Sip: ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! 1000 ರೂ ಹೂಡಿಕೆ ಮಾಡಿ 2 ಲಕ್ಷ ಆದಾಯ ಗಳಿಸಿ.!

Sip

ಮೊದಲೆಲ್ಲಾ ಜನರು ತಮ್ಮ ಹಣವನ್ನು ಬ್ಯಾಂಕ್‌ನಲ್ಲಿಟ್ಟು, ಆ ಹಣಕ್ಕೆ ಬರುವ ಬಡ್ಡಿಯನ್ನು ಪಡೆದುಕೊಳ್ಳುತ್ತಿದ್ದರು. ಆದ್ರೆ, ಇತ್ತೀಚೆಗೆ ಅಂಥಹವರ ಸಂಖ್ಯೆ ತಗ್ಗಿದೆ. ಈಗೆಲ್ಲಾ ಹೆಚ್ಚಾಗಿ ಜನ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಷೇರ್‌ ಮಾರ್ಕೇಟ್‌, ಪೋಸ್ಟ್‌ ಆಫೀಸ್‌ಗಳಲ್ಲಿ ಹಣವನ್ನ ಹೂಡಿಕೆ ಮಾಡುತ್ತಿದ್ದಾರೆ.

ವ್ಯವಸ್ಥಿತ ಹೂಡಿಕೆ ಯೋಜನೆಗಳು (systematic investment plan – SIP) ಮ್ಯೂಚುವಲ್ ಫಂಡ್‌ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಮತ್ತು ಆಕರ್ಷಕ ಬಡ್ಡಿದರದೊಂದಿಗೆ ದೀರ್ಘಕಾಲದಲ್ಲಿ ಹಣ ಡಬಲ್ ಮಾಡಲು ಬಳಸುವ ರಚನಾತ್ಮಕ ಟೆಕ್ನಿಕ್ ಆಗಿದೆ. ಇದರಲ್ಲಿ ಎಸ್ಐಪಿ ಯಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯಲ್ಲೇ ಅಥವಾ ದೇಶದ ಆರ್ಥಿಕ ಸ್ಥಿತಿಯಲ್ಲಿ ಏನೇ ಏರಿಳಿತ ಕಂಡುಬಂದರು ಅದನ್ನು ಲೆಕ್ಕಿಸದೆ, ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ಘಟಕಗಳನ್ನು (uinits) ಸ್ಥಿರವಾಗಿ ಖರೀದಿಸಲು ಅವಕಾಶ ಮಾಡಿಕೊಡುತ್ತದೆ.

WhatsApp Group Join Now
Telegram Group Join Now

SIP ಹೂಡಿಕೆಯನ್ನು, ಹೂಡಿಕೆದಾರರು ಸಣ್ಣ ಮೊತ್ತದಿಂದ ಪ್ರಾರಂಭಿಸಬಹುದಾಗಿದ್ದು, ಕ್ರಮೇಣ ಹಣದ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಡಿಕೆದಾರರು ಅವರ ಹೂಡಿಕೆಯ ಕೊಡುಗೆಯನ್ನು ಹೆಚ್ಚಿಸಿಸಬಹುದಾಗಿದೆ. ಹೂಡಿಕೆದಾರರು ಮಾಸಿಕ, ತ್ರೈಮಾಸಿಕದಂತಹ ಆವರ್ತನಗಳನ್ನು ಆಯ್ಕೆ ಮಾಡಬಹುದಾಗಿದೆ.

ಈ ಸುದ್ದಿ ಓದಿ:- Post Office Scheme: ಕೇವಲ 500 ರೂ. ಹೂಡಿಕೆ ಮಾಡಿ ಸಾಕು 4 ಲಕ್ಷ ಸಿಗುತ್ತೆ.!

ಇಂದಿನ ಈ ಲೇಖನದಲ್ಲಿ ಕೆನರಾ ಬ್ಯಾಂಕ್ ನ ಜನಪ್ರಿಯ ಕೆನರಾ ರೊಬೆಕೊ ಬ್ಲೂಚಿಪ್ ಇಕ್ವಿಟಿ ಫಂಡ್(Canara Robeco Bluechip Equity Fund) ಸಂಬಂಧಿತ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. ನೀವೆನಾದರು ಕೆನರಾ ಬ್ಯಾಂಕಿ(Canara Bank)ನಲ್ಲಿ SIP ಮಾಡಲು ಆಸಕ್ತರಿದ್ದಾರೆ ತಪ್ಪದೆ ಲೇಖನವನ್ನು ಪೂರ್ತಿಯಾಗಿ ಓದಿರಿ.‌ ನಿಮಗೇನಾದ್ರೂ ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬೇಕು ಅನ್ಕೊಂಡಿದ್ರೆ, ಇದು ಬೆಸ್ಟ್‌ ಪ್ಲ್ಯಾನ್‌ ಆಗಿದೆ.

ಕೆನರಾ ರೊಬೆಕೊ ಬ್ಲೂಚಿಪ್ ಇಕ್ವಿಟಿ ಫಂಡ್ ಎಸ್ಐಪಿ

ಕೆನರಾ ರೊಬೆಕೊ ಬ್ಲೂಚಿಪ್ ಇಕ್ವಿಟಿ ಫಂಡ್ ಇಕ್ವಿಟಿ-ಆಧಾರಿತ ಮ್ಯೂಚುಯಲ್ ಫಂಡ್ ಆಗಿದ್ದು ಹೂಡಿಕೆದಾರ ದೀರ್ಘಕಾಲದಲ್ಲಿ ಬಂಡವಾಳ ಮೌಲ್ಯವನ್ನು ಹೆಚ್ಚಿಸಿ ಉತ್ತಮ ಉಳಿತಾಯವನ್ನು ನೀಡುತ್ತದೆ.

ಎಸ್ಐಪಿ ಪ್ರಾಂಭಿಸುವ ಹಂತಗಳು

– ಮೊದಲು ಹೂಡಿಕೆ ಖಾತೆಯನ್ನು ತೆರೆಯಲು ಕೆನರಾ ಬ್ಯಾಂಕ್ ಶಾಖೆ ಅಥವಾ ಕೆನರಾ ರೊಬೆಕೊ ಮ್ಯೂಚುಯಲ್ ಫಂಡ್ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ ಮಾಸಿಕ ಹೂಡಿಕೆ ಮೊತ್ತವನ್ನು (ಉದಾ. ರೂ. 1,000) ಮತ್ತು ಅವಧಿಯನ್ನು (ಉದಾ. 10 ವರ್ಷಗಳು) ಆಯ್ಕೆ ಮಾಡಬೇಕು.
– ಅಗತ್ಯ ದಾಖಲೆಗಳನ್ನು ಒದಗಿಸಿ
– ನಿಮ್ಮ ಹೂಡಿಕೆಗಳನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಖಾತೆಯ ಸ್ವಯಂ-ಡೆಬಿಟ್ ಅನ್ನು ದೃಢೀಕರಿಸಕೊಳ್ಳಬೇಕು
SIP ಹೂಡಿಕೆಯ ಲಾಭವನ್ನು ಉದಾಹರಣೆಯ ಮೂಲಕ ತಿಳಿಯೋಣ ಬನ್ನಿ.

ಲಾಭದ ಲೆಕ್ಕಾಚಾರ

ನಾವು ಮಾಸಿಕವಾಗಿ ನಿಗದಿತ ಮೊತ್ತ 1,000 ರೂ ಅನ್ನು ನಿಯಮಿತವಾಗಿ 10 ವರ್ಷಗಳ (120 ತಿಂಗಳು) ಕಾಲ ಮಾಡಿದರೆ 10 ವರ್ಷದ ಬಳಿಕ ನಮ್ಮ ಒಟ್ಟು ಹೂಡಿಕೆಯ ಮೊತ್ತವು 1,20,000 ಆಗುತ್ತದೆ. ಈವಾಗ SIP ಯ ಸರಾಸರಿ ವಾರ್ಷಿಕ ಆದಾಯವು 12% ಅಂತ ಊಹಿಸಿದರೆ, ನಮ್ಮ ಹೂಡಿಕೆಯ ಮೌಲ್ಯವು ಹೆಚ್ಚಾಗಿ ಭವಿಷ್ಯದಲ್ಲಿ 10 ವರ್ಷಗಳ ಕೊನೆಯಲ್ಲಿ 2,32,000 ರೂ. ಆಗಲಿದೆ. ಹನಿ ಹನಿ ಸೇರಿದರೆ ಹಳ್ಳ ಅನ್ನುವ ಗಾದೆ ಮಾತಿದೆ.

ಈ ಸುದ್ದಿ ಓದಿ:- Bank Loan: ಕೋಳಿ ಸಾಕಾಣಿಕೆ ಮಾಡುವವರಿಗೆ SBI ಬ್ಯಾಂಕ್ ನಿಂದ ಸಿಗಲಿದೆ 9 ಲಕ್ಷ ಸಾಲ.!

ಅಂದ ಹಾಗೆ ನಾವು ಮಾಸಿಕವಾಗಿ ನಿಗದಿತ ಸಣ್ಣ ಮೊತ್ತದೊಂದಿಗೆ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ದೀರ್ಘಕಾಲದಲ್ಲಿ ಹೂಡಿಕೆ ಮಾಡಿದ ಹಣದ ಮೌಲ್ಯ ಹೆಚ್ಚಾಗಿ, ಲಾಭದಾಯಕ ಗಳಿಕೆಯನ್ನು ತಂದು ಕೊಡುತ್ತದೆ. ಇಂತಹ ಅವಕಾಶವನ್ನ ಸದುಪಯೋಗ ಪಡಿಸಿಕೊಂಡರೆ ಮುಂಬರುವ ದಿನಗಳಲ್ಲಿ ಒಳ್ಳೆಯ ಲಾಭ ನಿಮ್ಮ ಕೈ ಸೇರುವುದು ಖಚಿತ.!

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment