Farmers
ರೈತರಿಗಾಗಿ (Farmers) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವಾರು ಯೋಜನೆಗಳನ್ನು ಜಾರಿಯಾಗಿವೆ ಮತ್ತು ಪ್ರತಿ ಬಜೆಟ್ ನಲ್ಲೂ ಕೂಡ ರೈತರಿಗಾಗಿಯೇ ಕೆಲ ಮೊತ್ತದ ಹಣವು ನಿಗದಿಯಾಗಿರುತ್ತದೆ. ಅಂತೆಯೇ ರಾಜ್ಯ ಸರ್ಕಾರವು ಮತ್ತೊಂದು ಪ್ರಯತ್ನವನ್ನು ಮಾಡಿದ್ದು ರಾಜ್ಯದಲ್ಲಿ ಸಾವಯವ ಮತ್ತು ರಾಗಿ ಕೃಷಿಯನ್ನು (Ragi Crop) ಉತ್ತೇಜಿಸಲು ಹಾಗೂ ಯುವ ರೈತರನ್ನು ಕೃಷಿಯತ್ತ ಆಕರ್ಷಿಸಲು ರೈತ ಸಿರಿ (Raitha Siri) ಯೋಜನೆಯನ್ನು ಪ್ರಾರಂಭಿಸಿದೆ.
ಈ ಸುದ್ದಿ ಓದಿ:- ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
ಈ ಹಿಂದೆಯೂ ಕೂಡ ರಾಜ್ಯದಲ್ಲಿ ಈ ಯೋಜನೆ ಜಾರಿಯಲ್ಲಿತ್ತು ಕೃಷಿ ಉತ್ಪಾದಕರಿಗೆ ಆರ್ಥಿಕ ನೆರವು ನೀಡುವಂತ ಯೋಜನೆಯಾಗಿದ್ದು, 2024 ರಿಂದ ಮತ್ತೆ ಜಾರಿ ಪುನರಾರಂಭಿಸಲಾಗಿದೆ. 2019-20 ರ ಸಾಲಿನ ಬಜೆಟ್ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರೈತ ಸಿರಿ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯ ಮುಖ್ಯ ಉದ್ದೇಶವು ರಾಗಿ ಉತ್ಪಾದಿಸುವ ರೈತನಿಗೆ ಪ್ರತಿ ಎಕರೆಗೆ 10,000 ರೂಪಾಯಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು ಎನ್ನುವುದಾಗಿತ್ತು.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!
ಬಹಳ ಹೈ ಬಜೆಟ್ ಯೋಜನೆ ಇದಾಗಿತ್ತು ಈಗ ಮತ್ತೊಮ್ಮೆ ರಾಜ್ಯ ಸರ್ಕಾರವು ರೈತ ಸಿರಿ ಯೋಜನೆ ಬಗ್ಗೆ ಪ್ರಸ್ತಾಪಿಸಿರುವುದರಿಂದ ಯಾವ ರೈತರು ಇದರ ಪ್ರಯೋಜನ ಪಡೆಯಬಹುದು. ಇದರ ಅರ್ಹತಮಾನದಂಡಗಳು ಏನು? ಇದಕ್ಕಾಗಿ ರೈತರು ನೋಂದಾಯಿಸಿಕೊಳ್ಳುವುದು ಹೇಗೆ? ಎನ್ನುವ ಕೆಲವು ಪ್ರಮುಖ ಸಂಗತಿಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಕರ್ನಾಟಕದ ಪ್ರತಿಯೊಬ್ಬ ರೈತನಿಗೂ ತಲುಪುವಂತೆ ಈ ಮಾಹಿತಿಯನ್ನು ಶೇರ್ ಮಾಡಿ.
ರೈತ ಸಿರಿ ಯೋಜನೆಯ ಉದ್ದೇಶ:-
* ಕರ್ನಾಟಕ ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವುದು
* ನಮ್ಮ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು
* ರಾಜ್ಯದ ರೈತರಿಗೆ ಆರ್ಥಿಕ ನೆರವು ನೀಡಬೇಕು ಎನ್ನುವುದು
* ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ರೂ.10,000 ನೀಡಬೇಕು ಎನ್ನುವುದು
* ರಾಜ್ಯದ ಒಣಭೂಮಿಯಲ್ಲಿ ನೀರನ್ನು ಪುನಃಸ್ಥಾಪಿಸಲು ಕೃಷಿ ಹೊಂಡಗಳನ್ನು ನಿರ್ಮಿಸುವುದು.
ಅರ್ಹತೆಯ ಮಾನದಂಡ:
* ಇದು ಕರ್ನಾಟಕ ಸರ್ಕಾರದ ಯೋಜನೆ ಆಗಿರುವುದರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ಖಾಯಂ ನಾಗರಿಕರಾಗಿರಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಒದಗಿಸಬೇಕು
* ಅರ್ಜಿದಾರರು ರೈತನಾಗಿರಬೇಕು ಮತ್ತು ಕೃಷಿಯಲ್ಲಿ ತೊಡಗಿಕೊಂಡಿರಬೇಕು ತನ್ನ ಹೆಸರಿನಲ್ಲಿಯೇ ಕೃಷಿ ಭೂಮಿ ಹೊಂದಿರಬೇಕು
* ರೈತ ಪ್ರಾಥಮಿಕ ರಾಗಿ ಉತ್ಪಾದಕನಾಗಿರಬೇಕು.
* ಈ ಯೋಜನೆ ನೆರವು ಪಡೆಯಲು ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಕನಿಷ್ಠ 1 ಹೆಕ್ಟೇರ್ ಭೂಮಿ ಇರಬೇಕು.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಗುರುತಿನ ಪುರಾವೆ
* ಅರ್ಜಿದಾರರ ಭೂಮಿಗೆ ಸಂಬಂಧಿಸಿದ ದಾಖಲೆಗಳು
* ಶಾಶ್ವತ ನಿವಾಸಿ ಪ್ರಮಾಣಪತ್ರ
* ವಿಳಾಸ ಪುರಾವೆ
* ಪಡಿತರ ಚೀಟಿ
* ಬ್ಯಾಂಕ್ ಖಾತೆ ವಿವರಗಳು
* ಮೊಬೈಲ್ ನಂಬರ್
* ಭೂ ದಾಖಲೆ ವಿವರಗಳು
* ರೈತನ ಪಾಸ್ಪೋರ್ಟ್ ಗಾತ್ರದ ಫೋಟೋಗಳು
ಅರ್ಜಿ ಸಲ್ಲಿಸುವುದು ಹೇಗೆ:-
* ಮೊದಲಿಗೆ ಅರ್ಜಿದಾರನು ರೈತ ಕೃಷಿ (KSDA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
* ಮುಖಪುಟದಲ್ಲಿ ಸೇವೆಗಳು ಎನ್ನುವ ಆಕ್ಷನ್ ಕಾಣುತ್ತದೆ ಇದರಲ್ಲಿ ಯೋಜನೆ ವಿಭಾಗದಲ್ಲಿ ನೀವು ರೈತ ಸಿರಿ ಎನ್ನುವುದನ್ನು ಕ್ಲಿಕ್ ಮಾಡಬೇಕು, ಈಗ ರೈತ ಸಿರಿ ಯೋಜನೆಯ ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನೀವು ರೈತ ಸಿರಿ ಯೋಜನೆಯ ಸಂಪೂರ್ಣ ವಿವರಗಳನ್ನು ಪಡೆಯಬಹುದು.
* ಸದ್ಯಕ್ಕೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಯಾವುದೇ ಮಾರ್ಗವನ್ನು ಘೋಷಿಸಿಲ್ಲ, ಈ ಹಂತದವರೆಗೆ ತಂತ್ರಾಂಶ ಸಿದ್ಧಪಡಿಸಿದೆ ಮತ್ತು ಶೀಘ್ರದಲ್ಲಿಯೇ ಅಪ್ಲೈ ಮಾಡಲು ಅನುಮತಿ ಕೂಡ ನೀಡಲಿದೆ ಎಂದು ತಿಳಿದು ಬಂದಿದೆ.