರಾಮಕ್ಕೆ ಇದ್ದರೆ ಮಾತ್ರ ಅಂತಹ ಸಂದರ್ಭದಲ್ಲಿ ಭೂರಹಿತ ಕೃಷಿ ಕಾರ್ಮಿಕರು, ಭೂಮಿ ಇಲ್ಲದೆ ಕೃಷಿ ಕಾರ್ಯಕ್ಕಾಗಿ ಗೋಮಾಳ ಅವಲಂಬಿಸಿರುವ ರೈತರು ಇಂತಹ ಗೈರಾಣಿ, ಹುಲ್ಲು ಬನ್ನಿ, ಗೋಮಾಳ ಪ್ರದೇಶವನ್ನು ಅಕ್ರಮವಾಗಿ ತಮ್ಮ ಬಳಕೆಗೆ ಬಳಸಿಕೊಂಡರೆ ಅವರ ಪೂರ್ವಾಪರಗಳ ಬಗ್ಗೆ ವಿಚಾರ ನಡೆಸಿ ನಂತರ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಇದಕ್ಕಾಗಿ ಪ್ರತ್ಯೇಕ ಕಾನೂನು ಕೂಡ ಇದ್ದು ಭೂ ಮಂಜುರಾತಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 94ಎ, ಬಿ, ಸಿ ಪ್ರಕಾರ ಅನಧಿಕೃತ ಸಾಗುವಳಿ ಮಾಡುತ್ತಿರುವವರಿಗೆ ಸಕ್ರಮ ಮಾಡಿಕೊಳ್ಳಲು ಅವಕಾಶ ಇದೆ ಎಂದು 2006 ನವೆಂಬರ್ 18ರಂದು ಕರ್ನಾಟಕ ಹೈ ಕೋರ್ಟ್ ಆದೇಶ ನೀಡಿದೆ.

ಈ ವಿಚಾರವಾಗಿ ಕೆಲವು ಮುಖ್ಯ ಅಂಶಗಳು:-

* 1996ರ ನಿಯಮ 1997(1) ರ ಪ್ರಕಾರ ಗೋಮಾಳ ಇದೆಯೇ ಎಂದು ಪರಿಶೀಲಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಹೆಗಲಿಗೆ ವಹಿಸಲಾಗಿದೆ. ಈ ಮೇಲೆ ತಿಳಿಸಿದಂತೆ ಗ್ರಾಮಗಳಲ್ಲಿ ಗೋಮಾಳ ಹೆಚ್ಚಿದ್ದರೆ ಮಾತ್ರ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ
* ಈ ರೀತಿ ಗೋಮಾಳದ ಜಮೀನನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ಅಥವಾ ಗಣಿಗಾರಿಕೆಗೆ ಮಂಜೂರು ಮಾಡಬಾರದು ಎನ್ನುವುದು ಕಂದಾಯ ಇಲಾಖೆಯ ಆದೇಶದಲ್ಲಿದೆ
* 2008ರ ತಿದ್ದುಪಡಿ ಕಾಲಂ 11ರ ಪ್ರಕಾರ ಸ್ವಂತ ಜಮೀನು ಹೊಂದಿರುವವರು ಈ ರೀತಿ ಗೋಮಾಳ ಆಕ್ರಮಿಸಿಕೊಂಡು ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ

ಗೋಮಾಳ ಭೂಮಿಯ ಉಪಯೋಗಗಳು:-

* ಇದು ಸರ್ಕಾರದ ಭೂಮಿಯಾಗಿರುವುದರಿಂದ ಸಾರ್ವಜನಿಕ ಉಪಯೋಗಗಳಿಗೆ ಮಾತ್ರ ಬಳಸಬಹುದು,
* ಹೊಸದಾಗಿ ಕಂದಾಯ ಗ್ರಾಮಗಳನ್ನು ಸೃಷ್ಟಿಸಲು ಬಳಸಿಕೊಳ್ಳಬಹುದು
ಕಂದಾಯ ಕಾಯ್ದೆ 94 ಎ, ಬಿ ಮತ್ತು ಸಿ ಪ್ರಕಾರ ಅನಧಿಕೃತ ಸಾಗುವಳಿ ಮಾಡುವವರು ಸಕ್ರಮ ಮಾಡಿಕೊಳ್ಳಲು ಇರುವ ನಿಬಂಧನೆಗಳು:-

* ಈ ಮೇಲೆ ತಿಳಿಸಿದಂತೆ ಸ್ಥಳೀಯವಾಗಿ ಸಾಕಷ್ಟು ಗೋಮಾಳ ಭೂಮಿ ಲಭ್ಯವಿದ್ದರೆ ಮಾತ್ರ ಅವಕಾಶ
* ಅನುಕೂಲ ಇರುವ ವ್ಯಕ್ತಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಸಕ್ರಮ ಮಾಡಲು ಅವಕಾಶವಿಲ್ಲ
* ಈಗಾಗಲೇ ಸ್ವಂತ ಜಮೀನು ಇದ್ದರೆ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ

* ಹಲವು ವರ್ಷಗಳಿಂದ ಅವರು ತಮ್ಮ ಜೀವನಕ್ಕಾಗಿ ಗೋಮಾಳ ಭೂಮಿಯನ್ನೇ ಅವಲಂಬಿಸಿರಬೇಕು, ಸದರಿ ಜಮೀನಿನ ಅನುಭೋಗದಲ್ಲಿರಬೇಕು
* ಈ ರೀತಿ ಅಕ್ರಮ ಸಕ್ರಮದಿಂದ ಪಡೆದ ಜಮೀನನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಪರಭಾರೆ ಮಾಡುವಂತಿಲ್ಲ
* ಕೃಷಿಯೇತರವಾಗಿ ಬೇರೆ ಯಾವುದೇ ಕಾರ್ಯಗಳಿಗೂ ಬಳಸುವಂತಿಲ್ಲ

* ಗೋಮಾಳ ಭೂಮಿಯ ಲಭ್ಯತೆ ಒಣಭೂಮಿ ಅಥವಾ ಸಾಧಾರಣ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಈ ರೀತಿ ವರ್ಗಗಳ ಅರ್ಜಿಗಳು ಇವುಗಳ ಆಧಾರದ ಮೇಲೆ ಜಮೀನನ್ನು ಹಂಚಿಕೆ ಮಾಡಲಾಗುತ್ತದೆ
* ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಯ ಭೂ ನ್ಯಾಯ ಮಂಡಳಿ ವಿಭಾಗವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment