ಎಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ಕರ್ನಾಟಕ ರಾಜ್ಯವು ಭೀಕರ ಬರಗಾಲದ ಕಹಿಯನ್ನು ಅನುಭವಿಸಿದೆ. ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲದೆ ಹೋದದ್ದು ಜನ ಸಾಮಾನ್ಯರ ಬದುಕನ್ನು ಬೇಗೆಗೆ ಒಳಪಡಿಸಿತ್ತು. ಉಳಿದ ಎಲ್ಲರಿಗಿಂತಲೂ ರೈತನಿಗೆ ಹೆಚ್ಚಿನ ಹೊಡೆತ ಬಿದ್ದದ್ದು ಎಂದರೆ ತಪ್ಪಾಗಲಾರದು. ಮುಂಗಾರು ಮಳೆಯ ಆರಂಭದಿಂದಲೂ ಕೂಡ ಕೈ ಕೊಟ್ಟ ಮಳೆರಾಯನ ಪ್ರಭಾವದಿಂದ ಬಹುತೇಕ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ತಾಲೂಕುಗಳು ಎಂದು NDRF ಕೈಪಿಡಿ ಸರ್ವೆ ಪ್ರಕಾರ ಘೋಷಣೆಯಾದವು.
ಸಹಜವಾಗಿ ಈ ರೀತಿ ಆರ್ಥಿಕ ನಷ್ಟಕ್ಕೆ ಒಳಗಾದ ರೈತನ ಪಾಲಿಗೆ ನೆರವಾಗುವ ಕಾರ್ಯವನ್ನು ಸರ್ಕಾರಗಳು ಮಾಡುತ್ತಿವೆ. ಅಂತೆಯೇ NDRF ಕೈಪಿಡಿ ಅನ್ವಯ ಬರಪೀಡಿತ ಎಂದು ಘೋಷಣೆಯಾದ ತಾಲೂಕುಗಳ ರೈತರಿಗೆ ಈಗ ಎರಡು ಕಂತುಗಳಲ್ಲಿ ಹಣ ವರ್ಗಾವಣೆ ಆಗಿದೆ. ರಾಷ್ಟ್ರೀಯ ವಿಪತ್ತು ನಿಧಿಯಿಂದ ರಾಜ್ಯದ 27.5 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರದ ಹಣವು ವರ್ಗಾವಣೆ ಆಗಿದೆ.
ಕೇಂದ್ರ ಸರ್ಕಾರದ ಕಡೆಯಿಂದ ಹಣ ಮಂಜೂರಾಗಬೇಕಿತ್ತು ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಟಾಪಟಿಯಲ್ಲಿ ಇದು ತಡವಾಯಿತು ಎಂದೇ ಹೇಳಬಹುದು. ಜನವರಿ ತಿಂಗಳ ಅಂತ್ಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವು ಈ ವಿಷಯದಲ್ಲಿ ವಿಳಂಬ ಮಾಡುತ್ತಿದೆ ಎಂದು ತಾನೇ ಮೊದಲ ಕಂತಿನ ಹಣ ಎಂದು ಪ್ರತಿ ರೈತನ ಖಾತೆಗೂ ರೂ.2000 ಹಣವನ್ನು ವರ್ಗಾವಣೆ ಮಾಡಿದೆ.
ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಹಣ ವರ್ಗಾವಣೆ ಆಗುವಂತೆ ಮಾಡಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ಖಜಾನೆಗೆ ಬರ ಪರಿಹಾರದ ಹಣವು ಮೇ ತಿಂಗಳ ಲೋಕಸಭಾ ಚುನಾವಣಾ ಅಬ್ಬರದ ನಡುವೆ ಬಿಡುಗಡೆ ಆಯಿತು. ಮಳೆಯಾಶ್ರಿತ ಭೂಮಿ, ನೀರಾವರಿ ಭೂಮಿ, ವಾಣಿಜ್ಯ ಬೆಳೆ ಹೀಗೆ ಬೆಳೆಯನ್ನಾದರಿಸಿದ ಸರ್ವೆ ಪ್ರಕಾರವಾಗಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿದೆ.
ಆದರೆ ರಾಜ್ಯ ಸರ್ಕಾರವು ಈ ಹಿಂದೆಯೇ ಮಂಜೂರು ಮಾಡಿದ್ದ ರೂ.2000 ಕಡಿತಗೊಳಿಸಿ ಇನ್ನುಳಿದ ಹಣ ವರ್ಗಾವಣೆ ಮಾಡಲಾಗಿದೆ. ಇದುವರೆಗೂ ದೊರೆತ ಮಾಹಿತಿ ಪ್ರಕಾರವಾಗಿ ಸುಮಾರು 27.5 ಲಕ್ಷ ರಾಜ್ಯದ ರೈತರುಗಳು ಪ್ರಸಕ್ತ ಸಾಲಿನಲ್ಲಿ ಬರ ಪರಿಹಾರದ ಹಣ ಪಡೆದಿದ್ದಾರೆ. ಆದರೆ ಸಾಮಾನ್ಯವೆನ್ನುವಂತೆ ಅನೇಕ ರೈತರು ತಮ್ಮ ಖಾತೆಗಳಿಗೆ ಹಣ ಬಂದಿಲ್ಲ ಎನ್ನುವ ದೂರನ್ನು ಹೊತ್ತಿದ್ದಾರೆ.
ಈಗಾಗಲೇ ಇಲಾಖೆ ವತಿಯಿಂದ ರೈತರಿಗೆ ಸ್ಪಷ್ಟೀಕರಣ ಕೊಡಲಾಗಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗದೇ ಇರುವುದು, ರೈತರ ಬ್ಯಾಂಕ್ ಖಾತೆಗಳು ಆಕ್ಟಿವ್ ಇಲ್ಲದೆ ಇರುವುದು, ಈ ಮೊದಲೇ ನೀಡಿದ್ದ ಸೂಚನೆಯಂತೆ ರೈತರು FRUITS ತಂತ್ರಾಂಶದಡಿ ನೋಂದಾಯಿಸಿಕೊಂಡು ರೈತರು FID ಪಡೆಯದೆ ಇರುವುದು ಇನ್ನಿತರ ಕಾರಣಗಳಿಂದ ಹಣ ವರ್ಗಾವಣೆ ಆಗದೆ ಇರಬಹುದು ಎನ್ನುವ ಸಬೂಬೂ ನೀಡಲಾಗಿದೆ.
ಇವುಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಬರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ ಲಕ್ಷಾಂತರ ರೈತರು ಎಲ್ಲವೂ ಸರಿಯದ್ದು ಕೂಡ ಹಣ ತಲುಪಿಲ್ಲ ಎನ್ನುವ ಆರೋಪ ಮಾಡುತ್ತಿದ್ದರು ಇವರಿಗೆ ಈಗ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರು ಸಮಾಧಾನಕರ ಉತ್ತರವನ್ನು ನೀಡಿದ್ದಾರೆ.
ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿ ಒಂದರಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ ಕಂದಾಯ ಸಚಿವರು ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯದ ರೈತರಿಗೆ ಸಿಗಬೇಕಿದ್ದ ಬರ ಪರಿಹಾರದ ಹಣವನ್ನು ಪಡೆದು ರೈತರ ಖಾತೆಗಳಿಗೆ ಯಶಸ್ವಿಯಾಗಿ ವರ್ಗಾವಣೆ ಮಾಡಿದ್ದೇವೆ. ಇದಾಗಿಯೂ ಕೂಡ ರೈತರು ಹಣ ಪಡೆಯಲಾಗದೆ ಸಮಸ್ಯೆಯಲ್ಲಿದ್ದರೆ ಅಥವಾ ಇನ್ನಿತರ ತೊಂದರೆಗಳಾಗಿದ್ದರೆ.
ಅಂತಹ ನೊಂದ ರೈತರನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗಳಿಗೆ ಈ ಕೂಡಲೇ ಮೂರನೇ ಕಂತಿನ ಹಣವಾಗಿ ರೂ.2800 ರಿಂದ ರೂ.3000 ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ, ಶೀಘ್ರದಲ್ಲಿಯೇ 7 ಲಕ್ಷ ರೈತರಿಗೆ ಮೂರನೇ ಕಂತಿನಲ್ಲಿ ಹಣ ತಲುಪಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನೀವು ಕೂಡ ರೈತರಾಗಿದ್ದು ಬರ ಪರಿಹಾರದ ಹಣ ಪಡೆಯಲಾಗದೆ ಸಮಸ್ಯೆಯಲ್ಲಿದ್ದರೆ ಈ ಕೂಡಲೇ ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ನಿಮ್ಮ ಸಮಸ್ಯೆಯನ್ನು ತಿಳಿಸಿ ಪೂರಕ ದಾಖಲೆಗಳನ್ನು ಒದಗಿಸಿ ಸರ್ಕಾರದ ಈ ನೆರವನ್ನು ಪಡೆದು ಸದುಪಯೋಗಪಡಿಸಿಕೊಳ್ಳಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯು ಹೆಚ್ಚಿನ ರೈತರಿಗೆ ತಲುಪಿಸುವ ಉದ್ದೇಶದಿಂದ ಇತರರೊಡನೆ ಹಂಚಿಕೊಳ್ಳಿ.