Canada Bank
ಈಗ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಅನಿವಾರ್ಯವಾಗಿದೆ ಒಂದಾದರೂ ಉಳಿತಾಯ ಖಾತೆ (Saving account) ಹೊಂದಿರುವುದು ಆಧಾರ್ ಕಾರ್ಡ್ ನಷ್ಟೇ ಅವಶ್ಯಕತೆಯಾಗಿದೆ. ಹೀಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಣ ಖಾತೆಗೆ ಜಮೆ ಮಾಡುವುದು ಅಥವಾ ಅವಶ್ಯಕತೆ ಇದ್ದಾಗ ಹಣ ಹಿಂಪಡೆಯುವುದು ಮಾತ್ರವಲ್ಲದೆ ಬ್ಯಾಂಕ್ ನಿಂದ ಇನ್ನಷ್ಟು ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು.
ಬ್ಯಾಂಕ್ ನಮ್ಮ ಹಣವನ್ನು ರಕ್ಷಿಸುವುದು ಅಥವಾ ನಮಗೆ ಹಣದ ಅವಶ್ಯಕತೆ ಇದ್ದಾಗ ವಿವಿಧ ತೆರನಾಗಿ ಅವಶ್ಯಕತೆ ಆಧಾರದ ಮೇಲೆ ಸಾಲ ನೀಡುವುದು ಮಾತ್ರವಲ್ಲದೆ ನಮ್ಮ ಹಣವನ್ನು ಹೆಚ್ಚಿಸುವ ಹಲವು ಯೋಜನೆಗಳನ್ನು ಕೂಡ ಹೊಂದಿದೆ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರಬೇಕು.
ಹೌದು, ನಾವು ನಮ್ಮ ಉಳಿತಾಯ ಖಾತೆಯಲ್ಲಿ ಹಣ ಉಳಿತಾಯ ಮಾಡಿರುವುದನ್ನು ಬ್ಯಾಂಕ್ ನ ಇನ್ನಿತರ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರತಿಯೊಂದು ಬ್ಯಾಂಕ್ ಕೂಡ ಕೆಲವು ಸಾಮಾನ್ಯ ಯೋಜನೆಗಳು ಹಾಗೂ ತಮ್ಮದೇ ಆದ ವಿಶೇಷ ಯೋಜನೆಗಳನ್ನು ಹೊಂದಿರುತ್ತವೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ನಲ್ಲಿ (Canara Bank) ಈ ವರ್ಷ ಖಾತೆ ಹೊಂದಿರುವವರಿಗೆ ಒಂದು ವಿಶೇಷ ಯೋಜನೆಯ ಅನುಕೂಲತೆ ಸಿಗುತ್ತಿದೆ.
ಈ ಸುದ್ದಿ ಓದಿ:- IBPS:- ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 896 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ನೇಮಕಾತಿ, ಕಂಪ್ಲೀಟ್ ಡೀಟೇಲ್ಸ್ ಹೀಗಿದೆ ನೋಡಿ…
ಅದು ಇತರರಿಗಿಂತಲೂ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಹೆಚ್ಚಿನ ಲಾಭ ನೀಡುತ್ತಿದೆ ಎನ್ನುವುದೇ ವಿಶೇಷ. ಹಾಗಾದರೆ ಯಾವುದು ಈ ಯೋಜನೆ? ಇದರ ಲಾಭವನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
ನಾವು ಉಳಿದ ಖಾತೆಯಲ್ಲಿ ನಮ್ಮ ಅವಶ್ಯಕತೆಗಿಂತ ಹೆಚ್ಚಿನ ಹಣವನ್ನು ಹೊಂದಿದ್ದಾಗ ಅದನ್ನು ಹಾಗೆ ಬಿಟ್ಟರೆ ಕಡಿಮೆ ಮೊತ್ತದ ಬಡ್ಡಿದರ ಸಿಗುತ್ತದೆ. ಹಾಗಾಗಿ ಇದನ್ನು ಒಂದು ನಿಗದಿತ ಸಮಯದವರೆಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡುವುದು ಬೆಸ್ಟ್. ಈಗ ಬ್ಯಾಂಕ್ ಗಳಲ್ಲಿ 180 ದಿನಗಳಿಂದ 10 ವರ್ಷದವರೆಗೆ ಡೆಪಾಸಿಟ್ ಮಾಡುವ ಅವಕಾಶ ಸಿಗುತ್ತಿದೆ ಮತ್ತು ಇದರಲ್ಲಿ ಅವಧಿಗೆ ಅನುಗುಣವಾಗಿ ಬಡ್ಡಿ ದರ (Interest depends on time period) ನಿರ್ಧಾರವಾಗುತ್ತದೆ.
ಈ ಬಡ್ಡಿ ದರವು ಒಂದು ಬ್ಯಾಂಕ್ ಗಿಂತ ಮತ್ತೊಂದು ಬ್ಯಾಂಕಿಗೆ ವ್ಯತ್ಯಾಸವಿರುತ್ತದೆ ಹಾಗೂ ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕರಿಗೆ 0.50% ಹೆಚ್ಚು ಬಡ್ಡಿದರ ಸಿಗುತ್ತದೆ. ಹೀಗೆ ನೀವು ಈ ಸಮಯದಲ್ಲಿ ಏನಾದರೂ ನಿಮ್ಮ ಉಳಿತಾಯ ಖಾತೆಯಲ್ಲಿರುವ ಹಣವನ್ನು F.D ಇಡುವ ಬಗ್ಗೆ ಯೋಚಿಸುತ್ತಿದ್ದರೆ ಒಂದು ವರ್ಷದ ಬದಲಾಗಿ 440 ದಿನಗಳ ವರೆಗೆ ಇರುವ ಕೆನರಾ ಬ್ಯಾಂಕ್ ನ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯುತ್ತೀರಿ.
ಈ ಸುದ್ದಿ ಓದಿ:- Agricultural implements: ಕೃಷಿ ಉಪಕರಣಗಳ ಯಂತ್ರ ಖರೀದಿಗೆ ಸರ್ಕಾರದಿಂದ ಸಹಾಯಧನ.!
ಯಾಕೆಂದರೆ ಈ ಸಮಯದಲ್ಲಿ ಕೆನರಾ ಬ್ಯಾಂಕ್ ರೂ.3 ಲಕ್ಷ ಹಣವನ್ನು ಈ ಯೋಜನೆಯಲ್ಲಿ 444 ದಿನಗಳಿಗೆ ಹೂಡಿಕೆ ಮಾಡಿದರೆ 7.25% ಬಡ್ಡಿದರದ ಕೊಡುಗೆ ನೀಡುತ್ತಿದೆ. 444 ದಿನಗಳ ನಂತರ ನೀವು ಹಿಂಪಡೆಯುವ ಮೊತ್ತ ರೂ.3,27,000 ಆಗಿರುತ್ತದೆ. ಒಂದು ವೇಳೆ ನೀವು ಹಿರಿಯ ನಾಗರಿಕರಾಗಿದ್ದರೆ ಈ ಮೇಲೆ ತಿಳಿಸಿದಂತೆ ಹೆಚ್ಚುವರಿ ಆಗಿ 0.50% ಅಂದರೆ 7.75% ಅನುಗುಣವಾಗಿ 444 ದಿನಗಳಾದ ನಂತರ ನಿಮ್ಮ ರೂ. 3 ಲಕ್ಷ ಹೂಡಿಕೆಗೆ ರೂ.3,29,000 ಹಣವನ್ನು ಹಿಂಪಡೆಯುತ್ತಿದ್ದೀರಿ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ.